Get Updates
Get notified of breaking news, exclusive insights, and must-see stories!

21 ನೇ ಶತಮಾನವೆಂದರೆ.. ಮನ- ಮನೋಗುರಿ ನಡುವಣ ಯುದ್ಧ

ಮಣಿಪಾಲ : ಇಪ್ಪತ್ತೊಂದನೇ ಶತಮಾನದಲ್ಲಿ ಮನಸ್ಸು ಹಾಗೂ ಮನೋಗುರಿಯ ನಡುವೆ ನೈಜ ಯುದ್ಧ ನಡೆಯಲಿದೆ ಎಂದು ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಸಮಿತಿಯ ಪ್ರಧಾನ ನಿರ್ದೇಶಕ ಡಾ.ಆರ್‌. ಎ. ಮಶೇಲ್ಕರ್‌ ಬುಧವಾರ ಹೇಳಿದ್ದಾರೆ.

ಟಿ.ಎ.ಪೈ ಅವರ 18ನೇ ವರ್ಷದ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಬೌದ್ಧಿಕ ಸಂಪತ್ತು- ಅಭಿವೃದ್ಧಿ ಹೊಂದುತ್ತಿರುವ ದೇಶದ ಭವಿತವ್ಯ’ ಎಂಬ ವಿಷಯ ಕುರಿತು ಅವರು ಮಾತನಾಡುತ್ತಿದ್ದರು. ಟಿ.ಎ.ಪೈ ಸ್ಮರಣ ಸಮಿತಿ ಹಾಗೂ ಟಿ.ಎ.ಪೈ ಮೇನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ , ಭಾರತೀಯನ ಜೀನ್‌ಗಳಲ್ಲಿ ಅದ್ಭುತ ಶಕ್ತಿ ಇದೆ. ವೈಜ್ಞಾನಿಕವಾಗಿ ಆಲೋಚಿಸುವ, ತಾಂತ್ರಿಕವಾಗಿ ಮುಂದುವರಿಯುವ ಬೌದ್ಧಿಕ ತಾಕತ್ತು ನಮ್ಮ ಮಂದಿಯಲ್ಲಿದೆ. ಮುಂದೆ ನಮ್ಮ ದೇಶ ನಿರೀಕ್ಷೆಗೂ ಮೀರಿ ಮುಂದುವರೆಯಲು ಇದು ಧನಾತ್ಮಕ ಅಂಶವೂ ಹೌದು ಎಂದು ಮಶೇಲ್ಕರ್‌ ಅಭಿಪ್ರಾಯ ಪಟ್ಟರು.

ನಮ್ಮಲ್ಲಿ ಸಾಂಪ್ರದಾಯಿಕ ಜ್ಞಾನಕ್ಕೆ ಕೊರತೆಯಿಲ್ಲ. ಆದರೆ ಅದನ್ನು ನಿರ್ದಿಷ್ಟ ರೀತಿಯಲ್ಲಿ ಭಟ್ಟಿ ಇಳಿಸುವಂಥ ಹೊಸ ಆಲೋಚನೆ ಬೆಳೆಯಬೇಕಿದೆ. ಹೀಗಾದಲ್ಲಿ ಮಿದುಳಿನಲ್ಲಿ ಹುದುಗಿರುವ ಜ್ಞಾನದ ತಿರುಳನ್ನು ಜನೋಪಯೋಗಿ ಅಸ್ತ್ರವಾಗಿ ಬಳಸಿಕೊಳ್ಳಲು ಸಾಧ್ಯ ಎಂಬ ಸಂದೇಶ ಕೊಟ್ಟರು.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯ ಕಾರ್ಯದರ್ಶಿಯೂ ಆಗಿರುವ ಡಾ. ಮಶೇಲ್ಕರ್‌, ನಮ್ಮ ಹೊಸತನಗಳನ್ನು ರಾಷ್ಟ್ರೀಯ ದಾಖಲೆಗೆ ಸೇರಿಸಿ ಸಂರಕ್ಷಿಸಬೇಕು. ಹೀಗೆ ಮಾಡಿದಲ್ಲಿ ನಮ್ಮ ಬೌದ್ಧಿಕ ಹಕ್ಕುಗಳು ಹಾಗೂ ಪೇಟೆಂಟ್‌ಗೆ ಭದ್ರತೆ ದೊರೆಯುತ್ತದೆ. ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳನ್ನೂ ಡಿಜಿಟಲ್‌ ಗ್ರಂಥಾಲಯಗಳಲ್ಲಿ ಕಾಪಿಡಬೇಕು. ನಮ್ಮ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಗೌಪ್ಯ ಹೊರಗೆಡವಿ ಈಗಾಗಲೇ 102ಕ್ಕೂ ಹೆಚ್ಚು ಪದ್ಧತಿಗಳನ್ನು ಕಳಕೊಂಡಿದ್ದೇವೆ. 1990ರಲ್ಲಿ ಯಾವ ಪೇಟೆಂಟ್‌ ಕೂಡ ಹೊಂದಿರದ ನಾವು ಪ್ರಸ್ತುತ 100 ಪೇಟೆಂಟ್‌ಗಳನ್ನು ಹೊಂದಿದ್ದೇವೆ. ಇದೊಂದೇ ಸಮಾಧಾನಕರ ಎಂದರು.

ಅರಿಶಿನ, ಬಾಸುಮತಿ ಹಾಗೂ ಬೇವಿನ ಪೇಟೆಂಟ್‌ ಕುರಿತಂತೆ ಭಾರತ ಎತ್ತುತ್ತಿರುವ ಸೊಲ್ಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಇತರ ದೇಶಗಳನ್ನ ಬಡಿದೆಬ್ಬಿಸಿದೆ. ತಮ್ಮ ಸಾಂಪ್ರದಾಯಿಕ ಪದ್ಧತಿಗಳ ಪೇಟೆಂಟ್‌ ಕುರಿತು ಯೋಚನೆಗೆ ಹಚ್ಚಿದೆ ಎಂದು ಮಶೇಲ್ಕರ್‌ ಹೇಳಿದರು.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+