ಹೀಗೂ ಆಗುತ್ತೆ.. ಗಂಡು ಮುತ್ತಿಗೊಂದು ಸಂಪು!
ಸಿಡ್ನಿ : ಹಿಂದೊಮ್ಮೆ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ತುಟಿಯನ್ನು ಪುತ್ರಿ ಪೂಜಾ ಭಟ್ ಚುಂಬಿಸಿದ ಸುದ್ದಿ ಕೇಳಿ ಮಹೇಶ್ ಭಟ್‌ಗಿಂತ ಜನರೇ ಬಿಸಿಬಿಸಿ ಹಾಗೂ ಕಸಿವಿಸಿಯಾಗಿದ್ದರು. ನಮ್ಮ ದೇಶದಲ್ಲಿ ಪ್ರೀತಿ ತೋರಿಸಲು ಉದುರಿಸುವ ಮುತ್ತು ತುಟಿವರೆಗೂ ಹೋದರೆ ಏನೋ ಮುಜುಗರ. ಈಚೆಗೆ ಮಾಧ್ಯಮಗಳಲ್ಲಿ ಮೂಡುವ ವಿದೇಶೀ ಅಧರ ಚುಂಬನ ದೃಶ್ಯಗಳು ಇದು ಮಾಮೂಲೆನ್ನುವಂತೆ ಮಾಡಿವೆಯಾದರೂ, ಒಂದು ಗಂಡು ಮತ್ತೊಂದು ಗಂಡಿನ ತುಟಿಯನ್ನು ದೀರ್ಘ ಕಾಲ ಚುಂಬಿಸಿದರೆ ? ಹುಚ್ಚು, ಬೆಪ್ಪು... ಹೀಗೇ ಏನೆಲ್ಲಾ ಅಂದು ಬಿಡುತ್ತೇವೆ. ಜೊತೆಗೆ ಹುಬ್ಬನ್ನೂ ಏರಿಸುತ್ತೇವೆ.
ಇಂಥ ‘ಗೇ’ ಪ್ರೀತಿ ತೋರಿಸುವುದನ್ನು ಬ್ರಿಸ್ಬೇನ್ ಪೊಲೀಸರು ನಿಷೇಧಿಸಿದ್ದಕ್ಕೆ, ಸುಮಾರು 50 ಜೋಡಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದಾರೆ. ಬ್ರಿಸ್ಬೇನ್ ನಗರದ ಪಾರ್ಕಿನಲ್ಲಿ ಸಂಸಾರಸ್ಥರು, ಮಕ್ಕಳು ಬರುತ್ತಾರೆ. ಇವರೆಲ್ಲರೆದುರು ಪುರುಷ- ಪುರುಷನ ಅಸಹಜವಾದ ಅಧರ ಚುಂಬನ ಶೋಭೆ ತರುವಂಥದಲ್ಲ ಎಂಬುದು ಪೊಲೀಸರ ವಾದ.
ಪ್ರೀತಿಗೆ ಗಂಡು- ಹೆಣ್ಣು ಎಲ್ಲ ಒಂದೆ. ಒಂದು ಗಂಡು ಒಂದು ಹೆಣ್ಣು ಪರಸ್ಪರ ಚುಂಬಿಸಿದರೆ ಅದು ಸಹ್ಯ. ಅದೇ ಒಂದು ಗಂಡು ಇನ್ನೊಂದು ಗಂಡಿಗೆ ಚುಂಬಿಸಿದರೆ ಅದು ಪ್ರಮಾದ. ಇದ್ಯಾವ ನ್ಯಾಯ ಎಂದು ಪ್ರಶ್ನೆ ಎಸೆಯುತ್ತಾರೆ ಹೋಮೋ ಸೆಕ್ಷುಯಲ್ಸ್ ಪರ ವಕಾಲತ್ತು ವಹಿಸಿ, ಪ್ರತಿಭಟನೆ ನಡೆಸಿದ ತಂಡದ ಮುಖ್ಯಸ್ಥ ಮಾರ್ಕ್ ಪೆಂಡಲ್‌ಟನ್.
‘ಗೇ’ ಪ್ರೇಮಿಗಳ ಪ್ರತಿಭಟನೆಗೆ ಪೊಲೀಸರು ಮಾತ್ರ ಕೊನೆಗೂ ಜಗ್ಗಲಿಲ್ಲ. ಪಾರ್ಕಿಗೆ ಬರುವ ಜನರ ಒಟ್ಟಾರೆ ಹಿತಾಸಕ್ತಿಯೇ ನಮಗೆ ಮುಖ್ಯ ಎಂಬ ವಾದಕ್ಕೇ ಅಂಟಿಕೊಂಡುಬಿಟ್ಟರು. ಬಹುಶಃ ಮುತ್ತಿಗೊಂದು ಪ್ರತಿಭಟನೆ ಸುದ್ದಿ ಹೊರ ಬೀಳುತ್ತಿರುವುದು ಇದೇ ಮೊದಲಿರಬೇಕು; ಅದೂ ಅಸಹಜ ಮುತ್ತಿಗೆ ?.
(ಯುಎನ್‌ಐ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications