ಹಿಂದೂ ಬದಲು ವೀರಶೈವ ಎಂದು ಬರೆಸಿಎನ್ನುವುದು ರಾಜಕೀಯ ಸ್ಟಂಟ್
ಗುಲ್ಬರ್ಗಾ : ಬೌದ್ಧ ಧರ್ಮ, ಸಿಖ್ ಧರ್ಮಗಳಂತೆಯೇ ಲಿಂಗಾಯತ ಅಥವಾ ವೀರಶೈವ ಧರ್ಮವೂ ಹಿಂದೂ ಧರ್ಮದ ಒಂದು ಶಾಖೆ. ಇದು ಹಿಂದೂ ಧರ್ಮದಿಂದಲೇ ಹೊರಹೊಮ್ಮಿದ ಧರ್ಮವಾಗಿದೆ ಎಂದು ಶರಣ ಬಸವೇಶ್ವರ ದಾಸೋಹ ಪೀಠಾಧಿಪತಿ ಡಾ. ಶರಣ ಬಸವಪ್ಪ ಅಪ್ಪ ಪ್ರತಿಪಾದಿಸಿದ್ದಾರೆ.
ಬಸವಣ್ಣನವರೂ ಸೇರಿದಂತೆ ಎಲ್ಲ ಶರಣರ ವಚನಗಳಲ್ಲಿ ನಾವು ಶಿವಸ್ತುತಿಯನ್ನು ಕಾಣುತ್ತೇವೆ. ಓಂ ನಮಃ ಶಿವಾಯ ಎಂಬ ಪ್ರಾರ್ಥನಾ ವಾಕ್ಯ ಶರಣರ ಸಾಹಿತ್ಯದಲ್ಲಿ ಸಾಕಷ್ಟು ಕಡೆ ಹೊರಹೊಮ್ಮಿದೆ. ವೀರಶೈವರು ಅಥವಾ ಲಿಂಗಾಯತರು ದಸರಾ, ಯುಗಾದಿ, ಸಂಕ್ರಾಂತಿ, ದೀಪಾವಳಿ, ಗಣಪತಿ ಹಬ್ಬ, ಮಹಾ ಶಿವರಾತ್ರಿಯೇ ಮೊದಲಾದ ಎಲ್ಲ ಹಿಂದೂಗಳ ಹಬ್ಬವನ್ನೂ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ವಸ್ತು ಸ್ಥಿತಿ ಹೀಗಿರುವಾಗ ವೀರಶೈವರು ಹಿಂದೂಗಳಲ್ಲ ಎಂದರೆ ಹೇಗೆ? ಎಂದು ಸೋಮವಾರ ತಮ್ಮ ನಿವಾಸದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಡಾ. ಅಪ್ಪಾ ಪ್ರಶ್ನಿಸಿದ್ದಾರೆ.
ಹಿಂದೂ ಧರ್ಮ ಕಾಯಿದೆ ಅನ್ವಯವಾಗುವ ಇತರ ಧರ್ಮಗಳಾದ ಜೈನ, ಬೌದ್ಧ, ಸಿಖ್‌ಗೆ ನೀಡಿರುವಂತೆ ವೀರಶೈವ ಧರ್ಮಕ್ಕೂ ಪ್ರತ್ಯೇಕ ಕಾಲಂ ಕೊಡಬೇಕು ಎಂಬ ಬೇಡಿಕೆ ಈಡೇರಿಲ್ಲ ಎಂದ ಅವರು, ಅಪ್ಪನ ಜೊತೆ ಜಗಳ ಕಾದು ಮಗ ಮನೆಯಿಂದ ದೂರವಾದರೂ, ಜನ ಆತನನ್ನು ಇಂತಹವರ ಮಗ ಎಂದೇ ಕರೆಯುತ್ತಾರೆ ಎಂಬ ಉದಾಹರಣೆ ನೀಡುವ ಮೂಲಕ ಹಿಂದೂ ಧರ್ಮ ಹಾಗೂ ವೀರಶೈವ ಧರ್ಮದ ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸಿದರು.
ಫೆಬ್ರವರಿಯಿಂದ ಆರಂಭವಾಗಲಿರುವ ಜನಗಣತಿಯಲ್ಲಿ ಹಿಂದೂ ಧರ್ಮ ಎಂಬ ಬದಲು ವೀರಶೈವ ಧರ್ಮ ಎಂದು ಬರೆಸಿ ಎಂದು ಕರೆಕೊಡುವುದು ರಾಜಕೀಯ ಸ್ಟಂಟ್ ಎಂದು ಬಣ್ಣಿ ಸಿದ ಅವರು, ಇದು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಎಂದೂ ಆರೋಪಿಸಿದರು. ಜಾತ್ಯತೀತತೆಯೇ ಇವರ ದೃಷ್ಟಿಯಾದರೆ, ಯಾವ ಧರ್ಮದ ಹೆಸರನ್ನೂ ಬರೆಸಬಾರದು. ಕೇವಲ ಆರ್ಥಿಕ, ಶೈಕ್ಷಣಿಕ ಹಾಗೂ ಕುಟುಂಬದ ಮಾಹಿತಿ ಮಾತ್ರ ಕೊಟ್ಟರೆ ಸಾಕು ಎಂದರು.
ಈಗ ಧರ್ಮದ ಹೆಸರು ಬರೆಸುವ ಸಂಬಂಧ ಅನಗತ್ಯ ಗೊಂದಲ ಉಂಟು ಮಾಡಲಾಗಿದೆ ಎಂದ ಅವರು, ಯಾವುದೇ ಧರ್ಮವನ್ನು ಸರಕಾರ ಮಾನ್ಯ ಮಾಡಲು ಸಾಧ್ಯವೇ ಎಂದು ನಗುತ್ತಾ ಪ್ರಶ್ನಿಸಿದರು.
(ಕನ್ನಡಇನ್‌ಪೋ ವಾರ್ತೆ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications