ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನವೀಯತೆಯಿಂದ ವೀರಪ್ಪನ್‌ಗೆ ಕ್ಷಮೆ ನೀಡಿ -ಶರಣ ಸಮ್ಮೇಳನ

By Staff
|
Google Oneindia Kannada News

ಹುನಗುಂದ : ಕರ್ನಾಟಕ ಮತ್ತು ತಮಿಳು ನಾಡು ಸರಕಾರಗಳು ವೀರಪ್ಪನ್‌ನನ್ನು ಹಿಡಿಯುವ ನಾಟಕ ಆಡುವ ಮೂಲಕ ವೃಥಾ ಹಣ ಖರ್ಚು ಮಾಡುತ್ತಿವೆ. ಮಾನವೀಯತೆಯ ದೃಷ್ಟಿಯಿಂದ ನರಹಂತಕ ವೀರಪ್ಪನ್‌ಗೆ ಕ್ಷಮಾದಾನ ನೀಡಬೇಕು ಎಂದು ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.

ಅವರು ಸೋಮವಾರ, ಕೂಡಲ ಸಂಗಮದಲ್ಲಿ ನಡೆದ ಶರಣ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡುತ್ತಿದ್ದರು. ಸಮಾರಂಭವನ್ನು ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯಕ್ಷ ಸುಭಾಷ ಪಾಟೀಲ ಉದ್ಘಾಟಿಸಿದರು. ಚನ್ನ ಬಸವರಾಜ ಸ್ವಾಮೀಜಿ ಪ್ರಾಸ್ತಾವಿಕ ಭಾಷಣ ಮಾಡಿದರು.

ಶರಣ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು :

  • ವೀರಪ್ಪನ್‌ ಮತ್ತು ನಕ್ಸಲೈಟರು ಶರಣಾದರೆ, ಸರಕಾರ ಕ್ಷಮಾದಾನ ನೀಡಬೇಕು.
  • ವೀರಶೈವ ಮಹಾಸಭಾದವರು, ವೀರಶೈವ ಪದದ ಬದಲಿಗೆ ಲಿಂಗಾಯತ ಪದ ಬಳಸಬಾರದು. ಬಳಸಿದಲ್ಲಿ ಶರಣ ಮೇಳ ನ್ಯಾಯಾಲಯದ ಕಟ್ಟೆ ಏರುತ್ತದೆ.
  • ವೀರಶೈವ ಮಹಾಸಭಾ ಮತಾಂಧ ಸಂಸ್ಥೆ , ಜಿಎಸ್‌ಎಸ್‌ ಮತ್ತು ಚಿದಾನಂದ ಮೂರ್ತಿ ಅವರಿಗೆ ಬಹಿಷ್ಕಾರ ಹಾಕಿರುವುದು ಖಂಡನೀಯ.
  • ಬಸವ ಜಯಂತಿಗೆ ಕಡ್ಡಾಯವಾಗಿ ಶುಭಾಶಯ ಬರೆಯಬೇಕು. ದಿನ ಬದುಕಿನದಲ್ಲಿ ಲಿಂಗಾಯತರು ಗಣ ಲಾಂಛನವನ್ನು ಬಳಸಬೇಕು.
(ಇನ್ಫೋ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X