ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಅದುಮಿಟ್ಟಿಕೊಂಡಿರುವ ವಿಷಯ ಮನದಲ್ಲಿ ಗುನುಗುನಿಸಿ, ಏನೂ ಮಾಡಗೊಡುತ್ತಿಲ್ಲ. ಸಾಕು, ಯಾರೊಬ್ಬರನ್ನಾದರೂ ನಂಬಿ ಹೇಳಿಬಿಡಿ.ವೃಷಭ : ಲಾಟರಿ ಹೊಡೆಯುವ ಛಾನ್ಸಿದೆ. ಅದರ ಬೆನ್ನಲ್ಲೇ ಒಂದು ಕೆಟ್ಟ ಸುದ್ದಿಯೂ ಕೇಳಿಬರುವ ಅಪಾಯ. ಹಾಗಂತ ತಲೆಕೆಡಿಸಿಕೊಳ್ಳಬೇಕಿಲ್ಲ. ಥಿಂಕ್ ಎ ವೈಲ್ ಬಿಫೋರ್ ಟೇಕಿಂಗ್ ಎ ಡಿಸಿಷನ್.
ಮಿಥುನ : ಅತ್ತದ್ದು ಸಾಕು. ಸದ್ಯಕ್ಕೆ ಬತ್ತಿರೋದು ಕಣ್ಣಷ್ಟೇ. ಜೀವನಕ್ಕೂ ಅದೇ ಗತಿ ತರಬೇಡಿ. ಮೇಲೇಳಿ. ನೆಮ್ಮದಿಯ ನಾಳೆ ನಿಮ್ಮದಾಗಲಿದೆ.
ಕಟಕ : ಎದೆಯ ಕಸವನು ಗುಡಿಸಿ, ರಂಗವಲ್ಲಿಯನಿರಿಸುವ ಆ ಜೀವ ಗೇಣಷ್ಟೇ ದೂರ. ಜಡ ತಂದಿರುವ ಜಂಜಡ ತೊಳೆಯಲು ಜಳಕಿಸುವ ಆ ಜೀವವನ್ನು ತುಂಬು ಮನಸ್ಸಿಂದ ಬರಮಾಡಿಕೊಳ್ಳಿ.
ಸಿಂಹ : ಕಂಪ್ಯೂಟರ್ ಕೀಲಿಗಳ ನಡುವೆ ಕಳೆದು ಹೋಗುವ ನೀವು ಆಪ್ತರಿಗೆ ಮಾಡಿರುವ ಪ್ರಾಮಿಸ್ ಮರೆತುಹೋಗುವ ಸಂಭವ ಇದೆ. ಒಂದು ಚೀಟಿಯಲ್ಲಿ ಬರೆದಿಟ್ಟುಕೊಳ್ಳಿ.
ಕನ್ಯಾ : ಕಲಿತ ಲಲಿತ ಕಲೆಯಿಂದ ನಿಮಗೆ ಸಾರ್ಥಕ್ಯಭಾವ. ಬಹು ದಿನಗಳ ತಾಲೀಮು ನೀವು ಅಂದುಕೊಂಡಿರುವವರನ್ನು ಮೆಚ್ಚಿಸಲಿದೆ. ಕೀಪ್ ಇಟ್ ಅಪ್.
ತುಲಾ : ಷೇರುಗಳ ತಲೆನೋವಲ್ಲಿ ಮುಖ್ಯವಾದ ಬಿಜಿನೆಸ್ಸನ್ನೇ ಮರೆತಿರುವಿರಿ. ಒಂದು ದಿನದ ಮಟ್ಟಿಗಾದರೂ ಷೇರುಗಳನ್ನು ಒತ್ತಟ್ಟಿಗಿರಿಸಿ, ಹರಿದು ಬರೋ ಲಕ್ಷ್ಮಿಯನ್ನು ಮನೆತುಂಬಿಸಿಕೊಳ್ಳಿ.
ವೃಶ್ಚಿಕ : ಕೂದಲೆಳೆಯಷ್ಟೇ ಅಂತರದಲ್ಲಿ ನಿಮಗಿಂದು ಸೋಲು. ಅದು ಯಾವ ಕ್ಷೇತ್ರದಲ್ಲಾದರೂ ಆಗಿರಬಹುದು. ಮನೆಯಲ್ಲಿಷ್ಟು ನೆಮ್ಮದಿ ಸಿಗಲಿದ್ದು, ಅದು ಎಲ್ಲವನ್ನೂ ಮರೆಸಲಿದೆ.
ಧನಸ್ಸು : ಅಭ್ಯಾಗತರ ಆಗಮನ. ನಿಮ್ಮ ಪ್ರೋಗ್ರಾಂ ಟುಸ್ಸು. ಇರೋದರಲ್ಲೇ ಖುಷಿ ಕಂಡುಕೊಳ್ಳಿ ಅಂತ ಹೇಳೋದು ಬಿಟ್ಟರೆ, ನಿಮ್ಮ ವಿಷಯದಲ್ಲಿ ನಮಗೆ ಬೇರೇನೂ ತೋಚುತ್ತಿಲ್ಲ.
ಮಕರ : ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ. ಮನಸ್ಸಲ್ಲಿ ಹೊಯ್ದಾಡುತ್ತಿರುವ ಸಾಲುಗಳನ್ನು ಕವನವಾಗಿಸಿ. ಬಹುದಿನಗಳ ತುಮುಲ ತೀರೀತು.
ಕುಂಭ : ಬಿಸಿ ತುಪ್ಪ ಬಾಯಲ್ಲಿ. ಸ್ವಲ್ಪ ಏಮಾರಿದ್ದಕ್ಕೆ ದೊಡ್ಡ ದಂಡವನ್ನೇ ತೆರುತ್ತಿರುವಿರಿ. ಸ್ವಲ್ಪ ತಾಳೆ ಹಾಕಿ, ನಿಮ್ಮ ಕಾರ್ಯತಂತ್ರ ಬದಲಿಸಿ. ಪರಿಸ್ಥಿತಿ ತಿಳಿಯಾಗುತ್ತೆ.
ಮೀನ : ಗಂಟಲಲ್ಲಿ ಸಿಕ್ಕಿರುವ ಗುಕ್ಕು ಸರಾಗ ಒಳ ಹರಿಯಲಿದೆ. ಇಷ್ಟು ದಿನ ನೀವು ಹೇಳಲು ಚಡಪಡಿಸುತ್ತಿರುವುದನ್ನು ಇವತ್ತು ಭಂಡ ಧೈರ್ಯ ಮಾಡಿ ಹೇಳಿಬಿಡುತ್ತೀರಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications