ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂಬ್ಳೆ ಈಸ್‌ ಆನ್‌ ಸಿಕ್‌ಲೀವ್‌

By Staff
|
Google Oneindia Kannada News

ನವದೆಹಲಿ : ಫ್ಲಿಪ್ಪರ್‌ ಮಾಂತ್ರಿಕ ಕರ್ನಾಟಕದ ಅನಿಲ್‌Anil kumble ಕುಂಬ್ಳೆ ಬಲ ಭುಜದ ನೋವು ಇನ್ನೂ ಕ್ಷೀಣಿಸಿಲ್ಲವಾದ್ದರಿಂದ ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ ಅವರು ಆಡುತ್ತಿಲ್ಲ. ಸರಿ ಸುಮಾರು ಇನ್ನೂ 4 ತಿಂಗಳ ಕಾಲ ಅವರು ಕಣದಿಂದ ಹೊರಗುಳಿಯಲಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜಯವಂತ ಲೆಲೆ ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ಬುಧವಾರ (ಜನವರಿ 17) ದಕ್ಷಿಣ ಆಫ್ರಿಕದ ಪ್ರಸಿದ್ಧ ಮೂಳೆ ತಜ್ಞ ಮಾರ್ಕ್‌ ಫರ್ಗ್ಯೂಸನ್‌, ಕುಂಬ್ಳೆ ಬಲ ಭುಜಕ್ಕೆ ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ. ಸುಮಾರು 4 ತಿಂಗಳ ಕಾಲ ವಿಶ್ರಾಂತಿ ಬೇಕಿರುವುದರಿಂದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಹಾಗೂ ಒಂದು ದಿನದ ಪಂದ್ಯಗಳ ಸರಣಿ ಮತ್ತು ಶಾರ್ಜಾ ಟೂರ್ನಿಯಲ್ಲಿ ಅವರು ಆಡುವುದಿಲ್ಲ ಎಂದು ಲೆಲೆ ಹೇಳಿದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ 276 ವಿಕೆಟ್‌ ಕಿತ್ತಿರುವ ಕುಂಬ್ಳೆ ಅವರಂಥ ಯಶಸ್ವಿ ಬೌಲರ್‌ ವಿಶ್ವ ಚಾಂಪಿಯನ್‌ ತಂಡದ ವಿರುದ್ಧದ ಸ್ಪರ್ಧಾತ್ಮಕ ಟೂರ್ನಿಯಲ್ಲಿ ಆಡಲಾಗುತ್ತಿಲ್ಲವಲ್ಲ ಎಂಬುದಕ್ಕೆ ನಮಗೆ ವಿಷಾದವಿದೆ. ಭಾರತಕ್ಕೆ ಇದೊಂದು ದೊಡ್ಡ ನಷ್ಟವೂ ಹೌದು ಎಂದರು.

ನವೆಂಬರ್‌ನಲ್ಲಿ ನಡೆದ ಶಾರ್ಜಾ ಟೂರ್ನಿಯಲ್ಲಿ ಕುಂಬ್ಳೆಗೆ ಬಲ ಭುಜದ ನೋವು ಕಾಣಿಸಿಕೊಂಡಿತು. ಈ ಕಾರಣಕ್ಕಾಗೇ ಜಿಂಬಾಬ್ವೆ ವಿರುದ್ಧದ ಟೆಸ್ಟ್‌ ಪಂದ್ಯಗಳಲ್ಲೂ ಅವರು ಆಡಲಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ ಮತ್ತೆ ಆಡುವ ಅವರ ಆಸೆಗೆ ಉಲ್ಬಣಿಸಿದ ನೋವು ತಣ್ಣೀರೆರಚಿತು.

ಬೆಂಗಳೂರಲ್ಲಿ ನೆಟ್‌ ಪ್ರಾಕ್ಟೀಸ್‌ ಮಾಡೋವಾಗ ನನಗೆ ತುಂಬಾ ದೊಡ್ಡ ತೊಂದರೆಯೇ ಇದೆ ಎಂಬುದರ ಅರಿವಾಯಿತು. ಹೀಗಾಗಿ ಡಾ. ಫರ್ಗ್ಯೂಸನ್‌ ಅವರನ್ನು ಕಂಡೆ. ನಾನು ಮತ್ತೆ ಕಣಕ್ಕೆ ಪೂರ್ತಿ ಫಿಟ್‌ ಆಗೇ ವಾಪಸ್ಸು ಬರಬೇಕೆಂಬುದು ನನ್ನಾಸೆ ಎನ್ನುತ್ತಾರೆ ಕುಂಬ್ಳೆ. ಈ ಹಿಂದೆ ಕರ್ನಾಟಕದ ಇನ್ನೊಬ್ಬ ಆಟಗಾರ ಮೈಸೂರ್‌ ಎಕ್ಸ್‌ಪ್ರೆಸ್‌ ಜಾವಗಲ್‌ ಶ್ರೀನಾಥ್‌ ಅವರಿಗೂ ಇದೇ ರೀತಿಯ ತೊಂದರೆ ಕಾಣಿಸಿಕೊಂಡಿತ್ತು. ಡಾ.ಫರ್ಗ್ಯೂಸನ್‌ ಅವರೇ ಶ್ರೀನಾಥ್‌ಗೂ ಶಸ್ತ್ರಚಿಕಿತ್ಸೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

(ಎಎಫ್‌ಪಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X