Get Updates
Get notified of breaking news, exclusive insights, and must-see stories!

‘ಜಾತಿಬೀಜ ಬಿತ್ತುವ ಸ್ವಾಮಿಗಳಿಂದ ಸಮಾಜ ಹಾಳು’

ಬೆಂಗಳೂರು : ರಾಜಕಾರಣಿಗಳು ಮಠಾಧಿಪತಿಗಳ ಬಗ್ಗೆ ಮಾತನಾಡುವುದೇ ಇಲ್ಲ. ಮುಂದಿನ ತಮ್ಮ ರಾಜಕೀಯ ಭವಿಷ್ಯಕ್ಕೆ ಇದುವೇ ಮುಳುವಾದೀತೆಂಬ ಭೀತಿ ಅವರಿಗೆ. ಆದರೂ, ಧೈರ್ಯ ಮಾಡಿ ಸೋಮವಾರ ರಾಜ್ಯದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಮಠಾಧಿಪತಿಗಳ ವಿರುದ್ಧ ಒಂದು ನಾಲ್ಕು ಮಾತು ಆಡೇ ಬಿಟ್ಟರು.

ನಾಡಿನ ಹೆಚ್ಚಿನ ಪಾಲು ಸ್ವಾಮೀಜಿಗಳು ತಮ್ಮ ತಮ್ಮ ಜಾತಿಗೇ ಸೀಮಿತವಾಗಿದ್ದು, ಇದರಿಂದಾಗಿ ಸಾಮಾಜಿಕ ಜೀವನದಲ್ಲಿ ಏರುಪೇರು ಕಾಣಬರುತ್ತಿದೆ. ಜಾತಿಗೆ ಅಂಟಿಕೊಂಡ ಸ್ವಾಮಿಗಳ ಪ್ರಭಾವ ಹಾಗೂ ಧೋರಣೆಯಿಂದ ಸಮಾಜ ಒಡೆಯುವ ಭೀತಿಯೂ ಇದೆ ಎಂದು ಖರ್ಗೆ ಅಭಿಪ್ರಾಯಪಟ್ಟರು.

ಸ್ವಾಮೀಜಿಗಳ ಬಗ್ಗೆ ಮಾತನಾಡುವುದೇ ವಿವಾದದ ವಿಚಾರ. ಮಾತನಾಡಿದರೆ, ಅವರಿಗೆ ಧರ್ಮ ವಿರೋಧಿ ಎಂಬ ಪಟ್ಟ ಕಟ್ಟುತ್ತಾರೆ ಎಂದೇ ಮಾತಿಗಾರಂಭಿಸಿದ ಖರ್ಗೆ, ಕೈಗಾರಿಕಾ ರಂಗದಲ್ಲಿ ಉದಾರೀಕರಣ ಬಂದಿದೆ. ಆದರೆ, ಅದು ಸಾಮಾಜಿಕ ರಂಗದಲ್ಲಿ ಉದಾರೀಕರಣ ಸುಳಿದಿಲ್ಲ ಎಂದರು. ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮಿಜಿ ಅವರ ದಶ ವಾರ್ಷಿಕೋತ್ಸವ ಪೀಠಾರೋಹಣ ಆಚರಣೆ ಅಂಗವಾಗಿ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಮೌಢ್ಯ ಹೆಚ್ಚುತ್ತಿದೆ. ಸ್ವಾಮೀಜಿಗಳು ತಮ್ಮ ತಮ್ಮ ಜಾತಿಯನ್ನು ಬೆಳೆಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ. ಕೆಲವು ಸ್ವಾಮೀಜಿಗಳ ಬಳಿ ಹೆಲಿಕಾಪ್ಟರ್‌ ಇದೆ. ಐಷಾರಾಮಿ ಕಾರುಗಳಿವೆ. ಆದರೆ, ವೀರಭದ್ರ ಚೆನ್ನಮಲ್ಲ ಸ್ವಾಮೀಜಿಗಳಿಗೆ ಆರ್ಥಿಕ ಬೆಂಬಲವೂ ಇಲ್ಲ. ದೊಡ್ಡ ಕಾರೂ ಇಲ್ಲ. ಆದರೂ ಅವರು 10 ವರ್ಷಗಳಿಂದ ಶೋಷಿತರ ಪರ ಹೋರಾಡುತ್ತಿದ್ದಾರೆ. ತಮ್ಮ ವಿಚಾರಧಾರೆಯನ್ನು ಯಾರಿಗೂ ಹೆದರದೆ ಹೇಳುತ್ತಾರೆ. ಹೀಗಾಗೇ ಇವರಿಗೆ ಸಮುದಾಯದಲ್ಲಿ ಅಪಾರ ಗೌರವ ಇದೆ ಎಂದರು.

ಕಾರ್ಮಿಕ ಮುಖಂಡರಾದ ಸೂರ್ಯನಾರಾಯಣ ರಾವ್‌, ವೆಂಕಟರಾಮ್‌, ರಾಜ್ಯ ಬಿ.ಜೆ.ಪಿ. ಅಧ್ಯಕ್ಷ ಬಸವರಾಜ ಪಾಟೀಲ್‌ ಸೇಡಂ, ಮಾಜಿ ಸಚಿವರಾದ ಪಿ.ಜಿ.ಆರ್‌. ಸಿಂಧ್ಯಾ, ಲೋಕ ಸಭಾ ಸದಸ್ಯ ಕೆ.ಎಚ್‌. ಮುನಿಯಪ್ಪ ಮೊದಲಾದವರು ಚೆನ್ನಮಲ್ಲ ಸ್ವಾಮಿಗಳ ವ್ಯಕ್ತಿತ್ವ ಹಾಗೂ ಸೇವೆಯನ್ನು ಕೊಂಡಾಡಿದರು.

ನಾಡಿನ ಜನಪರ ಮತ್ತು ಪ್ರಗತಿಪರ ಹೋರಾಟಗಾರರಾದ ಡಿ.ಎಂ. ತಿಮ್ಮರಾಯಪ್ಪ, ಎಲ್‌.ಜಿ. ಹಾವನೂರ್‌, ಶಿರ್ತಾಡಿ ವಿಲಿಯಂ ಪಿಂಟೋ, ಪಂಪಾಪತಿ, ಪುಟ್ಟಣ್ಣಯ್ಯ, ಡಾ. ಸಿದ್ಧನಗೌಡ ಪಾಟೀಲ್‌, ನಾಗೇಶ್‌ ಹೆಗಡೆ, ಗೀತಾ ಮೆನೆನ್‌ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

( ಕನ್ನಡಇನ್‌ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+