ಆತ್ಮ-ಹ-ತ್ಯೆ ಮಾಡಿ-ಕೊಂ-ಡ ರೈತ-ನ ಕುಟುಂ-ಬ-ಕ್ಕೆ ಸರ್ಕಾ-ರ-ದಿಂ-ದ ಲಕ್ಷ ರು. ನೀಡಿ-ಕೆ
ಹುಬ್ಬ-ಳ್ಳಿ : ಆಲೂಗ-ಡ್ಡೆ ಬೆಲೆ ಕುಸಿ-ತ-ದಿಂ-ದ ಕಂಗಾ-ಲಾ-ಗಿ- ಆತ್ಮ-ಹ-ತ್ಯೆ- ಮಾಡಿ-ಕೊಂ-ಡಿ-ರು-ವ ನವ-ಲೂ-ರಿ-ನ ರೈತ-ನ ಕುಟುಂ-ಬ-ಕ್ಕೆ ಭಾರೀ ಮತ್ತು ಮಧ್ಯಮ ನೀರಾ-ವ-ರಿ ಸಚಿವ ಎಚ್.ಕೆ. ಪಾಟೀಲ್, ಮಂಗಳವಾರ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದರು.
ಕುಟುಂಬದ ಒಬ್ಬ ವ್ಯಕ್ತಿಗೆ ಸರಕಾರಿ ಕೆಲಸ ಕೊಡಿಸುವುದಾಗಿ ಇದೇ ಸಂದರ್ಭದಲ್ಲಿ ಸಚಿವರು ಭರವಸೆ ನೀಡಿದರು. ಬೆಲೆ ಕುಸಿತದಿಂದಾಗಿ ಹೃದಯಾಘಾತದಿಂದ ನಿಧನರಾರಾದ ಇನ್ನೊಬ್ಬ ರೈತನ ಮನೆಗೂ ಸಚಿವರು ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ. ನಂತರ ಸಚಿವರು ಸುದ್ದಿಗಾರರೊಂದಿಗೆ ಮಾತನಾಡುತ್ತ , ಧಾರವಾಡದಲ್ಲಿ ಸರಕಾರವು ಆಲೂಗಡ್ಡೆ ಖರೀದಿಯನ್ನು ಈಗಾಗಲೇ ಮುಗಿಸಿದೆ. ರೈತರಿಗೆ ಬೇರರ್ ಚೆಕ್ ಮೂಲಕ ಹಣ ಒದಗಿಸಲಾಗುವುದು. ಜೋಳ ಖರೀದಿಗೆ ಸದ್ಯದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಆಲ-ಮ-ಟ್ಟಿ - ಪ್ರಧಾ-ನಿ ಹೇಳು-ವು-ದೇ-ನು? : ನರಗುಂದದಲ್ಲಿ ಭಾರತೀಯ ಆಹಾರ ನಿಗಮದಲ್ಲಿ ಆಹಾರ ಜೋಳ ಖರೀದಿ ಸಂದರ್ಭದಲ್ಲಿ ನಡೆದ ಅವ್ಯವಹಾರದ ತನಿಖೆಗೆ ಸಿಓಡಿ ತನಿಖೆ ನಡೆಸುವುದಕ್ಕೆ ಮುಖ್ಯ ಮಂತ್ರಿ ಎಸ್.ಎಂ. ಕೃಷ್ಣ ಒಪ್ಪಿರುವುದಾಗಿ ಹೇಳಿದ ಸಚಿವರು, ಆಂಧ್ರಪ್ರದೇಶ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಮುಂದುವರೆಸುತ್ತಿರುವ ಬಗ್ಗೆ ಕೇಂದ್ರದಿಂದ ಸೂಚನೆಗಾಗಿ ರಾಜ್ಯ ಕಾಯುತ್ತಿದೆ. ಅಲ್ಲಿಯವರೆಗೆ ಆಂಧ್ರ ಪ್ರದೇಶ ಹೆಚ್ಚು ನೀರನ್ನು ಬಳಸಿದರೂ ಪರವಾಗಿಲ್ಲ ಎಂದರು. ಆದರೆ ಶಾಶ್ವತವಾಗಿ ರಾಜ್ಯದ ನೀರಿನ ಮೇಲೆ ಆಂಧ್ರ ಪ್ರದೇಶ ಅಧಿಕಾರ ಸ್ಥಾಪಿಸುವಂತಿಲ್ಲ . ಸುಪ್ರೀಂ ಕೋರ್ಟ್ ಕೂಡ ಕೃಷ್ಣಾ ನದಿ ನೀರಿಗಾಗಿ ಯಾವುದೇ ಶಾಶ್ವತ ವ್ಯವಸ್ಥೆಯನ್ನು ಆಂಧ್ರ ಪ್ರದೇಶ ಮಾಡಿಕೊಳ್ಳುವಂತಿಲ್ಲ ಎಂದೇ ಆದೇಶ ನೀಡಿದೆ ಎಂದು ಸಚಿವರು ಹೇಳಿದರು.
(ಯುಎನ್‌ಐ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications