ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಠಾಧೀಶರಿಂದ ಮಾತ್ರ ಸಮಾಜ ತಿದ್ದಲುಸಾಧ್ಯ- ಅನಂತಕುಮಾರ್‌

By Staff
|
Google Oneindia Kannada News

ತುಮಕೂರು : ಸಮಾಜ ತಿದ್ದುವ ಕೆಲಸ ರಾಜಕಾರಣಿಗಳಿಂದ ಸಾಧ್ಯವಿಲ್ಲ. ಮಠಾಧೀಶರು ಮತ್ತು ಧರ್ಮ ಗುರುಗಳಿಂದ ಮಾತ್ರ ಈ ಕಾರ್ಯ ಸಾಧ್ಯ ಎಂದು ಖುದ್ದು ರಾಜಕಾರಣಿಯಾದ ಕೇಂದ್ರ ಪ್ರವಾಸೋದ್ಯಮ ಸಚಿವ ಅನಂತಕುಮಾರ್‌ ಸೋಮವಾರ ಹೇಳಿದ್ದಾರೆ.

ನಗರಕ್ಕೆ ಸಮೀಪದ ಚಿಕ್ಕತೊಟ್ಲು ಕೆರೆ ಗ್ರಾಮದಲ್ಲಿನ ಅಟವಿ ಸುಕ್ಷೇತ್ರ ಮಠದಲ್ಲಿ ಸಂಕ್ರಾಂತಿ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಧರ್ಮೋತ್ತೇಜಕ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ನಮ್ಮ ದೇಶದ ಮಂದಿರ- ಮಸೀದಿಗಳನ್ನು ಕಾಪಾಡುತ್ತಿರುವರು ಜನ ಸಾಮಾನ್ಯರೇ ಹೊರತು ರಾಜಕಾರಣಿಗಳು ಅಥವಾ ರಾಜಕೀಯ ಪಕ್ಷಗಳಲ್ಲ ಎಂದರು.

ಜನರಿಂದ ಸಂಗ್ರಹಿಸಿರುವ ತೆರಿಗೆ ಹಣದಿಂದ ಯಾವುದೇ ಸರ್ಕಾರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ. ಬರುವ ಸಂಕ್ರಾಂತಿಗೆ ಅಟವಿ ಕ್ಷೇತ್ರಕ್ಕೆ ಯಾತ್ರಿ ನಿವಾಸಗಳನ್ನು ಸರ್ಕಾರದ ಪರವಾಗಿ ಕೊಡುಗೆಯಾಗಿ ಕೊಡುತ್ತೇನೆ. ಶ್ರೀ ಕ್ಷೇತ್ರ ಈ ಬಗ್ಗೆ ಕೋರಿಕೆ ಸಲ್ಲಿಸಿದೆ. ಸರ್ಕಾರ ಯಾತ್ರಿ ನಿವಾಸಗಳ ನಿರ್ಮಾಣಕ್ಕೆ ಬದ್ಧವಾಗಿದ್ದು, ಕಟ್ಟ-ಡಗಳ ನಿರ್ಮಾಣಕ್ಕೆ ಸ್ಥಳೀಯ ಶಾಸಕರಾದ ಆರ್‌.ನಾರಾಯಣ್‌ ಮತ್ತು ಎಸ್‌.ಶಿವಣ್ಣ ಪ್ರಸ್ತಾವನೆ ಸಲ್ಲಿಸಬೇಕೆಂದು ಹೇಳಿದರು.

ಸಮಾರಂಭದ ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್‌ ಸದಸ್ಯ ಬಸವರಾಜ ಬೊಮ್ಮಾಯಿ ಮಾತನಾಡಿ, ಸಾವಿರಾರು ವರ್ಷಗಳ ಭಾರತದ ಸಂಸ್ಕೃತಿಯನ್ನು ಪಕ್ಕಕ್ಕೆ ತಳ್ಳಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ತಬ್ಬಿಕೊಂಡಿರುವ ನಮ್ಮ ಯುವ ಪೀಳಿಗೆಗೆ ಧರ್ಮಪೀಠಗಳು ತಕ್ಕ ಚಿಕಿತ್ಸೆ ಕೊಡಬೇಕಿದೆ ಎಂದರು.

ಬೆಂಗಳೂರಿನ ಕೊಳದ ಮಠದ ಪೀಠಾಧ್ಯಕ್ಷ ಶ್ರೀ ಶಾಂತವೀರ ಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಟವಿ ಶಿವಲಿಂಗ ಸ್ವಾಮಿಗಳು ವಹಿಸಿದ್ದರು. ಶಾಸಕರಾದ ಆರ್‌.ನಾರಾಯಣ್‌, ಎಸ್‌.ಶಿವಣ್ಣ, ಎಂ.ಡಿ. ಲಕ್ಷ್ಮಿನಾರಾಯಣ್‌ ಮುಂತಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X