ಸ್ಕಾಟ್‌ಲೆಂಡ್ ಪೊಲೀಸರಿಗೂ ಚಳ್ಳೆಹಣ್ಣುತಿನ್ನಿಸಿದ ಸಂಜೀವ್ ಬಂಧನ
ಲಂಡನ್ : ಅಪರಾಧ- ಆರೋಪಿಗಳ ಪತ್ತೆಗೆ ಸ್ಕಾಟ್‌ಲೆಂಡ್ ಯಾರ್ಡ್ ಪೊಲೀಸರು ಹೆಸರುವಾಸಿ. ಅವರ ಕೈಯಿಂದ ಒಂದು ಸೊಳ್ಳೆಯೂ ತಪ್ಪಿಸಿಕೊಳ್ಳಲಾರದು ಎಂಬ ಮಾತು ಜನಜನಿತವಾದದ್ದು. ಅಂಥಾದ್ದರಲ್ಲಿ ಕ್ರಿಕೆಟ್ ಕಳ್ಳಾಟ ಆಡಲು ಹಣದಾಮಿಷ ಒಡ್ಡಿದ್ದಾನೆ ಎನ್ನಲಾಗಿರುವ ಭಾರತೀಯ ಮೂಲದ ಆರೋಪಿ ಸಂಜೀವ್ ಚಾವ್ಲಾರನ್ನು ತಿಂಗಳುಗಟ್ಟಲೆ ಹುಡುಕಾಟದ ನಂತರ ಭಾನುವಾರವಷ್ಟೇ ಇವರು ಬಂಧಿಸಿದ್ದಾರೆ.
ಹ್ಯಾನ್ಸಿ ಕ್ರೋನಿಯೆ ತಪ್ಪೊಪ್ಪಿಕೊಂಡ ಸಂದರ್ಭದಲ್ಲೇ ಮೂವತ್ಮೂರರ ಹರೆಯದ ಸಂಜೀವ್ ಚಾವ್ಲಾ ಹೆಸರು ಬಯಲಿಗೆ ಬಂದಿತ್ತು. ಕೇಂದ್ರ ಲಂಡನ್ನಿನಲ್ಲಿ ಬಟ್ಟೆ ಅಂಗಡಿ ಇಟ್ಟು ಕೊಂಡಿರುವ ಚಾವ್ಲಾ 1999ರಲ್ಲಿ ಓಲ್ಡ್‌ಟ್ರಾಫರ್ಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಕಳಪೆಯಾಗಿ ಆಡುವಂತೆ ಇಂಗ್ಲೆಂಡ್ ಆಟಗಾರರಿಗೆ ಆಮಿಷ ಒಡ್ಡಿದ್ದರು ಎಂದು ಇಂಗ್ಲೆಂಡ್‌ನ ಕ್ರಿಸ್ ಲೂಯಿಸ್ ಹೇಳಿದ್ದರು.
ಕಳಪೆ ಆಟ ಆಡಲು ಚಾವ್ಲಾ , ಇಂಗ್ಲೆಂಡ್ ಆಟಗಾರರಿಗೆ ಕೆಲ ಸಂದರ್ಭಗಳಲ್ಲಿ 3 ಲಕ್ಷ ಪೌಂಡ್‌ಗಳ ಆಮಿಷ ಒಡ್ಡಿದ್ದಾರೆ ಎಂದು ಸ್ಕಾಟ್‌ಲೆಂಡ್ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹ್ಯಾನ್ಸಿ ಕಳ್ಳಾಟ ಬಯಲಿಗೆಳೆದ ದೆಹಲಿ ಪೊಲೀಸರು ಸಂಜೀವ್ ಚಾವ್ಲಾ ಬಂಧನದ ಕೆಲಸವನ್ನು ಸ್ಕಾಟ್‌ಲೆಂಡ್ ಪೊಲೀಸರಿಗೆ ಒಪ್ಪಿಸಿದ್ದರು. ಸ್ಕಾಟ್‌ಲೆಂಡ್ ಪೊಲೀಸರು ಚಾವ್ಲಾನ ಪಾಸ್‌ಪೋರ್ಟ್ ರದ್ದು ಪಡಿಸಿದ ನಂತರ ಆತ ತಲೆ ಮರೆಸಿಕೊಂಡಿದ್ದ.
ಇನ್ನೊಂದು ದುರಂತವೆಂದರೆ, ಇಷ್ಟೆಲ್ಲಾ ಕಷ್ಟ ಪಟ್ಟ ನಂತರ ಸಿಕ್ಕಿರುವ ಈತ ಈ ತಿಂಗಳ ಕೊನೆಗೆ ಜಾಮೀನು ಪಡೆದು, ಜೈಲಿನಿಂದ ಹೊರ ಬರಲಿದ್ದಾನೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications