Get Updates
Get notified of breaking news, exclusive insights, and must-see stories!

2002ರ ಹೊತ್ತಿಗೆ ಬರಲಿವೆ ಪರಿಸರ ಸ್ನೇಹಿ ಪ್ಲಾಸ್ಟಿಕ್‌ ಚೀಲಗಳು

ಶಿವಮೊಗ್ಗ : ಪ್ಲಾಸ್ಟಿಕ್‌ನಿಂದ ಎಷ್ಟು ಉಪಯೋಗ ಇದೆಯೋ ಪರಿಸರಕ್ಕೆ ಅಷ್ಟೇ ಹಾನಿ ಇದೆ. ಪ್ಲಾಸ್ಟಿಕ್‌ ಕ್ರಾಂತಿಯ ನಂತರವಂತೂ ಸೆಣಬಿನ ಉದ್ಯಮ ನೆಲಕಚ್ಚಿತು. ಮನೆಗೆ ದಿನಸಿ, ತರಕಾರಿ ತರುವುದರಿಂದ ಹಿಡಿದು, ಇಡೀ ಮಾರುಕಟ್ಟೆಯನ್ನೇ ಹೊತ್ತು ತರಲು ಪ್ಲಾಸ್ಟಿಕ್‌ ಚೀಲಗಳೇ ಸಾಕು ಎಂಬಂತಹ ಪರಿಸ್ಥಿತಿ ನಿರ್ಮಾಣವಾಯ್ತು.

ನೀರಿನಲ್ಲಿ ಕರಗದ, ಮಣ್ಣಲ್ಲಿ ಕೊಳೆಯದ ಈ ಪ್ಲಾಸ್ಟಿಕ್‌ ಚೀಲಗಳು ಉಂಟು ಮಾಡಿದ ಉಪದ್ರವ ಅಷ್ಟಿಷ್ಟಲ್ಲ. ಕೆಲವು ಕಡೆ ಈ ಪ್ಲಾಸ್ಟಿಕ್‌ ಚೀಲಗಳನ್ನು ಅರ್ಥಾತ್‌ ಕ್ಯಾರಿ ಬ್ಯಾಗ್‌ಗಳನ್ನು ನಿಷೇಧಿಸುವ ವಿಫಲ ಪ್ರಯತ್ನಗಳೂ ಸಾಗಿದವು. ಈ ಹರ ಸಾಹಸಕ್ಕೆ ಕೈ ಇಟ್ಟ ಪರಿಸರ ಪ್ರೇಮಿಗಳು ಸೋತು, ಸುಣ್ಣವಾದರು.

ಈಗ ಕೊನೆಗೂ ಪರಿಹಾರ ಒಂದು ಸಿಕ್ಕಿದೆ. ಭೂಮಿಯಲ್ಲಿ ಸುಲಭವಾಗಿ ಕರಗುವ, ಪರಿಸರಕ್ಕೆ ಹಾನಿ ಮಾಡದಿರುವ ವಿನೂತನ ಬಗೆಯ ಪ್ಲಾಸ್ಟಿಕ್‌ ಮಾರುಕಟ್ಟೆಗೆ ಬರಲಿದೆ. ಬಯೋ - ಡಿಗ್ರಿ ಡಬಲ್‌ ಸ್ಟಾರ್ಚ್‌ ವಿಧಾನದಲ್ಲಿ ತಯಾರಿಸಲಾಗುತ್ತಿರುವ ಈ ಪ್ಲಾಸ್ಟಿಕ್‌ಗಳು 2002ನೇ ಇಸವಿಯ ವೇಳೆಗೆ ಮಾರುಕಟ್ಟೆ ಪ್ರವೇಶಿಸಲಿವೆ.

ಈ ವಿಷಯವನ್ನು ಕುವೆಂಪು ವಿಶ್ವ ವಿದ್ಯಾಲಯದ ಕೈಗಾರಿಕಾ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶೇರೆಗಾರ್‌ ತಿಳಿಸಿದ್ದಾರೆ. ಭಾನುವಾರ ಇಲ್ಲಿನ ಕಸ್ತೂರ ಬಾ ಕಾಲೇಜಿನಲ್ಲಿ ರೋಟರಿ ಮಿಡ್‌ ಟೌನ್‌ ಶಾಖೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಪ್ಲಾಸ್ಟಿಕ್‌ ಬಳಕೆ ಹಾಗೂ ನಿರ್ವಹಣೆಯ ಬಗ್ಗೆ ಮಾತನಾಡಿದ ಅವರು ಪ್ಲಾಸ್ಟಿಕ್‌ ಮರುಬಳಕೆಗೆ ಹಲವು ರೀತಿಯ ಪರ್ಯಾಯ ಮಾರ್ಗಗಳಿದ್ದು, ಅದನ್ನು ಶಿಸ್ತು ಬದ್ಧವಾಗಿ ಆಚರಿಸಿದರೆ ಪ್ಲಾಸ್ಟಿಕ್‌ನಿಂದಾಗುವ ಉಪಟಳ ತಡೆಯಲು ಸಾಧ್ಯ ಎಂದರು.

ಈ ಬಗ್ಗೆ ಸರಕಾರ ಗಮನ ಹರಿಸಿ, ಕ್ರಮಬದ್ಧವಾಗಿ ಪ್ಲಾಸ್ಟಿಕ್‌ ಬಳಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದೂ ಸಲಹೆ ಮಾಡಿದರು.

ರಸ್ತೆ ನಿರ್ಮಾಣಕ್ಕೆ ಪ್ಲಾಸ್ಟಿಕ್‌ : ಅಮೆರಿಕ, ಜಪಾನ್‌ನಂತಹ ಮುಂದುವರಿದ ದೇಶಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ತ್ಯಾಜ್ಯ ಪ್ಲಾಸ್ಟಿಕ್‌ ವಸ್ತುಗಳನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಕೂಡ ಕೇರಳ ರಾಜ್ಯದಲ್ಲಿ ರಬ್ಬರ್‌ ಬೆಲೆ ತೀವ್ರವಾಗಿ ಕುಸಿದಿದ್ದು, ಅಲ್ಲೂ ಈ ಪ್ರಯೋಗ ನಡೆಯುತ್ತಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+