ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಅನಿರೀಕ್ಷಿತವಾಗಿ ಸ್ನೇಹಿತನ ಭೇಟಿಯಾಗಬಹುದು. ಉಡುಗೊರೆ, ಸಹಾಯ ಸಿಕ್ಕರೂ ಅಚ್ಚರಿ ಬೇಡ. ಲಕ್ಕೀ ಡೇ.ವೃಷಭ : ನೀವು ಆರಂಭಿಸಿರುವ ಪುಟ್ಟ ವ್ಯವಹಾರಕ್ಕೆ ನಿಮ್ಮ ಸಂಬಂಧಿಕರಿಂದ ಪ್ರೋತ್ಸಾಹ ಸಿಗಲಿದೆ. ಅವರು ನೀಡುವ ಸಲಹೆಗಳನ್ನು ಹತ್ತರೊಟ್ಟಿಗೆ ಹನ್ನೊಂದು ಎಂದು ಕಡೆಗಣಿಸಬೇಡಿ.
ಮಿಥುನ : ಅಧ್ಯಯನ, ಓದು ಎಲ್ಲ ಮನಸ್ಸಿನೊಳಗೆ ಇದ್ದರೆ ಸಾಕಾಗದು. ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದಿದ್ದರೆ ಇದಕ್ಕಿಂತ ಸಕಾಲ ಬೇರೆ ಕಾಣದು. ಸಾಲಗಾರರನ್ನು ಭೇಟಿಯಾಗಲಿಕ್ಕಿದ್ದರೆ ಇಂದೇ ಹೊರಡಿ.
ಕಟಕ : ಕೊಟ್ಟ ಹಣ ಮತ್ತೆ ಕೈಸೇರುತ್ತದೆ ಅನ್ನುವ ಆಸೆ ಬೇಡ. ಅದಕ್ಕಾಗಿ ಹೋರಾಡುವುದರಿಂದ ಪ್ರಯೋಜನವಿಲ್ಲ. ನಿಮ್ಮಲ್ಲಿರುವ ಸೃಜನಶೀಲ ಆಲೋಚನೆಗಳಿಗೆ ತಕ್ಕ ಪುರಸ್ಕಾರ ಸಿಗಲಿದೆ. ಇಂದು ಸಣ್ಣದೊಂದು ಜಗಳವಿದೆ.
ಸಿಂಹ : ಇವತ್ತು ಮೌನವಾಗಿ ಕೆಲಸ ಮುಗಿಸಿಕೊಂಡು ಹೋಗುವುದು ಒಳ್ಳೆಯದು. ನಿಮ್ಮ ಅಧಿಕಾರ,ದರ್ಪಗಳು ಎಲ್ಲ ಸಮಯದಲ್ಲಿಯೂ ಉಪಯೋಗಕ್ಕೆ ಬಾರವು.
ಕನ್ಯಾ : ಕುಶಲ ಕಲೆ ಫಲಿಸುತ್ತದೆ. ಮನೆಗೇನಾದರೂ ಖರೀದಿ ಮಾಡುವುದಿದ್ದರೆ ಇಂದು ಶುಭದಿನ. ನಿಮ್ಮ ಪಾರ್ಟ್ನರ್ ನಿಮ್ಮ ಯೋಜನೆಗಳನ್ನು ಅಭಿನಂದಿಸಿದರೆ ಅಚ್ಚರಿ ಬೇಡ.
ತುಲಾ : ಆರೋಗ್ಯ ಜೋಪಾನ. ದಿನ ಬೋರ್ ಹೊಡೆದರೆ ಸಿಟ್ಟೇಕೆ ? ಸುಂದರ ನಾಳೆ ನಿಮ್ಮನರಸಿ ಬರುತ್ತಿದೆ.
ವೃಶ್ಚಿಕ : ಮನೆ ತುಂಬಾ ಖುಷಿ ತುಂಬಿರುವಾಗ ನೂಲಿನೆಳೆಯ ನೋವನ್ನು ಮರೆತುಬಿಡಿ. ಮನೆಯಲ್ಲಿ ಎಂದಿನ ಒತ್ತಡ, ಬೈಗಳು ಇದ್ದರೂ ಎಲ್ಲ ನಿಮ್ಮ ಒಳ್ಳೆಯದಕ್ಕೆ.
ಧನಸ್ಸು : ಇವತ್ತೇನಾದರೂ ಲಾಟರಿ ಕೊಳ್ಳಬೇಕೆಂದಿದ್ದರೆ, ಖಂಡಿತಾ ಬೇಡ. ಮನೆ ತುಂಬಾ, ಕೈ ತುಂಬಾ ಇರುವ ಕೆಲಸ ಮುಗಿಸಿ. ಹಳೆ ಲೆಕ್ಕಗಳೆಲ್ಲಾ ಚುಕ್ತಾ ಆಗಲಿದೆ.
ಮಕರ : ವಾಸ್ತವವನ್ನು ಒಪ್ಪಿಕೊಳ್ಳುವುದು ಕಷ್ಟ ವಾದರೂ ನಿಮ್ಮ ಮುಂದೆ ಬೇರೆ ಆಯ್ಕೆ ಇಲ್ಲ. ತಲೆ ತುಂಬಾ ಪ್ರಶ್ನೆಗಳನ್ನಿಟ್ಟುಕೊಂಡು ಕುಳಿತರೆ ದಿನ ನಡೆಯುವುದಿಲ್ಲ.
ಕುಂಭ : ಚೌಕಾಸಿ ದಿನ. ವಸ್ತ್ರ ಖರೀದಿ ಯೋಗ, ಸಿಹಿಯೂಟ, ದಿನವೆಲ್ಲ ಚೆಂದ.
ಮೀನ : ಹಳೆ ಲೆಕ್ಕಗಳನ್ನೆಲ್ಲಾ ಮುಗಿಸಿಬಿಡಿ. ಇವತ್ತಿನ ಆರಾಮ ಸದ್ಯಕ್ಕೆ ಮತ್ತೆ ಬರಲಿಕ್ಕಿಲ್ಲ . ಮನೆ ಮಂದಿಯ ಚಟಾಕಿಗಳು, ತಮಾಷೆಗಳು ನಿಮ್ಮ ದಿನವನ್ನು ಉಲ್ಲಾಸದಲ್ಲಿಡುತ್ತದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications