ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂದಿ ಬೆಟ್ಟದಲ್ಲಿ ಪ್ಯಾರಾಗ್ಲೈಡಿಂಗ್‌ ಹಾರಾಟಮತ್ತು ತರಬೇತಿ ಕೇಂದ್ರ

By Staff
|
Google Oneindia Kannada News

ಬೆಂಗಳೂರು : ದಕ್ಷಿಣ ಭಾರತದ ಏಕೈಕ ಪ್ಯಾರಾ ಗ್ಲೈಡಿಂಗ್‌ ತರಬೇತಿ ಕೇಂದ್ರವನ್ನು ನಂದಿ ಬೆಟ್ಟದಲ್ಲಿ ಭಾನುವಾರದಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಸಂಜಯ್‌ದಾಸ್‌ ಗುಪ್ತಾ ಉದ್ಘಾಟಿಸಿದರು.

ಟೇಪು ಕತ್ತರಿಸಿ ಉದ್ಘಾಟಿಸಬೇಕಾಗಿದ್ದ ಗುಪ್ತಾ ಕೊನೆ ಗಳಿಗೆಯಲ್ಲಿ ತಮ್ಮ ನಿರ್ಧಾರ ಬದಲಿಸಿ ಸ್ವತಃ ಹಾರಾಟ ನಡೆಸಿ ಪ್ಯಾರಾ ಗ್ಲೈಡಿಂಗ್‌ ಹಾರಾಟ ಕೇಂದ್ರವನ್ನು ಉದ್ಘಾಟಿಸಿದರು. ಕ್ಯಾಪ್ಟನ್‌ ಮೆಹರ್‌ ಅವರೊಂದಿಗೆ ಗುಪ್ತಾ ಅವರನ್ನು ಹೊತ್ತ ಗ್ಲೈಡರ್‌ ಸಮುದ್ರ ಮಟ್ಟದಿಂದ 4760 ಅಡಿ ಎತ್ತರದಲ್ಲಿ ಸುಮಾರು 20 ನಿಮಿಷಗಳ ಕಾಲ ಹಾರಾಟ ನಡೆಸಿತು.

ಉದ್ಘಾಟನಾ ಭಾಷಣದಲ್ಲಿ ಮಾತನಾಡುತ್ತಾ ಸಂಜಯ್‌ ದಾಸ್‌ ಗುಪ್ತಾ ಅವರು , ಬೆಂಗಳೂರಿನ ಓಜೋನ್‌ ಸಂಸ್ಥೆಯ ಸಹಯೋಗದೊಂದಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಸ್ಥಾಪಿಸಿರುವ ಈ ಪ್ಯಾರಾಗ್ಲೈಡಿಂಗ್‌ ಹಾರಾಟ ಮತ್ತು ತರಬೇತಿ ಕೇಂದ್ರದಲ್ಲಿ 20 ನಿಮಿಷಗಳ ಹಾರಾಟಕ್ಕೆ 750 ರೂಪಾಯಿ ಶುಲ್ಕ ವಿಧಿಸಲಾಗುವುದು. ಮೂರು ದಿನಗಳ ಹಾರಾಟ ತರಬೇತಿಗೆ ಊಟ ವಸತಿ ಸೇರಿದಂತೆ ಮೂರು ಸಾವಿರ ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ ಎಂದರು.

ಅಲ್ಲದೆ, ಭಾಗವಹಿಸುವವರು 40ರಿಂದ 100 ಕೆ.ಜಿ. ತೂಕದೊಳಗಿರಬೇಕು. ಹೃದಯ ರೋಗಿಗಳು ಭಾಗವಹಿಸುವಂತಿಲ್ಲ ಎಂದ ಗುಪ್ತಾ ಶನಿವಾರ, ಭಾನುವಾರ ಮತ್ತು ಇತರ ರಜಾದಿನಗಳಲ್ಲಿ ಹಾರಾಟದ ತರಬೇತಿ ನೀಡಲಾಗವುದು. ತರಬೇತಿ ಮತ್ತು ಹಾರಾಟದಲ್ಲಿ ಭಾಗವಹಿಸುವವರಿಗಾಗಿ ಬೆಂಗಳೂರಿನಿಂದ ನಂದಿ ಬೆಟ್ಟದವರೆಗೆ ವಾಹನದ ವ್ಯವಸ್ಥೆಯನ್ನು ಇಲಾಖೆ ಮಾಡುತ್ತದೆ ಎಂದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X