Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ ಚೈನಾ ಎನ್‌ಪಿಸಿ ಅಧ್ಯಕ್ಷ ಲೀ ಪೆಂಗ್‌

ಬೆಂಗಳೂರು : ಸೋಮವಾರ ದೆಹಲಿಯಿಂದ ನಗರಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದ ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ ಆಫ್‌ ಚೈನಾದ ಅಧ್ಯಕ್ಷ ಲೀ ಪೆಂಗ್‌ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಅವರು 3 ದಿನಗಳ ಕಾಲ ನಗರದಲ್ಲಿ ತಂಗಲಿದ್ದಾರೆ.

ಚೈನಾ ನಾಯಕತ್ವದ ಯಾದಿಯ ಎರಡನೇ ಹುದ್ದೆಯಲ್ಲಿರುವ ಲೀ ಪೆಂಗ್‌ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಬೆಂಗಳೂರು ಮೇಯರ್‌ ಪ್ರೇಮಾ ಕಾರ್ಯಪ್ಪ , ಮುಖ್ಯ ಕಾರ್ಯದರ್ಶಿ ತೆರೆಸಾ ಭಟ್ಟಾಚಾರ್ಯ, ಪೊಲೀಸ್‌ ಮಹಾ ನಿರ್ದೇಶಕ ಸಿ.ದಿನಕರ್‌ ಮತ್ತಿತರ ಹಿರಿಯ ಅಧಿಕಾರಿಗಳು ಬರಮಾಡಿಕೊಂಡರು.

ನಲವತ್ತೊಂದು ಉನ್ನತ ಮಟ್ಟದ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿರುವ ಪೆಂಗ್‌, ಸೋಮವಾರ ರಾತ್ರಿ ರಾಜ್ಯಪಾಲರಾದ ವಿ.ಎಸ್‌.ರಮಾದೇವಿ ಆಯೋಜಿಸಿರುವ ಔತಣಕೂಟದಲ್ಲಿ ಭಾಗವಹಿಸಿರುವರು. ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ ಆಫ್‌ ಚೈನಾದ ಉಪಾಧ್ಯಕ್ಷ ಬುಹೆ ಕೂಡ ತಂಡದಲ್ಲಿದ್ದಾರೆ. ಬೃಹತ್‌ ವ್ಯಾಪಾರೀ ನಿಯೋಗವೂ ಲೀ ಪೆಂಗ್‌ ಅವರಿಗೆ ಸಾಥ್‌ ನೀಡಿದೆ.

ಹವಾಯಿ ಟೆಕ್ನಾಲಜೀಸ್‌, ಲ್ಯೂಸೆಂಟ್‌ ಟೆಕ್ನಾಲಜೀಸ್‌ ಹಾಗೂ ಅಂತರರಾಷ್ಟ್ರೀಯ ಟೆಕ್‌ ಪಾರ್ಕ್‌ನಲ್ಲಿರುವ ಸ್ಯಾನ್ಯೋ ಕಂಪನಿಗಳಿಗೆ ಮಂಗಳವಾರ ಮುಂಜಾನೆ ಲೀ ಪೆಂಗ್‌ ಭೇಟಿ ಕೊಡಲಿದ್ದಾರೆ. ಇಳಿ ಹೊತ್ತಿಗೆ ಇನ್ಫೋಸಿಸ್‌ ಲಿಮಿಟೆಡ್‌ಗೆ ಭೇಟಿ ಕೊಡುವ ಕಾರ್ಯಕ್ರಮವಿದೆ. ಮುಖ್ಯಮಂತ್ರಿ ಕೃಷ್ಣ ಕೂಡ ಅವರ ಜೊತೆ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಜನವರಿ 17ರ ಮುಂಜಾನೆ ಲೀ ಪೆಂಗ್‌ ವಿಮಾನದಲ್ಲಿ ಹೈದರಾಬಾದ್‌ಗೆ ಹಾರಲಿದ್ದಾರೆ.

(ಯುಎನ್‌ಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+