ಕ್ರಿಕೆಟ್ ‘ಕಳ್ಳಾಟ’ದಲ್ಲಿ ಭೂಗತಲೋಕದ ಕೈವಾಡ : ಸಿಬಿಐ ಕೈಲಿ ಪುರಾವೆ
*ಸುನಿಲ್ ಝಾ
ನವದೆಹಲಿ : ಬಹು ದಿನಗಳ ತಲಾಶಿನ ನಂತರ ಭಾರತೀಯ ಮೂಲದ ಲಂಡನ್ ಬುಕ್ಕಿ ಸಂಜೀವ್ ಚಾವ್ಲಾ ಸ್ಕಾಟ್‌ಲೆಂಡ್ ಯಾರ್ಡ್ ಪೊಲೀಸರಿಗೆ ಸಿಕ್ಕ ಸುದ್ದಿಯ ಬೆನ್ನಲ್ಲೇ ಕ್ರಿಕೆಟಿಗರು- ಬುಕ್ಕಿಗಳು ಮತ್ತು ಭೂಗತಲೋಕದ ನಡುವೆ ಕೊಂಡಿ ಇರುವುದನ್ನು ಸಿಬಿಐ ಪತ್ತೆ ಹಚ್ಚಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿಬಿಐ ನಿರ್ದೇಶಕ ಆರ್.ಕೆ.ರಾಘವನ್, ಕ್ರಿಕೆಟಿಗರು- ಬುಕ್ಕಿಗಳ- ಭೂಗತಲೋಕ ಇವುಗಳ ನಡುವೆ ಕೊಂಡಿ ಇರುವ ಬಗ್ಗೆ ಕೆಲವು ಸೂಕ್ಷ್ಮ ದಾಖಲೆಗಳು ದೊರೆತಿವೆ. ಆದರೆ ಮೊಕದ್ದಮೆ ಹೂಡಲು ಇಷ್ಟು ಮಾತ್ರ ಸಾಲದು. ಈ ಕಾರಣ ಇನ್ನಷ್ಟು ಪುರಾವೆಗಳನ್ನು ನಮ್ಮ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ ಎಂದರು.
ಕಳೆದ ವರ್ಷ ನವೆಂಬರ್ 1ರಂದು ಸರ್ಕಾರಕ್ಕೆ ಸಿಬಿಐ ಸಲ್ಲಿಸಿದ ಮ್ಯಾಚ್‌ಫಿಕ್ಸಿಂಗ್ ಕುರಿತ ತನ್ನ 162 ಪುಟಗಳ ವರದಿಯಲ್ಲಿ ಈ ರೀತಿ ನಮೂದಿಸಿತ್ತು- ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಭೂಗತ ಮಾಫಿಯಾ ಕೈವಾಡ ಇರುವುದರ ಸುಳಿವು ಸಿಕ್ಕಿದೆ. ಇದನ್ನು ಶೈಶಾವಸ್ಥೆಯಲ್ಲೇ ಮಟ್ಟ ಹಾಕದಿದ್ದಲ್ಲಿ ಮುಂದೆ ಇಡೀ ಕ್ರಿಕೆಟ್ಟು ಮಾಫಿಯಾ ಮುಷ್ಟಿಯಲ್ಲಿ ಸಿಲುಕಿ ಹೋಗಲಿದೆ.
ಕೆಲವು ಬುಕ್ಕಿಗಳ ಮೂಲಕ ಭೂಗತ ಮಾಫಿಯಾ ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಹಣ ತೊಡಗಿಸಿರುವ ಸಾಧ್ಯತೆಗಳೂ ಇವೆ. ಆದರೆ ಇಡೀ ರಾಕೆಟ್‌ನ ರೂಪುರೇಷೆ ಎಂತಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಈಗ ನಾವೂ ಅದರ ತಲಾಶಿನಲ್ಲೇ ಇದ್ದೇವೆ. ಪೊಲೀಸರ ಉಡಾಫೆಯಿಂದ ಕ್ರಿಕೆಟ್ಟಿಗೂ ಮಾಫಿಯಾ ಕಾಲಿಟ್ಟಿದೆ ಎಂಬುದು ಗೊತ್ತಾಗಿದೆ. ವರಮಾನ ತೆರಿಗೆ ಇಲಾಖೆ ಸದ್ಯದಲ್ಲೇ ತನ್ನ ವರದಿ ಸಲ್ಲಿಸಲಿದ್ದು, ಅದರಿಂದ ನಮ್ಮ ಹುಡುಕಾಟಕ್ಕೆ ಸಾಕಷ್ಟು ಸಹಾಯವಾಗಲಿದೆ ಎಂಬ ನಿರೀಕ್ಷೆ ನಮ್ಮದು ಎಂದು ರಾಘವನ್ ಹೇಳಿದರು.
ಈಗ ಆಜೀವ ನಿಷೇಧಕ್ಕೊಳಗಾಗಿರುವ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹಾಗೂ ಮಾಜಿ ಫಿಸಿಯೋ ಅಲಿ ಇರಾನಿ ಭೂಗತ ಜಗತ್ತಿನೊಂದಿಗೆ ಸಂಬಂಧ ಹೊಂದಿರುವ ಬಗೆಗೆ ಸಾಕಷ್ಟು ಮಾಹಿತಿ ಸಿಕ್ಕಿದೆ. ಕಳ್ಳಾಟ ಆಡುವಂತೆ ಅಬು ಸಲೀಂ ತಮಗೆ ಹಲವು ಬಾರಿ ಕರೆಗಳನ್ನು ಮಾಡಿದ್ದು, ತಾವು ಅದನ್ನು ತಿರಸ್ಕರಿಸಿರುವುದಾಗಿ ಅಜರ್ ಹೇಳಿದ್ದಾರೆ ಎಂದು ಸಿಬಿಐ ತನ್ನ ವರದಿಯಲ್ಲಿ ತಿಳಿಸಿದೆ. ಅಲಿ ಇರಾನಿ ಕೂಡ ಭೂಗತ ಲೋಕ ಕಳ್ಳಾಟದಲ್ಲಿ ಭಾಗಿಯಾಗಿದೆ ಎಂದಿದ್ದರು.
ಈ ಹಿನ್ನೆಲೆಯಲ್ಲಿ ಮಾಫಿಯಾ- ಬುಕ್ಕಿಗಳು- ಕ್ರಿಕೆಟಿಗರ ನಂಟಿನ ಜಾಡು ಹಿಡಿದು ಹೊರಟಿರುವ ಸಿಬಿಐ ಸದ್ಯದಲ್ಲೇ ಈ ರಾಕೆಟ್ಟನ್ನು ಬೇಧಿಸುವ ವಿಶ್ವಾಸ ವ್ಯಕ್ತಪಡಿಸಿದೆ.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications