ರಾಜಾಂಗಣದ ದರ್ಬಾರ್ ಉದ್ಘಾಟನೆಗೆ ಉಡುಪಿಗೆ ವಾಜಪೇಯಿ
ಉಡುಪಿ : ಸಾರ್ಕ್ ಸಮ್ಮೇಳನದ ನೆಪದಲ್ಲಿ ಹತ್ತು ವರ್ಷಗಳ ಹಿಂದೆ ಬೆಂಗಳೂರಿನ ಎಂ.ಜಿ. ರಸ್ತೆ ಸೇರಿದಂತೆ ರಾಜ್ಯದ ಹಲವು ರಸ್ತೆಗಳು ದುರಸ್ತಿ ಕಂಡವು. ಹಳ್ಳ ಕೊಳ್ಳಗಳು ಒಮ್ಮಿಂದೊಮ್ಮೆಲೆ ಕಾಣೆಯಾದವು. ಮೊನ್ನೆ ಮೊನ್ನೆ ಅದೇ ಕಳೆದ ವರ್ಷ ಮೇ ತಿಂಗಳಿನಲ್ಲಿ ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ಕೊಟ್ಟಾಗ ಅವರು, ಬೆಂಗಳೂರಿಗೂ ಬರುತ್ತಾರೆಂಬ ಆಶಾಭಾವನೆಯಿಂದ ನಗರದ ರಸ್ತೆಗಳು ದುರಸ್ತಿಯಾಗಿದ್ದೂ ಉಂಟು.
ಈಗ ಆ ಯೋಗ ಉಡುಪಿಯ ರಸ್ತೆಗಳಿಗೂ ಬಂದಿದೆ. ರಾಷ್ಟ್ರದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, 18ರಂದು ಉಡುಪಿಗೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿಯ ರಸ್ತೆಗಳಿಗೆ ತೇಪೆ ಹಾಕುವ, ಅಭಿವೃದ್ಧಿಪಡಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ. ಆದಿ ಉಡುಪಿಯಿಂದ ರಾಜಾಂಗಣದವರೆಗಿನ ರಸ್ತೆಗಳಲ್ಲಿರುವ ಹೊಂಡ - ಕಂದಕಗಳೆಲ್ಲ ರಾತ್ರೋರಾತ್ರಿ ಕಣ್ಮರೆಯಾಗುತ್ತಿವೆ.
ಜಿಲ್ಲಾಡಳಿತ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹಗಲಿರುಳೂ ರಸ್ತೆ ದುರಸ್ತಿ ಕಾರ್ಯದಲ್ಲಿ ನಿರತವಾಗಿದೆ. ಜಲ್ಲಿಕಲ್ಲಿಗೆ ಟಾರು ಸೇರಿಸಿ ಗುಂಡಿ ಮುಚ್ಚುತ್ತಿರುವುದೇ ಅಲ್ಲದೆ, ಕೆಲವೆಡೆ ರಸ್ತೆಯ ಅಗಲೀಕರಣವೂ ಸಾಗಿದೆ. ವರ್ಷಗಟ್ಟಲೆಯಿಂದ ರಸ್ತೆಯಂಚಿನಲ್ಲಿ ಬಿದ್ದಿದ್ದ ಮಣ್ಣು ಮಾಯವಾಗುತ್ತಿದೆ. ರಸ್ತೆಗೆ ಎಲ್ಲಿಲ್ಲದ ಕಳೆ ಬರುತ್ತಿದೆ. ಅಟ್‌ಲೀಸ್ಟ್ 6 ತಿಂಗಳಿಗೊಮ್ಮೆಯಾದರೂ ಗಣ್ಯರು ಉಡುಪಿಗೆ ಬಂದರೆ ಚೆನ್ನ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.
ಪ್ರಧಾನಿ ವಾಜಪೇಯಿ ಅವರು ಜನವರಿ 18ರ ರಾತ್ರಿ ಇಲ್ಲೇ ಮೊಕ್ಕಾಂ ಹೂಡುವವರಿದ್ದು, ಅದಕ್ಕಾಗಿ ಕರಾವಳಿ ಹೋಟೆಲ್ ಮತ್ತು ಪ್ರವಾಸಿ ಬಂಗಲೆಗಳೂ ಕಳೆ ಕಟ್ಟುತ್ತಿವೆ. ಭದ್ರತಾ ಪಡೆಯ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿಯಾಗಿದೆ. ಉಡುಪಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ದಿಢೀರೆಂದು ಚೆಕ್‌ಪೋಸ್ಟ್‌ಗಳೂ ತಲೆ ಎತ್ತಿವೆ.
ನಗರಕ್ಕೆ ಬರುವ ವಾಹನಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ. ನಗರದಲ್ಲಿ ಕಾಣಿಸುವ ಹೊಸ ಮುಖಗಳ ಬಗ್ಗೆ ಮಫ್ತಿಯ ಪೊಲೀಸರು ಗೌಪ್ಯ ಮಾಹಿತಿಗಳನ್ನೂ ಸಂಗ್ರಹಿಸುತ್ತಿದ್ದಾರೆ. ಕೃಷ್ಣ ಮಠದ ಸುತ್ತಲೂ ಪೊಲೀಸ್ ಕಣ್ಣುಗಳು ಸುಳಿದಾಡುತ್ತಿವೆ.
ವ್ಯಾಪಾರ ಸ್ಥಗಿತ ಸಂಭವ : ಪ್ರಧಾನಿಯವರ ಆಗಮನ ಹಿನ್ನೆಲೆಯಲ್ಲಿ ಉಡುಪಿ ರಥ ಬೀದಿಯಲ್ಲಿ ಸಾರ್ವಜನಿಕ ಸಂಚಾರ ಸ್ತಬ್ಧಗೊಳ್ಳುವ ಹಾಗೂ ವ್ಯಾಪಾರ ವಹಿವಾಟು ಕಡ್ಡಾಯ ವಿಶ್ರಾಂತಿ ಪಡೆವ ಸಾಧ್ಯತೆಗಳೂ ಇವೆ. ಒಂದು ದಿನದ ಮಟ್ಟಿಗೆ ಆಟೋರಿಕ್ಷಾ ನಿಲ್ದಾಣ ಹಾಗೂ ಬಸ್ ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರಿಸುವ ಕುರಿತೂ ಜಿಲ್ಲಾಡಳಿತ ಚಿಂತಿಸುತ್ತಿದೆ. ಸಾರ್ವಜನಿಕ ವಾಹನಗಳ ನಿಲುಗಡೆಗೆ ಬೇರೆಡೆ ಅವಕಾಶ ಕಲ್ಪಿಸಲೂ ಸಿದ್ಧತೆ ನಡೆದಿದೆ.
ಒಟ್ಟಿನಲ್ಲಿ ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ಉಡುಪಿಗೆ ಹೊಸರಂಗು ಬಂದಿದೆ. ರಸ್ತೆಗಳು ಚೆನ್ನಾಗಿರುವಾಗಲೇ ನೀವೂ ಒಮ್ಮೆ ಉಡುಪಿಗೆ ಹೋಗಿ ಬಂದುಬಿಡಿ. ಮತ್ತೆ ರಸ್ತೆಗಳು ಹಾಳಾದರೆ ಅವು ರಿಪೇರಿ ಆಗುವುದು, ಮತ್ತೆ ವಾಜಪೇಯಿ ಅವರು ಉಡುಪಿಗೆ ಬಂದಾಗ ಮಾತ್ರ. ಅಂದರೆ ನೀವು ಇನ್ನಷ್ಟು ವರ್ಷ ಕಾಯಬೇಕು. ಇಲ್ಲವೆ ಹಾಳಾದ ರಸ್ತೆಯಲ್ಲಿ ಕುಣಿಯುತ್ತಾ, ಕುಪ್ಪಳಿಸುತ್ತಾ ಉಡುಪಿಯ ಕೃಷ್ಣನ ಕಾಣಬೇಕು. ಪ್ರಯಾಣಕ್ಕೆ ರೆಡಿ ಮಾಡಿಕೊಳ್ಳುತ್ತಿದ್ದೀರಾ ? ಹ್ಯಾಪಿ ಜರ್ನಿ.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications