Get Updates
Get notified of breaking news, exclusive insights, and must-see stories!

ಶಬರಿಮಲೆ : ಲಕ್ಷಾಂತರ ಭಕ್ತರಿಂದ ಮಕರ ಜ್ಯೋತಿ ದರ್ಶನ

ಶಬರಿಮಲೆ : ಮಕರ ಸಂಕ್ರಮಣದ ಪವಿತ್ರದಿನವಾದ ಭಾನುವಾರ ಕುಂಭಮೇಳದಲ್ಲಿ 50 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪವಿತ್ರ ಗಂಗಾಸ್ನಾನ ಮಾಡಿದರೆ, ಇತ್ತ ದಕ್ಷಿಣದ ಪವಿತ್ರ ಕ್ಷೇತ್ರ ಶಬರಿಮಲೆಯ ಅಯ್ಯಪ್ಪನ್ನ ಸನ್ನಿಧಿಯಲ್ಲಿ ಲಕ್ಷಾಂತರ ಭಕ್ತಾದಿಗಳು ಮಕರ ಜ್ಯೋತಿಯ ದರ್ಶನ ಮಾಡಿದರು.

ಪೊನ್ನಂಬಲಮೇಡು ಬೆಟ್ಟಗಳ ಮಧ್ಯೆ ದಿಗಂತದಲ್ಲಿ ಸಂಜೆ ಸೂರ್ಯಾಸ್ತವಾದ ಬಳಿಕ ಪ್ರಕಟಗೊಂಡ ಪವಿತ್ರ ಜ್ಯೋತಿಯನ್ನು ದರ್ಶಿಸಿದ, ಭಕ್ತಾದಿಗಳು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಕೂಗುತ್ತಾ, ಭಕ್ತಿ ಪರವಶರಾಗಿ ಎರಡೂ ಕೈಗಳನ್ನು ಮೇಲೆತ್ತಿ, ಕೈ ಮುಗಿದು ನರ್ತಿಸಿದರು. ಜ್ಯೋತಿ ದರ್ಶನದಿಂದ ತಮ್ಮ ಬಾಳು ಕೃತಾರ್ಥವಾಯಿತೆಂಬ ಭಾವ ಎಲ್ಲರ ಮುಖದಲ್ಲೂ ಪ್ರಕಟಗೊಂಡಿತ್ತು.

ನವೆಂಬರ್‌ ತಿಂಗಳಿನಿಂದಲೇ ಸ್ವಾಮಿಯ ದರ್ಶನಕ್ಕೆ ತಂಡೋಪತಂಡವಾಗಿ ಜನರು ಬರುತ್ತಿದ್ದರಾದರೂ, ಮಕರ ಸಂಕ್ರಮಣದ ದಿನವಾದ ಭಾನುವಾರ ಶಬರಿಗಿರಿಯಲ್ಲಿ ಕಾಲಿಡಲೂ ಸ್ಥಳವಿಲ್ಲದಷ್ಟು ಭಕ್ತರು ನೆರೆದಿದ್ದರು. ದೇವಸ್ಥಾನದ ಅಧಿಕಾರಿಗಳ ರೀತ್ಯ ಭಾನುವಾರ 3 ಲಕ್ಷಕ್ಕೂ ಹೆಚ್ಚು ಜನರು ಗಿರಿಗೆ ಆಗಮಿಸಿದ್ದರು.

ಮಕರ ಸಂಕ್ರಮಣದ ದಿನ ಪವಿತ್ರ ಪಂಪಾ ನದಿಯಲ್ಲಿ ಮಿಂದು ಭಕ್ತರು ಜ್ಯೋತಿಯ ದರ್ಶನ ಮಾಡಿದರು. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರನ್ನು ನಿಯಂತ್ರಿಸಲು, ತಿರುವಾಂಕೂರು ದೇವಸ್ವಂ ಮಂಡಳಿ, ದೇವಸ್ಥಾನದ ಸಮಿತಿ, ಪೊಲೀಸರು ವಿಶೇಷ ಬಿಗಿ ಬಂದೋಬಸ್ತ್‌ ಮಾಡಿದ್ದರು.

ಕಳೆದ ವರ್ಷ ಜ್ಯೋತಿಯ ದರ್ಶನ ಸಂದರ್ಭದಲ್ಲಿ ಉಂಟಾಗಿದ್ದ ಅಪಘಾತಗಳ ಹಿನ್ನೆಲೆಯಲ್ಲಿ ಈ ಬಾರಿ ಭಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದೇ ತಿಂಗಳ 20ರಂದು ಅಯ್ಯಪ್ಪನ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ.

ಕುಂಭ ಸ್ನಾನ : ಅಲಹಾಬಾದ್‌ನ ತ್ರಿವೇಣಿ ಸಂಗಮದಲ್ಲಿ ತ್ರಿಶೂಲ, ಖಡ್ಗ ಹಿಡಿದ ಸಾವಿರಾರು ಸಂತರು, ಸಾಧುಗಳು, ವಿದೇಶೀಯರು, ಲಕ್ಷಾಂತರ ಮಂದಿ ಭಕ್ತಾಧಿಗಳು ಪವಿತ್ರ ಸ್ನಾನ ಮಾಡಿದರು. 12 ವರ್ಷಗಳಿಗೊಮ್ಮೆ ಬರುವ ಮಹಾ ಕುಂಭ ಮೇಳದಲ್ಲಿ ಸ್ನಾನ ಮಾಡಿ ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಆಗಮಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+