Get Updates
Get notified of breaking news, exclusive insights, and must-see stories!

ಜನವರಿ 15ರಿಂದ ಬೆಂಗಳೂರಿನಲ್ಲಿ ರಂಗಾಯಣ ಸಪ್ತಾಹ

ಬೆಂಗಳೂರು : ಮೈಸೂರಿನ ರಂಗಾಯಣವು ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಜನವರಿ 15ರಿಂದ 25ರವರೆಗೆ ನಾಟಕೋತ್ಸವವನ್ನು ನಡೆಸಲಿದೆ.

ಎಂಎಸ್‌ಐಎಲ್‌ನ ಸಹಯೋಗದಲ್ಲಿ ನಡೆಯುವ ನಾಟಕೋತ್ಸವವನ್ನು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್‌ ಸೋಮವಾರದಂದು ಉದ್ಘಾಟಿಸಲಿದ್ದಾರೆ. ಪ್ರತಿ ದಿನ ಸಂಜೆ ಏಳು ಗಂಟೆಗೆ ನಾಟಕ ಪ್ರದರ್ಶನ ಆರಂಭವಾಗುತ್ತದೆ. ಈ ಅವಧಿಯಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳು-

ಸೋಮವಾರ : ಕುವೆಂಪು ಅವರ ಶೂದ್ರ ತಪಸ್ವಿ, ನಿರ್ದೇಶನ- ರಂಗಾಯಣದ ಸಿ. ಬಸವಲಿಂಗಯ್ಯ

ಮಂಗಳವಾರ : ಕಾರ್ಲೋ ಗೋಲ್ಡೋನಿಯ ಸರ್ವೆಂಟ್‌ ಆಫ್‌ ಟು ಮಾಸ್ಟರ್ಸ್‌ ಆಧಾರಿತ ಪುಗಳೇಂದಿ ಪ್ರಹಸನ, ನಿರ್ದೇಶನ ಪ್ರಸನ್ನ

ಬುಧವಾರ : ಬ್ರೆಕ್ಟ್‌ನ ದಿ ರೆಸಿಸ್ಟೇಬಲ್‌ ರೈಸ್‌ ಆಫ್‌ ಅರ್ತುರೋಉಇ ನಾಟಕ ‘ಮಟಾಶ್‌ ರಾಜ’, ನಿರ್ದೇಶನ ಎಂ.ಎಸ್‌. ಸತ್ಯು

ಗುರುವಾರ : ಶೇಕ್ಸ್‌ಪಿಯರ್‌ನ ಒಥೆಲೋ, ನಿರ್ದೇಶನ- ಸಿ.ಜಿ.ಕೆ.

ಜನವರಿ 22 ಮತ್ತು 23ರಂದು, ಗಿರೀಶ್‌ ಕಾರ್ನಾಡ್‌ರ ‘ಟಿಪ್ಪುವಿನ ಕನಸುಗಳು’, ನಿರ್ದೇಶನ- ಸಿ. ಬಸವಲಿಂಗಯ್ಯ

ಜನವರಿ 25 : ಬ್ರೆಕ್ಟ್‌ನ ದಿ ಕಕೇಶಿಯನ್‌ ಚಾಕ್‌ ಸರ್ಕಲ್‌ನ ರೂಪಾಂತರ ಧರ್ಮಪುರಿಯ ಬಳಪದ ವೃತ್ತ , ನಿರ್ದೇಶನ ಸಿ. ಬಸವಲಿಂಗಯ್ಯ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+