Get Updates
Get notified of breaking news, exclusive insights, and must-see stories!

25 ವರ್ಷ -ಕಾ-ಯಿ-ರಿ, ಯಾರು ಮುಂದೆ-ನ್ನು-ವು-ದು ಸ್ಪಷ್ಟ-ವಾ-ಗು-ತ್ತ-ದೆ- ಜಾರ್ಜ್‌

ಮಂಗಳೂರು : 21ನೇ ಶತಮಾನ ಭಾರತದ್ದಾಗಿರುತ್ತದೆ ಎಂಬ ಆಶಾವಾದವಿದ್ದರೂ ಚೀನಾದಂತಹ ಪ್ರತಿಸ್ಪರ್ಧಿ ದೇಶಗಳೊಂದಿಗಿನ ಓಟದಲ್ಲಿ ಭಾರತ ಹಿಂದೆ ಬೀಳಬಾರದು ಎಂದು ಕೇಂದ್ರ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಹೇಳಿದ್ದಾರೆ.

ಅವರು ಶುಕ್ರವಾರ ರಾತ್ರಿ, ಮಂಗಳೂರಿನ ಕರಾವಳಿ ಉತ್ಸವದಲ್ಲಿ, ದಕ್ಷಿಣ ಕನ್ನಡದ 200 ವರ್ಷಗಳ ಇತಿಹಾಸ ವಿವರಿಸುವ ‘ಪೊಲಿ’ (ಕೆನರಾ-200) ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಸಣ್ಣ ಪುಟ್ಟ ದೇಶಗಳ ಪ್ರಗತಿಯನ್ನೂ ನಾವು ಕಡೆಗಣಿಸುವಂತಿಲ್ಲ. ಆದರೂ ಚೀನಾ ನಮ್ಮ ಮುಖ್ಯ ಪ್ರತಿಸ್ಪರ್ಧಿಯಾಗಿದೆ. ಅದು ನಮಗಿಂತ ಎರಡು ಪಾಲು ಮುಂದಿದೆ. ಒಲಿಂಪಿಕ್ಸ್‌ನಲ್ಲಿಯೂ ಚೀನಾ 3ನೇ ಸ್ಥಾನದಲ್ಲಿದೆ. ಈ ರೇಸಿನಲ್ಲಿ ಇನ್ನು 25 ವರ್ಷಗಳಲ್ಲಿ ಯಾರು ಮುಂದು ಎನ್ನುವುದು ನಿರ್ಧಾರವಾಗುತ್ತದೆ ಎಂದು ಫರ್ನಾಂಡಿಸ್‌ ಹೇಳಿದರು.

ಶಿಸ್ತು , ಪ್ರಾಮಾಣಿಕತೆ ಮತ್ತು ರಾಷ್ಟ್ರೀಯತೆಗಳು ಕಾರ್ಯ ರೂಪಕ್ಕೆ ಬಂದರೆ ನಾವು ಮುಂದುವರೆಯುವುದು ಸಾಧ್ಯ.

ವಿದೇಶೀ ಆಕ್ರಮಣಗಳ ಬಗ್ಗೆ ವಿಶದವಾಗಿ ತಿಳಿಯಲು ಇತಿಹಾಸದ ಅಗತ್ಯವಿದೆ. ಕರಾವಳಿಯಲ್ಲಿ ಇತಿಹಾಸ ಅಧ್ಯಯನದ ಬಗ್ಗೆ ಅಂತಹ ಆಸಕ್ತಿ ಕಾಣುವುದಿಲ್ಲ. ಇಂತಹ ಸಂದರ್ಭದಲ್ಲಿ ಪೊಲಿ ಪುಸ್ತಕ ಬಿಡುಗಡೆಯಾಗುತ್ತಿರುವುದು ಸಂತೋಷ ಎಂದು ಅವರು ಹೇಳಿದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+