ಸಂಕ್ರಾಂತಿ ದಿನದಿಂದ ನಗರದಲ್ಲಿ ಶ್ರೀಲಂಕಾ-ಭಾರತ ನಾಟಕಕಾರರ ಕಮ್ಮಟ
ಬೆಂಗಳೂರು : ಎರಡು ವಾರಗಳ ಅವಧಿಯ ಶ್ರೀಲಂಕಾ ಹಾಗೂ ಭಾರತದ ನಾಟಕಕಾರರ 14 ದಿನಗಳ ಕಾರ್ಯಾಗಾರ ಜನವರಿ 14 ರಿಂದ ನಗರದಲ್ಲಿ ಆರಂಭವಾಗಲಿದೆ.
ರಂಗ ಕಲಾವಿದರ ಪ್ರಶಿಕ್ಷಣ ಶಾಲೆ, ಲಂಡನ್‌ನ ರಾಯಲ್ ಕೋರ್ಟ್ ಥಿಯೇಟರ್, ಬ್ರಿಟಿಷ್ ಕೌನ್ಸಿಲ್ ಮತ್ತು ಇಕ್ಯುಮೆನ್ಶಿಯಲ್ ಕ್ರಿಶ್ಚಿಯನ್ ಸೆಂಟರ್ ಈ ಕಾರ್ಯಾಗಾರವನ್ನು ಆಯೋಜಿಸಿದ್ದು, 12 ಮಂದಿ ಭಾರತೀಯ ನಾಟಕಕಾರರು ಮತ್ತು ಇಬ್ಬರು ಶ್ರೀಲಂಕಾದ ನಾಟಕಕಾರರು ಭಾಗವಹಿಸಲಿದ್ದಾರೆ ಎಂದು ರಂಗ ಕಲಾವಿದರ ಪ್ರಶಿಕ್ಷಣ ಶಾಲೆಯ ಜಗದೀಶ್ ರಾಜಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಜಗದೀಶ್ ಅವರು ಕಾರ್ಯಾಗಾರ ಮುಗಿದ ನಂತರ ತಮ್ಮ ಗುಂಪು, ಹೊಸ ನಾಟಕಗಳನ್ನು ಪರಿಚಯಿಸುವ ನಾಟಕೋತ್ಸವವನ್ನು ಈ ವರ್ಷದ ಕೊನೆ ಭಾಗದಲ್ಲಿ ಹಮ್ಮಿಕೊಳ್ಳಲಿದೆ. ಅಲ್ಲದೆ ಇತರ ದೇಶದ ಇತರ ನಗರಗಳಲ್ಲಿಯೂ ನಾಟಕೋತ್ಸವಗಳನ್ನು ಆಯೋಜಿಸುವ ಯೋಚನೆಯಿದೆ ಎಂದರು.
ಜನವರಿ 28ಕ್ಕೆ ಮುಕ್ತಾಯವಾಗಲಿರುವ ಕಾರ್ಯಾಗಾರದ ಮೊದಲ ಗೋಷ್ಠಿಯಲ್ಲಿ ನಾಟಕ ರಚನೆಯ ಕೌಶಲ್ಯದ ಬಗ್ಗೆ ವಿವರಿಸಲಾಗುವುದು. ನಾಟಕ ರಚನೆಯ ಸ್ವರೂಪ, ಸಂಭಾಷಣೆ, ಪಾತ್ರಗಳು, ವಿವರಣೆ, ವೇದಿಕೆಯ ಬಗ್ಗೆ ಕಾರ್ಯಾಗಾರದಲ್ಲಿ ಶಿಬಿರಾರ್ಥಿಗಳಿಗೆ ತಿಳಿಸಲಾಗುವುದು. ಕಾರ್ಯಾಗಾರದ ಮೊದಲ ಭಾಗದಲ್ಲಿ ನಾಟಕಕಾರರಿಗೆ ಮಾಹಿತಿ ನೀಡಲಾಗುವುದು. ನಂತರ ಶಿಬಿರಾರ್ಥಿಗಳು ಸ್ವತಃ ರಚಿಸುವ ನಾಟಕಗಳ ಕುರಿತು ವಿಶ್ಲೇಷಣೆ ನಡೆಯುತ್ತದೆ. ಕೊನೆಯದಾಗಿ ನಾಟಕಕಾರರ ಬರಹಗಳಿಗೆ ಅಗತ್ಯವಿರುವ ಕೌಶಲ್ಯಗಳ ಬಗ್ಗೆ ವಿವರಿಸಲಾಗುವುದು ಎಂದು ಜಗದೀಶ್ ಕಾರ್ಯಾಗಾರದ ಸ್ವರೂಪದ ಬಗ್ಗೆ ಹೇಳಿದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications