Get Updates
Get notified of breaking news, exclusive insights, and must-see stories!

ವೀರಪ್ಪನ್‌ ಸಹಚರರ ಬಂಧನಕ್ಕೆ ತಮಿಳುನಾಡು ಗ್ರಾಮಸ್ಥರ ಪ್ರತಿಭಟನೆ

*ಪಾಪ್ರಿ ಶ್ರೀ ರಾಮನ್‌

ಚೆನ್ನೈ: ಇತ್ತೀಚೆಗೆ ಬಂಧನಕ್ಕೊಳಗಾದ ವೀರಪ್ಪನ್‌ ಸಹಚರರ ಬಂಧನದ ಸಮಯದಲ್ಲಿ ತಮಿಳುನಾಡಿನ ಗ್ರಾಮಗಳಿಗೆ ಸೇರಿದ ಕೆಲ ಗ್ರಾಮಸ್ಥರು ಎಸ್‌ಟಿಎಫ್‌ ಪಡೆಗೆ ತೊಂದರೆ ಉಂಟು ಮಾಡಿದ್ದಾರೆ ಹಾಗೂ ರಸ್ತೆಗಳಲ್ಲಿ ಕಲ್ಲುಗುಂಡುಗಳನ್ನು ರಾಶಿಹಾಕುವ ಮೂಲಕ ಕಾಡುಗಳ್ಳ ವೀರಪ್ಪನ್‌ ಸಹಚರರ ಬಂಧನವನ್ನು ಕೆಲ ಗಂಟೆಗಳ ಕಾಲ ವಿಳಂಬ ಪಡಿಸಿರುವ ವಿಷಯ ಬೆಳಕಿಗೆ ಬಂದಿದೆ.

ಸುಮಾರು 100 ಹಳ್ಳಿಗರು ಎಸ್‌ಟಿಎಫ್‌ ಪಡೆಯ ಸದಸ್ಯರನ್ನು ಈರೋಡ್‌ ಜಿಲ್ಲೆಯ ಬರಗೂರು ಅರಣ್ಯ ಪ್ರದೇಶ ವಲಯದಲ್ಲಿ ತಡೆದು ನಿಲ್ಲಿಸಿದ್ದಾರೆ. ಪೊಲೀಸ್‌ ಅಧಿಕಾರಿಗಳು ಹಾಗೂ ವೀರಪ್ಪನ್‌ ಸಹಚರರ ಬಂಧನಕ್ಕೆ ಪ್ರತಿಭಟನೆ ಸಲ್ಲಿಸಿದ ಹಳ್ಳಿಗರ ನಡು ವೆ ಮಾತಿನ ಚಕಮಕಿ ನಡೆದಿದ್ದು , ಕೊನೆಗೆ ಬಂಧಿತರನ್ನು ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರು ಪಡಿಸಲು ಕರೆದೊಯ್ಯುತ್ತಿರುವುದಾಗಿ ಪೊಲೀಸರು ಭರವಸೆ ನೀಡಿದ ನಂತರ ಹಳ್ಳಿಗರು ತಮ್ಮ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.

ವೀರಪ್ಪನ್‌ಗೆ ಆಹಾರ ಸರಬರಾಜು ಮಾಡುತ್ತಿದ್ದವರನ್ನು ಹಾಗೂ ಬಟ್ಟೆ ಹೊಲಿದು ಕೊಡುತ್ತಿದ್ದವರನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಸಮಜಾಯಿಷಿ ನೀಡುತ್ತಿರುವ ದೃಶ್ಯಗಳನ್ನು ತಮಿಳು ಭಾಷೆಯ ವಾಹಿನಿಯಾಂದು ಪ್ರಸಾರ ಮಾಡಿದೆ. ಎಸ್‌ಟಿಎಫ್‌ನ ಹಿಂದಿನ ಕಾರ್ಯಾಚರಣೆಗಳಲ್ಲಿ ಪ್ರಸ್ತುತ ಬಂಧನಕ್ಕೊಳಗಾಗಿರುವ ಆಪಾದಿತರು ಎಸ್‌ಟಿಎಫ್‌ ಮೇಲೆ ಗುಂಡಿನ ದಾಳಿ ನಡೆಸಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+