Get Updates
Get notified of breaking news, exclusive insights, and must-see stories!

ಎಂಜಿ ರಸ್ತೆ ಕಟ್ಟಡದಿಂದ ಹಾರಿ ಕ್ರೆಡಿಟ್‌ ಕಾರ್ಡ್‌ ಏಜೆಂಟ್‌ ಸಾವು

ಬೆಂಗಳೂರು : ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಏಜೆಂಟ್‌ ಹಾಗೂ ಶ್ರೀನಿವಾಸ ನಗರದ ನಿವಾಸಿ ಜೀವನ್‌ ಮುಕ್ತ (35) ಎನ್ನುವ ವ್ಯಕ್ತಿ ಶುಕ್ರವಾರ ಎಂಜಿ ರಸ್ತೆಯ ಮಿಠಲ್‌ ಟವರ್ಸ್‌ನ 13 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕಳೆದ ಅಕ್ಟೋಬರ್‌ನಿಂದೀಚೆಗೆ ಎಂಜಿ ರಸ್ತೆಯಲ್ಲಿ ನಡೆದ ಮೂರನೇ ಆತ್ಮಹತ್ಯಾ ಪ್ರಕರಣ.

ತೀವ್ರ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದ ಜೀವನ್‌ ಮುಕ್ತ , ಮಾನಸಿಕವಾಗಿ ಜರ್ಜರಿತರಾಗಿದ್ದ ರು. ಕೆಲಸಕ್ಕೆಂದು ಮನೆ ಬಿಟ್ಟವರು ಬೆಳಿಗ್ಗೆ 9.15 ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಅಲಸೂರು ಪೊಲೀಸರು ತಿಳಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಆತ, ನಿಮ್ಹಾನ್ಸ್‌ನಲ್ಲಿ ಪರೀಕ್ಷೆಗೊಳಗಾಗಿದ್ದ.

ಕಳೆದ ಅಕ್ಟೋಬರ್‌ನಲ್ಲಿ ಸ್ವಾಮಿನಾಥನ್‌ ಎನ್ನುವ ಸಾಫ್ಟ್‌ವೇರ್‌ ಇಂಜಿನಿಯರ್‌ ಎಂಜಿ ರಸ್ತೆಯ ರಹೇಜಾ ಟವರ್ಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆನಂತರ ಆಂಧ್ರಪ್ರದೇಶದ ಶ್ರೀನಿವಾಸ್‌, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಎಂಜಿ ರಸ್ತೆಯ ಒಬೆರಾಯ್‌ ಹೊಟೇಲ್‌ನ ಕೊಠಡಿಯಾಂದರಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯಾ ಪ್ರಕರಣಗಳ ತವರು : ದೇಶದಲ್ಲಿಯೇ ಅತಿ ಹೆಚ್ಚು ಆತ್ಮಹತ್ಯೆಗಳು ಸಂಭವಿಸುತ್ತಿರುವ ನಗರ ಎನ್ನುವ ಕುಖ್ಯಾತಿಗೆ ಬೆಂಗಳೂರು ಒಳಗಾಗಿದೆ. ಇತ್ತೀಚಿನ ಸಮೀಕ್ಷೆಯಾಂದು ಪ್ರತಿವರ್ಷ ಬೆಂಗಳೂರಿನಲ್ಲಿ ಕನಿಷ್ಠ 2000 ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತವೆ ಎಂದು ತಿಳಿಸಿತ್ತು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+