Get Updates
Get notified of breaking news, exclusive insights, and must-see stories!

ಕಿಷ್ಕೆಂಧೆಗೆ ನಮಸ್ಕಾರ ! ಜ.22 ರಂದು ಶಿವಾಜಿನಗರ ಬಸ್ಟಾಂಡ್‌ ಉದ್ಘಾಟನೆ

ಬೆಂಗಳೂರು : ಶಿವಾಜಿ ನಗರದ ಬಸ್‌ ನಿಲ್ದಾಣ ನಿರ್ಮಾಣ ಕಾರ್ಯ ಮುಗಿಯುತ್ತಿದೆ. ಜನವರಿ 22ರಂದು ಸಂಜೆ ನಡೆಯುವ ಔಪಚಾರಿಕ ಉದ್ಘಾಟನೆಯ ನಂತರ, ಈ ವರೆಗೆ ಶಿವಾಜಿ ನಗರದ ಕಿಷ್ಕಿಂಧೆ ರಸ್ತೆಯಲ್ಲಿ ನಿಂತು ಧೂಳು ಮೆತ್ತಿಸಿ ಕೊಳ್ಳುತ್ತಿದ್ದ ಬಿಟಿಎಸ್‌ ಬಸ್‌ಗಳು, ಬಸ್‌ ಸ್ಟ್ಯಾಂಡಿನಲ್ಲಿ ಆರಾಮವಾಗಿ ರೆಸ್ಟ್‌ ತೆಗೆದುಕೊಳ್ಳಬಹುದು.

ಬಿಎಂಟಿಸಿ ಮೂಲಗಳ ಪ್ರಕಾರ ಮೆಗಾಸಿಟಿ ಯೋಜನೆಯಡಿಯಲ್ಲಿ ಒಂದು ವರ್ಷದ ಕೆಳಗೆ ಆರಂಭವಾದ ಬಸ್‌ ನಿಲ್ದಾಣದ ಕಾಮಗಾರಿಗೆ 8.5 ಕೋಟಿ ರೂಪಾಯಿ ಖರ್ಚಾಗಿದೆ. ಈ ಮೊತ್ತದ ಅರ್ಧ ಭಾಗವನ್ನು ರಾಜ್ಯ ನಗರಾಭಿವೃದ್ದಿ ಮತ್ತು ಹಣಕಾಸು ನಿಗಮ ಭರಿಸಿದೆ.

35 ಫ್ಲಾಟ್‌ ಫಾರ್ಮ್‌ಗಳಿರುವ ಬಸ್‌ ನಿಲ್ದಾಣ 1.8 ಎಕ್ರೆಯಷ್ಟು ವಿಸ್ತಾರವಾಗಿದೆ. ಎರಡು ಅಂತಸ್ತುಗಳಿರುವ ಬಸ್‌ ನಿಲ್ದಾಣದಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದಕ್ಕೂ ಅವಕಾಶವಿದೆ. ನೆಲ ಅಂತಸ್ತಿನಲ್ಲಿ ಬಿಟಿಎಸ್‌ ಬಸ್‌ ನಿಲ್ದಾಣ. ಪಕ್ಕದಲ್ಲಿರುವ 25 ಸಾವಿರ ಚದರ ಅಡಿ ವಿಸ್ತಾರದ ಕಚೇರಿ ಸ್ಥಳ ಬಾಡಿಗೆದಾರರಿಗಾಗಿ ಕಾಯುತ್ತಿದೆ.

ಬಸ್‌ ನಿಲ್ದಾಣದ ಕಾಮಗಾರಿ ಮೂರು ತಿಂಗಳ ಹೆಚ್ಚಿನ ಅವಧಿಯನ್ನು ತೆಗೆದುಕೊಂಡಿದೆ. ಜನವರಿ 14 ಸಂಕ್ರಾಂತಿಯಂದೇ ಬಸ್‌ ನಿಲ್ದಾಣ ಕ್ರಿಯಾಶೀಲವಾಗಬೇಕಿತ್ತು. ಆದರೆ ಇನ್ನೂ ಕೂಡ ಡ್ರೆೃನೇಜ್‌ ಕಾಮಗಾರಿ ಮುಗಿಯದ ಕಾರಣ ಉದ್ಘಾಟನೆ ಜನವರಿ 22ರಂದು ನಡೆಯಲಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+