ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗನೇ ಮಾನವನಾದರೆ! ಬಂದೇ ಬರುತಾವ ಕಾಲ

By Staff
|
Google Oneindia Kannada News

ವಾಷಿಂಗ್ಟನ್‌ : ಮಂಗನಿಂದ ಮಾನವ ಅನ್ನೋ ಮಾತು ಗೊತ್ತಿರುವುದೇ ? ಮಂಗನೇ ಮಾನವನಾದರೆ? ಹೌದು, ಆ ಕಾಲ ಸನ್ನಿಹಿಸಿದೆ. ಅಮೆರಿಕೆಯ ವಿಜ್ಞಾನಿಗಳು ಡಿಎನ್‌ಎ ರಚನೆಯನ್ನೇ ಬದಲಿಸಿದ ಹೊಸ ತಳಿಯ ಪುಟ್ಟ ಮಂಗನನ್ನು ಹುಟ್ಟು ಹಾಕಿದ್ದಾರೆ. ಮನುಷ್ಯನ ಡಿಎನ್‌ಎ ರಚನೆಗೆ ತೀರಾ ಹತ್ತಿರಾದ ಡಿಎನ್‌ಎ ರಚನೆಯನ್ನೇ ಹೊಂದಿರುವ ಮಂಗನ ಮೇಲೆ ಈ ಹಿಂದೆ ಇಂಥ ಪ್ರಯೋಗ ನಡೆದಿರಲಿಲ್ಲ. ವಿಜ್ಞಾನಿಗಳು ಯುರೇಕಾ ಹೇಳುತ್ತಿದ್ದರೆ, ಸಂಪ್ರದಾಯವಾದಿಗಳು ಇದು ಮನುಕುಲದ ಸರ್ವನಾಶ ಎಂದು ತಗಾದೆ ತೆಗೆದಿದ್ದಾರೆ.

ಮನುಷ್ಯನನ್ನು ಬಲಿ ತೆಗೆದುಕೊಳ್ಳುತ್ತಿರುವ ಕ್ಯಾನ್ಸರ್‌, ಇದ್ದಕ್ಕಿದ್ದಂತೆ ಕುಸಿಯುವಂತೆ ಮಾಡುವ ಮಧುಮೇಹ, ಸಜೀವ ಸುಡುತ್ತಿರುವ ಏಡ್ಸ್‌ ಇವೇ ಮೊದಲಾದ ರೋಗಗಳನ್ನು ಬುಡ ಸಮೇತ ಅಲ್ಲಾಡಿಸುವ ನಿಟ್ಟಿನಲ್ಲಿ ಇದು ಅಮೆರಿಕ ವಿಜ್ಞಾನಿಗಳ ಮಹತ್ವದ ಸಾಧನೆ ಅನ್ನೋದರಲ್ಲಿ ಎರಡು ಮಾತಿಲ್ಲ. ಇದೇನಪ್ಪಾ ಹೊಸ ಕೋತಿಗೂ, ಕಾಯಿಲೆ ಓಡಿಸೋಕೂ ಏನು ಸಂಬಂಧ ಅಂದಿರಾ?

ಬದಲಾಯಿಸಿದ ತಳಿಯ ಮನುಷ್ಯನಂತೆ ಡಿಎನ್‌ಎ ಹೊಂದಿರುವ ಪ್ರಾಣಿಗಳ ದೇಹಕ್ಕೆ ರೋಗಾಣುಗಳನ್ನು ಹೊಕ್ಕಿಸಿ, ನಂತರ ಅದರ ಇಂಚಿಂಚೂ ಬೆಳವಣಿಗೆಯನ್ನು ಹೆಕ್ಕಿ, ಪಕ್ಕಾ ಕಾರಣ ಪತ್ತೆ ಮಾಡಿ, ಅದಕ್ಕೆ ಚಿಕಿತ್ಸೆ ನೀಡುವುದು ಈ ಪ್ರಯೋಗದ ಉದ್ದಿಶ್ಯ. ರೋಗ ಏನು? ಯಾಕೆ? ಅಂತಲೇ ಪತ್ತೆಯಾಗದಿದ್ದಲ್ಲಿ ಚಿಕಿತ್ಸೆ ಕೊಡೋದು ಹೇಗೆ ?

ಅಂದಹಾಗೆ ಈ ಹೊಸ ತಳಿಯ ಕೋತಿ ಹೆಸರು ಆ್ಯಂಡಿ. ಆರೋಗ್ಯವಾಗಿದ್ದು, ಚುರುಕಾಗಿದೆ. ಜೆಲ್ಲಿ ಮೀನಿನ ಪ್ರೋಟೀನನ್ನು ತೆಗೆದು ಈ ಕೋತಿಯ ಡಿಎನ್‌ಎಗೆ ಸೇರಿಸಲಾಗಿದೆ. ತನ್ನ ಇಬ್ಬರು (ಒರಿಜಿನಲ್‌ ಕೋತಿಗಳ) ರೂಂ ಮೇಟ್‌ ಜೊತೆಯಲ್ಲಿ ಆಡಿಕೊಂಡಿದೆ. ಈಗಾಗಲೇ ಮೊಲ, ಕುರಿ ಮುಂತಾದ ಪ್ರಾಣಿಗಳ ಮೇಲೆ ಇಂಥ ಪ್ರಯೋಗಗಳು ಈವರೆಗೆ ಯಶಸ್ವಿಯಾಗಿ ನಡೆದಿವೆ. ಆದರೆ ಮಂಗನ ಮೇಲಾಗುತ್ತಿರುವುದು ಇದೇ ಮೊದಲು.

ಅದೇನೇ ಇರಲಿ, ರೋಗ ಪತ್ತೆಯಾಗಿ, ಕಳೆದು ಹೊಗುತ್ತಿರುವ ಜೀವ ಉಳಿಸಿದರೆ ಸಾಕು. ನಾವು ಹೊಸ ತಳಿಯ ಪ್ರಾಣಿಗಳನ್ನು ಹುಟ್ಟು ಹಾಕುತ್ತಿರುವುದು ರೋಗ ಕಿತ್ತೆಸೆಯಲೆಂದು. ಜನ ಇದನ್ನು ಮನದಟ್ಟು ಮಾಡಿಕೊಳ್ಳಬೇಕು. ನಮ್ಮ ಸಂಶೋಧನೆಗಳಿಗೆ ಸಹಕರಿಸಬೇಕು ಎಂದು ಆರೆಗನ್‌ ಸಂಶೋಧನಾ ವಿಭಾಗದ ಸಂಶೋಧಕ ಸ್ಯಾಟನ್‌ ಕೇಳಿಕೊಂಡಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X