ಹೈದರಾಬಾದಿಗೆ ಮುಖಭಂಗ!ಸೋಮವಾರ ಬೆಂಗಳೂರಿಗೆ ಲೀ ಪೆಂಗ್
(ಇನ್ಫೋ ವಿಶೇಷ ವಾರ್ತೆ)
ಬೆಂಗಳೂರು : ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ನೆರೆಯ ಹೈದರಾಬಾದನ್ನು ಕರ್ನಾಟಕದ ರಾಜಧಾನಿ ಮತ್ತೊಮ್ಮೆ ಹಿಂದೂಡಿದೆ. ಚೀನಾದ ಮುಖಂಡ ಲೀ ಪೆಂಗ್ ಸೋಮವಾರದಿಂದ (ಜ.15) ಎರಡು ದಿನಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸುವುದನ್ನು ಅಧಿಕೃತ ಮೂಲಗಳು ಖಚಿತಪಡಿಸಿವೆ. ಒಟ್ಟಿನಲ್ಲಿ ಭಾರತದ ಸಿಲಿಕಾನ್ ಸಿಟಿ ಮತ್ತೊಬ್ಬ ವಿದೇಶಿ ಗಣ್ಯನ ಸ್ವಾಗತಕ್ಕೆ ಸಜ್ಜಾಗಿದೆ.
ಲೀ ಪೆಂಗ್‌ರ ಬೆಂಗಳೂರು ಭೇಟಿ ಹಲವು ದೃಷ್ಟಿಗಳಿಂದ ಮಹತ್ವದ್ದು. ಮುಖ್ಯವಾಗಿ ಅವರು ಐಟಿಯಲ್ಲಿ ಬೆಂಗಳೂರಿಗೆ ಪ್ರಬಲ ಸ್ಪರ್ಧೆ ಒಡ್ಡುತ್ತಿರುವ ಹೈದರಾಬಾದ್‌ನ (ಚಂದ್ರಬಾಬು ನಾಯ್ಡು) ಆಹ್ವಾನವನ್ನು ಪಕ್ಕಕ್ಕಿರಿಸಿದ್ದಾರೆ. ಇದು ಬೆಂಗಳೂರಿಗೆ ಸಂದ ಗೌರವವೆನ್ನುವುದರಲ್ಲಿ ಮತ್ತೊಂದು ಮಾತಿಲ್ಲ .
ಸೋಮವಾರದ ಕಾರ್ಯಕ್ರಮದಲ್ಲಿ ಲೀ ಅವರು, ರಾಜ್ಯಪಾಲೆ ರಮಾದೇವಿ ಹಾಗೂ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡುವರು. ಮರುದಿನ ಬೆಂಗಳೂರಿನ ಐಟಿ ಮಕುಟ ಇನ್ಫೋಸಿಸ್ ಮತ್ತು ಐಟಿ ಪಾರ್ಕ್‌ಗೆ ಭೇಟಿ ನೀಡಿದ ನಂತರ ಬೀಜಿಂಗ್‌ಗೆ ವಾಪಸ್ಸಾಗುವರು.
ಹೈದರಾಬಾದ್‌ಗೆ ಮುಖಭಂಗ : ಬ್ರಾಂಡ್‌ನೇಮ್ ಸ್ವಾಮಿ . ಹೈದರಾಬಾದ್‌ಗೆ ಎಲ್ಲಿಂದ ಬರಬೇಕು ಬೆಂಗಳೂರಿನ ಅಗ್ಗಳಿಕೆ. ಇನ್ನು ಮಹಾನಗರಗಳಾದ ಮುಂಬಯಿ, ದೆಹಲಿಗಳು ಕೇವಲ ನಗರಗಳು ಮಾತ್ರ ಎಂದು ಲೀ ಪೆಂಗ್ ತಮ್ಮ ಭೇಟಿಗೆ ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಹಿರಿಯ ಅಧಿಕಾರಿಯಾಬ್ಬರು ಕಾರಣ ನೀಡುತ್ತಾರೆ.
ಇತ್ತೀಚೆಗಿನ ತಮ್ಮ ಚೀನಾ ಭೇಟಿಯಲ್ಲಿ ಚಂದ್ರಬಾಬು ನಾಯ್ಡು ಅವರು ಲೀ ಪೆಂಗ್ ಹೈದರಾಬಾದ್‌ಗೆ ಭೇಟಿ ನೀಡುವಂತೆ ನೆಲ ಮುಗಿಲು ಒಂದಾಗುವ ಪ್ರಯತ್ನ ನಡೆಸಿದ್ದರು. ಆದರೆ, ಲೀ ಅವರು ಬೆಂಗಳೂರನ್ನೇ ಆಯ್ದುಕೊಂಡಿದ್ದಾರೆ. ಇಷ್ಟಕ್ಕೂ ಭಾರತದಾಚೆ ಹೈದರಾಬಾದ್ ಬೆಂಗಳೂರಿನಷ್ಟೇನೂ ಹೆಸರಾಗಿಲ್ಲ ಅನ್ನುವುದು ಮತ್ತೊಬ್ಬ ಉನ್ನತ ಅಧಿಕಾರಿಯ ಅಂಬೋಣ.
ಕಳೆದ ವರ್ಷದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಜಪಾನಿನ ಪ್ರಧಾನಿ ಯಾಶಿರೊ ಮೋರಿ ತಮ್ಮ ಪ್ರವಾಸವನ್ನು ಶುರು ಮಾಡಿದ್ದುದು ಬೆಂಗಳೂರಿನಿಂದಲೇ. ಆಗ ಕೂಡ ಹೈದರಾಬಾದ್ ಮುಖ ಕಪ್ಪಗಾಗಿತ್ತು . ಹೈದರಾಬಾದ್‌ಗೆ ಸಮಾಧಾನ ಪಟ್ಟುಕೊಳ್ಳುವ ವಿಷಯವೆಂದರೆ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್‌ರ ಭೇಟಿ. ಉಳಿದವರು ದೂರದಿಂದಲೇ ಹಲೋ ಹೇಳಿದರು.
ಯಾರೀ ಲೀ ಪೆಂಗ್ ? : ಅವರು ಚೀನಾದ ಮಾಜಿ ಪ್ರಧಾನಿ. ಪ್ರಸ್ತುತ, ಚೀನಾದ ನ್ಯಾಶನಲ್ ಪೀಪಲ್ಸ್ ಕಾಂಗ್ರೆಸ್‌ನ ಅಧ್ಯಕ್ಷ . ಮತ್ತೂ ಸ್ಪಷ್ಟವಾಗಿ ಹೇಳುವುದೆಂದರೆ ಅಧ್ಯಕ್ಷ ಜಿಯಾಂಗ್ ಜೆಮಿನ್ ಬಿಟ್ಟರೆ ದೇಶದ ಎರಡನೆ ದೊಡ್ಡ ಹಿರೇಮಣಿ. ಭಾರತದ ಲೋಕಸಭಾ ಸದಸ್ಯರಿಗೆ ಸಮನಾಗುವ ಹುದ್ದೆಯನ್ನು ಅವರಲ್ಲಿ ಅಲಂಕರಿಸಿದ್ದಾರೆ.
ಸದ್ಯದ ಭೇಟಿಯಲ್ಲಿ ಪೆಂಗ್ ಬೆಂಗಳೂರಿನಲ್ಲಿ ಯಾವುದೇ ಒಪ್ಪಂದಗಳಿಗೆ ಬರುವಂತಿಲ್ಲ . ಅವರದ್ದು ಅಧಿಕೃತ ಭೇಟಿಯಲ್ಲ . ಆದರೆ, ಭವಿಷ್ಯದ ದೃಷ್ಟಿಯಿಂದ ಈ ಭೇಟಿ ಮಹತ್ವದ್ದೆನಿಸಿದೆ. ಚೀನಾ, ಐಟಿ ಕ್ಷೇತ್ರದಲ್ಲಿ ಭಾರತಕ್ಕೆ ಹಿರಿಯಣ್ಣ . ಈ ನಿಟ್ಟಿನಲ್ಲಿ ಪೆಂಗ್ ಭೇಟಿ ಭಾರತ ಹಾಗೂ ಚೀನಾಗಳ ಐಟಿ ಬಾಂಧವ್ಯವನ್ನು ವೃದ್ಧಿಗೊಳಿಸುವ ನಿರೀಕ್ಷೆಯಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications