Get Updates
Get notified of breaking news, exclusive insights, and must-see stories!

ವಾರ್ನ್‌ ಕಪಿಚೇಷ್ಟೆ ! ಮೆಲ್ಬೋರ್ನ್‌ ಪೊಲೀಸರಿಂದ ಎಚ್ಚರಿಕೆ

*ಗ್ರೆಗ್‌ ಬಕಲ್‌

ಮೆಲ್ಬೋರ್ನ್‌ : ಫೋನಿನಲ್ಲಿ ಇಂಗ್ಲೆಂಡ್‌ ಹುಡುಗಿಯಾಬ್ಬಳೊಂದಿಗೆ ಸೆಕ್ಸ್‌ ಬಗ್ಗೆ ಹರಟಿ, ದೊಡ್ಡ ಸುದ್ದಿ ಮಾಡಿದ್ದ ಆಸ್ಟ್ರೇಲಿಯಾದ ಯಶಸ್ವಿ ಲೆಗ್‌ ಸ್ಪಿನ್ನರ್‌ ಶೇನ್‌ ವಾರ್ನ್‌ ಗುರುವಾರದ ತಮ್ಮ ಪುನರಾಗಮನದಲ್ಲಿ ಮತ್ತೆ ಪೊಲೀಸರ ಎಚ್ಚರಿಕೆ ಮಾತುಗಳನ್ನು ಎದುರಿಸಬೇಕಾಯಿತು.

ವಿಂಡೀಸ್‌ ವಿರುದ್ಧದ ಒಂದು ದಿನದ ಪಂದ್ಯದಲ್ಲಿ ಫೀಲ್ಡ್‌ ಮಾಡುತ್ತಿದ್ದಾಗ, ಅಭಿಮಾನಿಗಳು ಕಣಕ್ಕೆ ಟೆನಿಸ್‌ ಬಾಲ್‌ ಎಸೆದರು. ವಾರ್ನ್‌ ಅದನ್ನು ಜನಸಂದಣಿಯತ್ತ ಒದ್ದರು. ಇಷ್ಟಕ್ಕೇ ಉತ್ತೇಜಿತರಾದ ವೀಕ್ಷಕರು ಒಂದಂರ ಹಿಂದೊಂದರಂತೆ ಚೆಂಡು ಎಸೆಯಲು ಶುರುವಿಟ್ಟರು. ವಾರ್ನ್‌ ಕೈಲಾದಷ್ಟೂ ವಾಪಸ್ಸು ಒದ್ದರು. ಆದರೆ ಹಲ್ಲಾಗುಲ್ಲಾ ಹತ್ತಿಕ್ಕಲು ಪೊಲೀಸರೇ ಬರಬೇಕಾಯಿತು. ಬಂದವರು 34 ಜನರನ್ನು ಬಂಧಿಸಿದರು. ಅವರಲ್ಲಿ ಬಹುತೇಕರು ಹೊಟ್ಟೆ ತುಂಬಾ ಕುಡಿದು ಹುಚ್ಚುಚ್ಚಾಗಿ ಆಡುತ್ತಿದ್ದರು. ಜೊತೆಗೆ ವಾರ್ನ್‌ಗೆ ಚೆಂಡನ್ನು ಜನರತ್ತ ಒದೆಯಕೂಡೆಂದು ಎಚ್ಚರಿಕೆ ಕೊಟ್ಟರು.

ವಿಕ್ಟೋರಿಯಾ ಪೊಲೀಸರು ಶುಕ್ರವಾರ ಈ ಘಟನೆಯ ಬಗೆಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಜನ ಇಷ್ಟೊಂದು ಹುಚ್ಚಾಟಕ್ಕಿಳಿಯಬಹುದು ಎಂದು ವಾರ್ನ್‌ ಲೆಕ್ಕಿಸಿರಲಿಲ್ಲ. ಪೊಲೀಸರ ಎಚ್ಚರಿಕೆ ಮಾತಿಗೆ ಅವರು ಓಗೊಟ್ಟರು ಎಂದು ಪ್ರಕಟಣೆ ತಿಳಿಸಿದೆ.

ಇಂಗ್ಲೆಂಡ್‌ನಲ್ಲಿ ನಡೆಯಿತೆನ್ನಲಾದ ಫೋನ್‌ ಸೆಕ್ಸ್‌ ಟಾಕ್‌ ಪ್ರಕರಣದ ಅಲೆ ಎದ್ದಾಗ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಉಪ ನಾಯಕ ಪದದಿಂದ ಕೆಳಗಿಳಿದ ವಾರ್ನ್‌ (ಆಗಸ್ಟ್‌, 2000) ಆ ನಂತರ ಕಣದಲ್ಲಿ ಕಂಡು ಬರಲಿಲ್ಲ. ವಿಂಡೀಸ್‌ ವಿರುದ್ಧದ ಐದೂ ಟೆಸ್ಟ್‌ ಪಂದ್ಯಗಳಲ್ಲೂ ಅವರು ಆಡಲಿಲ್ಲ. ಎಂದು ಚೆಂಡು ಹಿಡಿಯುತ್ತೇನೋ ಎನಿಸಿಬಿಟ್ಟಿದೆ ಅಂದಿದ್ದ ವಾರ್ನ್‌ ಗುರುವಾರ ಒಂದು ವಿಕೆಟ್ಟನ್ನೂ ಕೀಳದಾದರು. ಆದರೆ ಬೌಲಿಂಗ್‌ ಮೊನಚು ಮಾತ್ರ ಇನ್ನೂ ಮಾಸಿಲ್ಲ. 10 ಓವರ್‌ಗಳಲ್ಲಿ 38 ರನ್‌ ಕೊಟ್ಟರು. ಆಸ್ಟ್ರೇಲಿಯಾ 77 ರನ್‌ಗಳಿಂದ ಪಂದ್ಯ ಗೆದ್ದಿತು.

ಈವರೆಗೆ 366 ಟೆಸ್ಟ್‌ ವಿಕೆಟ್‌ ಪಡೆದಿರುವ ವಾರ್ನ್‌ ಗುರುವಾರ 60 ಸಾವಿರಕ್ಕೂ ಹೆಚ್ಚು ವೀಕ್ಷಕರೆದುರು ಕಣದಲ್ಲಿ ಕಂಡಾಗ ಹಂಗಾಮ. ವಾರ್ನ್‌ ಹೆಸರೇ ಜನರಿಗೆ ಂದು ಸೆನ್ಸೇಷನ್‌. ಆದರೆ ವಾರ್ನ್‌ ದುರಾದೃಷ್ಟವೋ ಅಥವಾ ಅವರ ಹರಕತ್ತು ತರುವ ಕುತ್ತೋ ಈಚೆಗೆ ಅವರು ಚೇಷ್ಟೆ- ತರಲೆ ಸುದ್ದಿಗಳಲ್ಲೇ ಮುಳುಗಿ ಹೋಗುತ್ತಿದ್ದಾರೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+