Get Updates
Get notified of breaking news, exclusive insights, and must-see stories!

ಸಿಲಿಕಾನ್‌ ಸಿಟಿಯ ಉತ್ಕರ್ಷಕ್ಕೆ ಕುವೆಂಪುವಿಚಾರಧಾರೆ - ಎಸ್‌.ಎಂ. ಕೃಷ್ಣ

(ಮಂಗಳೂರು ಪ್ರತಿನಿಧಿಯಿಂದ)

ಸುಳ್ಯ : ಕುವೆಂಪು ಪ್ರತಿಪಾದಿಸಿದ ವೈಚಾರಿಕತೆ ಹಾಗೂ ವೈಜ್ಞಾನಿಕತೆಗಳ ಸಂಗಮದಿಂದ ಸಿಲಿಕಾನ್‌ ಸಿಟಿಯ ಉಗಮ, ಉತ್ಕರ್ಷ ಸಾಧ್ಯ ಎಂದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚು ಇಂಜಿನಿಯರಿಂಗ್‌ ಕಾಲೇಜುಗಳ ಸ್ಥಾಪನೆಯಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ ಎನ್ನುವ ಆತಂಕ ಬೇಡ. ಸರ್ಕಾರ ರಚಿಸಿರುವ ಮಾಹಿತಿ ತಂತ್ರಜ್ಞಾನ ಶಿಕ್ಷಣ ಮಂಡಳಿಯು ಹೊಸ ಕಾಲೇಜುಗಳ ಶಿಕ್ಷಣದ ಗುಣಮಟ್ಟದ ಮೇಲೆ ನಿಗಾ ಇಡಲಿದೆ ಎಂದು ಕೃಷ್ಣ ಭರವಸೆ ನೀಡಿದರು.

ರಾಜ್ಯಸರ್ಕಾರ ಹೊಸದಾಗಿ 40 ಇಂಜಿನಿಯರಿಂಗ್‌ ಕಾಲೇಜುಗಳ ಸ್ಥಾಪನೆಗೆ ಅವಕಾಶ ನೀಡಿರುವುದರಿಂದ ಖಂಡಿತವಾಗಿಯೂ ಶಿಕ್ಷಣದ ಗುಣಮಟ್ಟ ಕುಸಿಯಲಾರದು ಎನ್ನುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಸರ್ಕಾರದ ಖಾಸಗಿ ಸಹಭಾಗಿತ್ವದ ಬಗ್ಗೆ ಕೇಳಿ ಬರುತ್ತಿರುವ ಟೀಕೆಗಳನ್ನು ತಾವು ಗಮನಿಸುತ್ತಿರುವುದಾಗಿ ತಿಳಿಸಿದರು.

ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಆವರಣದಲ್ಲಿ ಶುಕ್ರವಾರ, ಕೆ.ವಿ.ಜಿ. ಇಂಜಿನಿಯರಿಂಗ್‌ ಕಾಲೇಜು ಮತ್ತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಅವರು ಶಿಲ್ಪಿ ಕುರುಂಜಿ ವೆಂಕಟ್ರಮಣ ಗೌಡ ಅವರ ಜೀವನ ಚರಿತ್ರೆಯನ್ನಾಧರಿಸಿ ಗಿರೀಶ್‌ ಕಾಸರವಳ್ಳಿ ತಯಾರಿಸುತ್ತಿರುವ ಸಾಕ್ಷ್ಯಚಿತ್ರಕ್ಕೆ ಕ್ಲಾಪ್‌ ಮಾಡಿದರು ಹಾಗೂ ಕಾಲೇಜಿನ ಇನ್‌ಫರ್ಮೇಶನ್‌ ಟೆಕ್ನಾಲಜಿ ವಿಭಾಗವನ್ನು ಉದ್ಘಾಟಿಸಿದರು.

ಗ್ರಾಮೀಣ ವಿದ್ಯಾಸಂಸ್ಥೆಗಳ ಬಗ್ಗೆ ಕಾಳಜಿ : ಗ್ರಾಮೀಣ ಪ್ರದೇಶಗಳಲ್ಲಿ ಸುಸಜ್ಜಿತ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಕೃಷ್ಣ ಪ್ರಕಟಿಸಿದರು. ವಿಜ್ಞಾನವನ್ನು ಗ್ರಾಮೀಣ ಪ್ರದೇಶಗಳಿಗೆ ಕೊಂಡೊಯ್ಯುವುದು ಸರ್ಕಾರದ ನೀತಿಯಾಗಿದೆ. ಇಲ್ಲದಿದ್ದಲ್ಲಿ ಹಳ್ಳಿಗಳು ಅಭಿವೃದ್ಧಿಯಿಂದ ವಂಚಿತವಾಗುತ್ತವೆ ಎಂದು ಮುಖ್ಯಮಂತ್ರಿ ಹೇಳಿದರು.

ಕೃಷಿ ಕ್ಷೇತ್ರದಲ್ಲೂ ವಿಜ್ಞಾನ ಅಳವಡಿಸಿಕೊಳ್ಳಬೇಕು. ಆಗಷ್ಟೆ ಭಾರತ ಅಗ್ರಮಾನ್ಯ ದೇಶವಾಗಿ ರೂಪುಗೊಳ್ಳಲು ಸಾಧ್ಯ. ಎಂದು ಕೃಷ್ಣ ಅಭಿಪ್ರಾಯಪಟ್ಟರು.

ಸನ್ಮಾನ : ಗ್ರಾಮೀಣ ಪ್ರದೇಶದಲ್ಲಿ ತಂತ್ರಜ್ಞಾನ ಕ್ರಾಂತಿ ಮಾಡುತ್ತಿರುವ, ತೂಗುಸೇತುವೆ ಖ್ಯಾತಿಯ ಗಿರೀಶ್‌ ಭಾರದ್ವಾಜ್‌ ಹಾಗೂ ಕಡಿಮೆ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ತಂತ್ರಜ್ಞಾನ ಪ್ರಚುರ ಪಡಿಸುತ್ತಿರುವ ಮಾಸ್ಟರ್‌ ಪ್ಲಾನರಿಯ ಅವರನ್ನು ಇದೇ ಸಂದರ್ಭದಲ್ಲಿ ಅನುಕ್ರಮವಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಪರಮೇಶ್ವರ್‌ ಸನ್ಮಾನಿಸಿದರು.

ಸಚಿವರಾದ ಎಂ.ಎಂ.ನಾಣಯ್ಯ, ಬಿ.ಬಿ.ಚಿಮ್ಮನಕಟ್ಟಿ , ಟಿ.ಜಾನ್‌, ಶಾಸಕರಾದ ವಿನಯಚಂದ್ರ ಮತ್ತು ಇಬ್ರಾಹಿಂ ಹಾಗೂ ತಾಂತ್ರಿಕ ಶಿಕ್ಷಣ ನಿರ್ದೇಶಕ ಬಲವೀರ ರೆಡ್ಡಿ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಆನಂತರ ಮುಖ್ಯಮಂತ್ರಿ ಕೃಷ್ಣ ಅವರು ಸುಳ್ಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+