ತಕ್ಷಣವೇ ರಾಜ್ಯದ ರೈತರಿಂದ 50 ಸಾವಿರ ಟನ್ ಮೆಕ್ಕೆಜೋಳ ಖರೀದಿ
ನವದೆಹಲಿ : ಉಗ್ರಾಣದಲ್ಲಿ ಸಂಗ್ರಹವಾಗಿರುವ 66 ಸಾವಿರ ಟನ್ ಮೆಕ್ಕೆಜೋಳದ ಪೈಕಿ 40 ಸಾವಿರ ಟನ್ ಮಾಲನ್ನು ಖರೀದಿಸಲು ಗುಜರಾತ್ ಸರ್ಕಾರ ಮುಂದೆ ಬಂದಿದ್ದು, ನಮ್ಮ ರೈತರ ಇನ್ನೂ 50 ಸಾವಿರ ಟನ್ ಮೆಕ್ಕೆಜೋಳವನ್ನು ರಾಜ್ಯ ಸರ್ಕಾರ ಖರೀದಿಸಲಿದೆ. ಸಂಕ್ರಾತಿ ಸಂದರ್ಭಕ್ಕೆ ರೈತನಿಗೊಂದು ಆಶಾ ಕಿರಣ ಇದಾಗಿದೆ.
ಭಾರತೀಯ ಆಹಾರ ನಿಗಮ ತನ್ನ ಅಧಿಕಾರಿಗಳ ಮೂಲಕ ಕರ್ನಾಟಕದ ರೈತರಿಗೆ ಬೆಂಬಲ ಬೆಲೆ ಕೊಟ್ಟು ಈವರೆಗೆ 66 ಸಾವಿರ ಟನ್ ಮೆಕ್ಕೆಜೋಳ ಖರೀದಿಸಿದೆ. ಉಗ್ರಾಣದ ಕೊರತೆಯ ಕಾರಣ ರೈತ ಬೆಳೆದ ಇನ್ನಷ್ಟು ಬೆಳೆ ಮಾರುಕಟ್ಟೆಯಿಂದ ಹಾಗೇ ವಾಪಸ್ಸಾಯಿತು. ಮತ್ತೆ ರೈತ ತಲೆ ಮೇಲೆ ಕೈ ಹೊತ್ತು ಕುಳಿತ. ಮೆಕ್ಕೆಜೋಳಕ್ಕೆ ಬೆಂಕಿ ಇಟ್ಟು, ಪ್ರತಿಭಟನೆ ಮಾಡಿದ.
ಆಗ ಸರ್ಕಾರ ಉಗ್ರಾಣದ ಕೊರತೆ ನೀಗಿಸುವ ನಿಟ್ಟಿನಲ್ಲಿ ಕಣ್ಣೊರೆಸುವ ಕೆಲವು ಭರವಸೆ ಕೊಟ್ಟಿತು. ಆದರೆ ಆ ಭರವಸೆ ಹಕೀಕತ್ತಾಗುವ ಮುನ್ನವೇ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಬಿ.ಇನಾಂದಾರ್ ಗುಜರಾತ್ ಸರ್ಕಾರದ ಜೊತೆ ನಡೆಸಿದ ಮಾತುಕತೆ ಫಲ ಕೊಟ್ಟಿದೆ. ಈಗ ಉಗ್ರಾಣದಲ್ಲಿರುವ ಮಾಲಿನ ಪೈಕಿ 40 ಸಾವಿರ ಟನ್ ಗುಜರಾತ್‌ಗೆ ಬಿಕರಿಯಾಗಲಿದ್ದು, ರೈತ ತಾನು ಬೆಳೆದ ಮೆಕ್ಕೆಜೋಳವನ್ನು ಮತ್ತೆ ಮಾರುಕಟ್ಟೆಗೆ ತರಬಹುದಾಗಿದೆ. ಭಾರತೀಯ ಆಹಾರ ನಿಗಮದ ಅಧಿಕಾರಿಗಳೇ ಬೆಂಬಲ ಬೆಲೆ ಕೊಟ್ಟು 50 ಸಾವಿರ ಟನ್ ಮೆಕ್ಕೆಜೋಳ ಖರೀದಿಸಲಿದ್ದಾರೆ.
ಈ ಬಾರಿ ಫಸಲು ಉತ್ತಮವಾಗಿದ್ದು, ಸುಮಾರು 20 ಲಕ್ಷ ಟನ್ ಮೆಕ್ಕೆಜೋಳ ಉತ್ಪಾದನೆಯಾಗಲಿದೆ. ಭಾರತ ಆಹಾರ ನಿಗಮ ಇದರಲ್ಲಿ ಹೆಚ್ಚೆಂದರೆ 1 ಲಕ್ಷ ಟನ್ ಮಾಲನ್ನು ಮಾತ್ರ ಖರೀದಿಸಲು ಸಾಧ್ಯ. ರಾಜಸ್ತಾನ ಹಾಗೂ ಮಧ್ಯಪ್ರದೇಶಗಳಲ್ಲಿ ಮೆಕ್ಕೆಜೋಳ ಉಪಯೋಗಿಸುವವರ ಸಂಖ್ಯೆ ಹೆಚ್ಚಿದ್ದು, ಈ ರಾಜ್ಯಗಳಿಗೂ ಮೆಕ್ಕೆಜೋಳ ಖರೀದಿಸುವಂತೆ ಮನವಿ ಮಾಡುವ ಸಾಧ್ಯತೆಯಿದೆ ಎಂದು ಸಚಿವರು ಹೇಳಿದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications