ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಡ್ಸ್‌ ವಿರುದ್ಧ ಹೋರಾಟ : ಜೂನ್‌ನಲ್ಲಿ ವಿಶ್ವಸಂಸ್ಥೆಯಿಂದ ಅಧಿವೇಶನ

By Staff
|
Google Oneindia Kannada News

*ಮೈಕೆಲ್‌ ಮೂಡಿ

ಯುನೈಟೆಡ್‌ ನೇಷನ್ಸ್‌ : ಗಂಭೀರ ಪ್ರಮಾಣದಲ್ಲಿ ಹರಡುತ್ತಿರುವ ಏಡ್ಸ್‌ ವಿರುದ್ಧ ಹೋರಾಡಲು ಜಾಗತಿಕ ಮಟ್ಟದಲ್ಲಿ ಯೋಜನೆ ರೂಪಿಸುವ ಉದ್ದೇಶದ ವಿಶೇಷ ಅಧಿವೇಶನವನ್ನು ಜೂನ್‌ ತಿಂಗಳಲ್ಲಿ ನಡೆಸಲು 189 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆ ನಿರ್ಧರಿಸಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಕ್ತಾರ ಸೂಸನ್‌ ಮಾರ್ಕ್‌ಹಂ ಈ ವಿಷಯವನ್ನು ಐಪಿಎಸ್‌ಗೆ ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಉನ್ನತ ಮಟ್ಟದ ಅಧಿವೇಶನವೊಂದನ್ನು ಏಡ್ಸ್‌ ಬಗೆಗೆ ವಿಶ್ವಸಂಸ್ಥೆ ಹಮ್ಮಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ಮೂರು ದಶಲಕ್ಷ ಜನ ಏಡ್ಸ್‌ಗೆ ಬಲಿಯಾಗಿದ್ದರು.

ಪ್ರಸ್ತುತದ ದಿನಗಳಲ್ಲಿ ಏಡ್ಸ್‌ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ಜಗತ್ತಿನ ವಿವಿಧ ಭಾಗಗಳ ಸುಮಾರು 36 ಮಿಲಿಯನ್‌ ಮಂದಿ ಎಚ್‌ಐವಿ ಸೋಂಕಿನೊಂದಿಗೆ ಬದುಕುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ಏಡ್ಸ್‌ ವಿರುದ್ಧ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವಂತಹ ಅಧಿವೇಶನವನ್ನು ವಿಶ್ವಸಂಸ್ಥೆ ನಡೆಸುತ್ತಿರುವುದು ಸೂಕ್ತವಾಗಿದೆ. ಈ ಅಧಿವೇಶನ ಏಡ್ಸ್‌ ವಿರುದ್ಧ ವಿವಿಧ ದೇಶಗಳು ಹಮ್ಮಿಕೊಂಡಿರುವ ಆಂದೋಲನದ ಬಗ್ಗೆ ಪರಸ್ಪರ ತಿಳಿವಳಿಕೆ ಹೊಂದುವ ವೇದಿಕೆಯಾಗಿದೆ ಎಂದು ಅನ್‌ಏಡ್ಸ್‌ನ ಹಿರಿಯ ಅಧಿಕಾರಿ ಬರ್ಟಿಲ್‌ ಲಿನ್‌ಬ್ಲಾಡ್‌ ಹೇಳಿದ್ದಾರೆ.

ಎಲ್ಲಾ ಸದಸ್ಯ ರಾಷ್ಟ್ರಗಳ ಹಿರಿಯ ರಾಜಕೀಯ ಧುರೀಣರು, ಸರ್ಕಾರದ ಪ್ರತಿನಿಧಿಗಳು, ಏಡ್ಸ್‌ ವಿರುದ್ಧ ಆಂದೋಲನದ ಕಾರ್ಯಕರ್ತರು ಹಾಗೂ ಖಾಸಗಿ ಕ್ಷೇತ್ರಗಳ ತಜ್ಞರು ವಿಶೇಷ ಅಧಿವೇಶನದಲ್ಲಿ ಭಾಗಿಯಾಗುವರು. ಏಡ್ಸ್‌ ಚಿಕಿತ್ಸೆ ಮತ್ತು ಸುರಕ್ಷತೆ, ಡ್ರಗ್ಸ್‌ , ವೈಜ್ಞಾನಿಕ ಸಂಶೋಧನೆ ಮತ್ತು ವ್ಯಾಕ್ಸೀನ್‌ ಅಭಿವೃದ್ಧಿ , ಮೂಲಭೂತ ಆರೋಗ್ಯ ಸೌಕರ್ಯಗಳು ಮುಂತಾದ ವಿಷಯಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುವುದು.

(ಐಪಿಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X