ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾರ್ಜಾ ಟೂರ್ನಿ ಏ.8 ರಿಂದ 20 : ವೇಳಾಪಟ್ಟಿ ಪ್ರಕಟ

By Staff
|
Google Oneindia Kannada News

ದುಬೈ : ಏಪ್ರಿಲ್‌ನಲ್ಲಿ ಶಾರ್ಜಾದಲ್ಲಿ ನಡೆಯುವ ತ್ರಿಕೋನ ಸರಣಿಯಲ್ಲಿ ಭಾರತ ತಂಡ ಭಾಗವಹಿಸುವುದನ್ನು ಕ್ರಿಕೆಟರ್ಸ್‌ ಬೆನಿಫಿಟ್‌ ಫಂಡ್‌ ಸೀರಿಸ್‌ (ಸಿಬಿಎಫ್‌ಎಸ್‌) ಗೆ ಬಿಸಿಸಿಯ ಅಧಿಕೃತವಾಗಿ ತಿಳಿಸಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾ ಸರಣಿಯಲ್ಲಿ ಭಾಗವಹಿಸುವ ಇನ್ನೆರಡು ತಂಡಗಳು.

ಕೋಕಾ ಕೋಲಾ ಕಪ್‌ನಲ್ಲಿ ನಾವು ಭಾಗವಹಿಸುವುದನ್ನು ಖಚಿತಪಡಿಸುತ್ತಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯವಂತ ಲೆಲೆ ಸಿಬಿಎಫ್‌ಎಸ್‌ಗೆ ತಿಳಿಸಿದ್ದಾರೆ ಎಂದು ಗಲ್ಫ್‌ ನ್ಯೂಸ್‌ ಪ್ರಕಟಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ ಏಪ್ರಿಲ್‌ 8 ರಿಂದ 20 ರವರೆಗೆ ಸರಣಿ ನಡೆಯಲಿದೆ. ಈ ಟೂರ್ನಿಯಿಂದ ಮಾಜಿ ಕ್ರಿಕೆಟ್‌ ತಾರೆಗಳಾದ ಭಾರತದ ಫರೂಕ್‌ ಇಂಜಿನಿಯರ್‌, ಮನ್ಸೂರ್‌ ಆಲಿಖಾನ್‌ ಹಾಗೂ ಚೇತನ್‌ ಶರ್ಮ ಅವರು ತಲಾ 35 ಸಾವಿರ ಯುಎಸ್‌ ಡಾಲರ್‌ಗಳ ಸಹಾಯಧನ ಪಡೆಯಲಿದ್ದಾರೆ.

ಹೊಸ ವೇಳಾಪಟ್ಟಿ ಇಂತಿದೆ :

ಏಪ್ರಿಲ್‌ 8 - ಪಾಕಿಸ್ತಾನ ವಿರುದ್ಧ ಶ್ರೀಲಂಕಾ
ಏಪ್ರಿಲ್‌ 10- ಭಾರತ ಮತ್ತು ಶ್ರೀಲಂಕಾ
ಏಪ್ರಿಲ್‌ 12- ಭಾರತ ಮತ್ತು ಪಾಕಿಸ್ತಾನ
ಏಪ್ರಿಲ್‌ 13 - ಭಾರತ ಮತ್ತು ಶ್ರೀಲಂಕಾ
ಏಪ್ರಿಲ್‌ 15 - ಭಾರತ ಮತ್ತು ಪಾಕಿಸ್ತಾನ
ಏಪ್ರಿಲ್‌ 17 - ಪಾಕಿಸ್ತಾನ ಮತ್ತು ಶ್ರೀಲಂಕಾ
ಏಪ್ರಿಲ್‌ 20 - ಫೈನಲ್ಸ್‌

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X