ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೂರದಿಂದ ಬಂದವರೆ, ಮಂದಿರವು ಚೆನ್ನಿದೆಯೇ? ಆರಾಮವಾಗಿದೆಯೇ?

By Staff
|
Google Oneindia Kannada News

ಮೈಸೂರು : ಮೊನ್ನೆ ಮೊನ್ನೆಯಷ್ಟೇ ವಿಶ್ವವಿಖ್ಯಾತ ರಂಗನತಿಟ್ಟು ಪಕ್ಷಿಧಾಮಕ್ಕೆ (ಅರ್ಲಿ ಬರ್ಡ್ಸ್‌) ಚಳಿಗಾಲದ ಅತಿಥಿಗಳು ಬಂದ ಸುದ್ದಿಯ ಬೆನ್ನಲ್ಲೇ ಮೈಸೂರಿಗೂ ಕೆಲವು ಅತಿಥಿಗಳು ಬಂದಿದ್ದಾರೆ. ಅಲ್ಲ... ಲಿಂಗಾಂಬುಧಿ ಕೆರೆಯಲ್ಲಿ ಬೀಡುಬಿಟ್ಟಿದ್ದ ಹಲವು ಪಕ್ಷಿಗಳು ಸಾಯುತ್ತಿರುವಾಗ ಮೈಸೂರಿಗೆ ಮತ್ತೆಲ್ಲಿಂದ ಅತಿಥಿಗಳು ಬಂದರು ಎಂದು ನೀವು ಪ್ರಶ್ನಿಸುವುದು ಸಹಜವೇ.

ಮೈಸೂರಿಗೆ ಬಂದಿರುವ ಈ ಅತಿಥಿಗಳು ಸುರಕ್ಷಿತ ಸ್ಥಳದಲ್ಲಿದ್ದಾರೆ. ತಮ್ಮನ್ನು ನೋಡಲು ಬನ್ನಿ ಎಂದು ಪ್ರವಾಸಿಗರನ್ನು ಕರೆಯುತ್ತಿದ್ದಾರೆ. ಅಂದ ಹಾಗೆ ಅತಿಥಿಗಳು ಯಾರು ಗೊತ್ತೆ? ನಾಲ್ಕು ಬಗೆಯ ವಿದೇಶಿ ಫೆೆಸೆಂಟ್‌ ಪಕ್ಷಿಗಳು. ಈಗ ಮೈಸೂರು ಜಯ ಚಾಮರಾಜೇಂದ್ರ ಮೃಗಾಲಯದ ಹೊಸ ಸದಸ್ಯರು. ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರನ್ನು ಹೆಚ್ಚು ಹೆಚ್ಚಾಗಿ ಆಕರ್ಷಿಸಲು ಈ ಅತಿಥಿಗಳನ್ನು ಬರಮಾಡಿಕೊಳ್ಳಲಾಗಿದೆ.

ಬುಧವಾರವಷ್ಟೇ ಮೈಸೂರು ಮೃಗಾಲಯಕ್ಕೆ ಬಂದ ನಾಲ್ಕು ಬಗೆಯ ಒಟ್ಟು 17 ವರ್ಣರಂಜಿತ ಹಕ್ಕಿಗಳು, ಜನಾಕರ್ಷಣೆಯ ಕೇಂದ್ರ ಬಿಂದುಗಳಾಗಿವೆ. ಗೋಲ್ಡನ್‌ ಫೆಸೆಂಟ್‌, ರೀವ್ಸ್‌ ಫೆಸೆಂಟ್‌, ಸಿಲ್ವರ್‌ ಫೆಸೆಂಟ್‌ ಹಾಗೂ ಗ್ರೀನ್‌ ಫೆಸೆಂಟ್‌ ವರ್ಗದ ಈ ಹಕ್ಕಿಗಳನ್ನು ಪ್ರತ್ಯೇಕ ಪಂಜರದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿದೆ.

ಈ ಪಕ್ಷಿಗಳ ಸಾಲಿನಲ್ಲಿ ಕಾಡುಕೋಳಿಯೂ ಹೊಸ ಸೇರ್ಪಡೆಯಾಗಿದೆ. ಈ ವಿಷಯವನ್ನು ಮೃಗಾಲಯ ಪ್ರಾಧಿಕಾರ ಹಾಗೂ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಎನ್‌.ಎನ್‌. ರಾಜಶೇಖರ್‌ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X