ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಸಿಎಂನಲ್ಲಿ ಲಕ್ಕಿ ಆಲಿ

By Staff
|
Google Oneindia Kannada News

ಬೆಂಗಳೂರು : ಫ್ರೆಂಚ್‌ ಮ್ಯೂಸಿಕ್‌ ಚಾನೆಲ್‌ ಎಂಸಿಎಂ ಸಂಗೀತದ ಭೂರೀ ಭೋಜನ ಉಣ ಬಡಿಸಲು ಭಾರತಕ್ಕೆ ಬರುತ್ತಿದೆ. ಪಾಪ್‌ ಸಂಗೀತದ ಪಿಡ್ಜ , ಬರ್ಗರ್‌ಗಳ ನಡುವೆ ಭಾರತದ ಅಪ್ಪಟ ಸಂಗೀತದ ಖಾದ್ಯ ನಿಮಗಾಗಿ.

ಜಗತ್ತಿನ ಐದು ಖಂಡಗಳ ಸಂಗೀತ ಸಹೃದಯರಿಗೆ ಎಂಸಿಎಂ ಪರಿಚಿತ. ಆದರೆ ಎಂಸಿಎಂ ಅಂದರೇನು ? ಅದರ ವಿಶೇಷತೆ ಏನು?

ಎಸಿಎಂ ಅನ್ನು ಬಿಡಿಸಿ ಬರೆದರೆ ‘ಮಾ ಚೈನೆ ಮ್ಯೂಸಿಕಲೆ’ (ಅರ್ಥಾತ್‌ ಮೈ ಮ್ಯೂಸಿಕ್‌ ಚಾನೆಲ್‌). ಇತರೆ ಮ್ಯೂಸಿಕ್‌ ಚಾನೆಲ್‌ಗಳಿಗಿಂತ ಭಿನ್ನವಾದ ಹಾಡುಗಳನ್ನು ಈ ಚಾನೆಲ್‌ ಕೇಳಿಸುತ್ತಿದೆ; ವಿಡಿಯೋಗಳನ್ನು ತೋರಿಸುತ್ತಿದೆ. ಗುನುಗುನಿಸಲೂ ಮನಸ್ಸಾಗದ ಬುರ್ನಾಸು ಸಂಗೀತ, ಗಂಧ- ಗಾಳಿಯಿಲ್ಲದವರ ಅಬ್ಬರಗಳ ಹಾಡುಗಳ ಹಿನ್ನೆಲೆಯಲ್ಲೇ ನಲ್ಲ- ನಲ್ಲೆಯರ ಲಲ್ಲೆ ತೋರಿಸಿ ಹಣ ದೋಚೋ ಹುನ್ನಾರದ ಚಾನೆಲ್‌ಗಳ ನಡುವೆ ಎಂಸಿಎಂ ಹೇಗೆ ಭಿನ್ನವಾಗುತ್ತದೆ ಎನ್ನುವುದನ್ನು ನೋಡೋಣ.

ಪ್ಯಾರಿಸ್‌ನಲ್ಲಿ ತನ್ನ ಮನೆ ಹೊಂದಿರುವ ಈ ಚಾನೆಲ್‌ ಸಂಗೀತ ಕಲಿಯುತ್ತದೆ, ಕಲಿಸುತ್ತದೆ, ಹೊಸಬರನ್ನು ಪರದೆ ಮೇಲೆ ತರುತ್ತದೆ, ತಪ್ಪು ತಿದ್ದಿಕೊಳ್ಳುತ್ತದೆ, ಜಾಣ ಜಾಣೆಯರ ಸಲಹೆ ಕೇಳುತ್ತದೆ. ಇದೊಂದು ರೀತಿಯ ಸಂಗೀತ ಶೋಧ ಎಂದೇ ಹೇಳಬಹುದು. ಜಗತ್ತಿನ ವಿವಿಧ ಮೂಲೆಗಳಿಂದ ಸಂಗೀತ ತಜ್ಞರನ್ನು, ಸಾಹಿತಿಗಳನ್ನು ಕರೆಸುತ್ತದೆ. ಅವರ ಅನುಭವ ಆಧರಿಸಿ ಸಂಗೀತ ಹೆಣೆಯುತ್ತದೆ.

ಇದೋ ಈಗ ಈ ಅಪರೂಪದ ಚಾನೆಲ್‌ ಭಾರತದ ಸಂಗೀತ ಕಲಾವಿದರನ್ನೂ ಪರಿಚಯಿಸುತ್ತಿದೆ; ಅದೂ ನಮ್ಮ ಗಣ ರಾಜ್ಯೋತ್ಸವದ ದಿನ. ಈ ವಿಶೇಷ ಕಾರ್ಯಕ್ರಮದಲ್ಲಿ ಲಕ್ಕಿ ಆಲಿ ಹಾಗೂ ಏಷ್ಯನ್‌ ಡಬ್‌ ಫೌಂಡೇಷನ್‌ಗೆ ಕೆಲವು ಟೈಂ ಸ್ಲಾಟ್‌ಗಳನ್ನು ಹಂಚಲಾಗಿದೆ. ದಿಮ್ಯೂಸಿಕ್‌ಮ್ಯಾಗಜೀನ್‌ ಡಾಟ್‌ ಕಾಂ ಬಳಗದ ಸಹಯೋಗದಲ್ಲಿ ಎಂಸಿಎಂ ಈ ಕಾರ್ಯಕ್ರಮ ಪ್ರಸಾರಮಾಡಲಿದೆ. ಮಿಸ್‌ ಮಾಡಿಕೊಳ್ಳಬೇಡಿ.

(ಕೃಪೆ : ದಿಮ್ಯೂಸಿಕ್‌ ಮ್ಯಾಗಜೀನ್‌ ಡಾಟ್‌ ಕಾಂ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X