ಕಪಿಲ್ ಮಾಧವನ್‌ಗೆ ಕಳ್ಳಾಟದ ಇನ್ನಷ್ಟು ವಿಷಯ ಹೇಳಿದ್ದಾರೆ
ನವದೆಹಲಿ : ಬುಧವಾರ ಬಿಸಿಸಿಐನ ಭ್ರಷ್ಟಾಚಾರಿ ವಿರೋಧಿ ದಳದ ವಿಶೇಷ ಆಯುಕ್ತ ಕೆ.ಮಾಧವನ್ ಅವರಿಂದ ವಿಚಾರಣೆಗೊಳಗಾದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್, ಈ ಹಿಂದೆ ಹೇಳದಿದ್ದ ಕೆಲವು ಮಾಹಿತಿಗಳನ್ನು ಕೊಟ್ಟಿದ್ದಾರೆ.
ಕಪಿಲ್ ವಿಚಾರಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡ್ತುತಿದ್ದ ಮಾಧವನ್ ಈ ವಿಷಯ ತಿಳಿಸಿದ್ದಾರೆ. ಕಪಿಲ್ ನನಗೆ ಕೆಲ ಹೊಸ ವಿಷಯಗಳನ್ನು ಹೇಳಿದ್ದಾರೆ. ಅಲ್ಲದೆ ಸರ್ಕಾರದ ವರದಿಯಲ್ಲಿ ಏನೇನು ಉಲ್ಲೇಖಿತವಾಗಿದೆಯೋ ಆ ವಿಚಾರಗಳಲ್ಲಿ ಕೆಲ ತಿದ್ದುಪಡಿಯನ್ನೂ ಸೂಚಿಸಿದ್ದಾರೆ ಎಂದರು.
ಆ ಹೊಸ ಹೇಳಿಕೆಗಳೇನು ಎಂಬ ಪ್ರಶ್ನೆಗೆ, ಇಲ್ಲ. ಈಗಲೇ ಅವುಗಳನ್ನು ಹೇಳಲಾರೆ ಎಂದು ಮುಗುಮ್ಮಾಗಿ ನುಣುಚಿಕೊಂಡರು.
ತನಗೆ ಕಳಪೆ ಆಟ ಆಡಲು ಕಪಿಲ್ ಹಣದ ಹೂರಣ ಕೊಡಮಾಡಿದ್ದರು ಎಂದು ಮನೋಜ್ ಪ್ರಭಾಕರ್ ಜಗಜ್ಜಾಹೀರು ಮಾಡಿದ್ದರು. ಈ ಆರೋಪದ ಒತ್ತಡದಲ್ಲೇ ಅತ್ತು ಕರೆದ ಭಾವುಕ ಕಪಿಲ್, ಭಾರತ ಕ್ರಿಕೆಟ್ ತಂಡದ ತಮ್ಮ ಕೋಚ್ ಪದಕ್ಕೆ ನಮಸ್ಕಾರ ಹೇಳಿದ್ದರು. ಸಿಬಿಐ ವರದಿಯಲ್ಲೂ ಕಪಿಲ್ ತಪ್ಪಿತಸ್ಥರೆಂಬ ಯಾವ ಹೇಳಿಕೆಯೂ ಇರಲಿಲ್ಲ.
ನಿಖಿಲ್ ಚೋಪ್ರ ಹಾಗೂ ಕಪಿಲ್ ಮೇಲಿರುವ ಆರೋಪಗಳು ಇನ್ನೂ ಹೊಗೆಯಾಡುತ್ತಿರುವುದರಿಂದ ಬಿಸಿಸಿಐ ಮಾಧವನ್ ಅವರಿಗೆ ಮತ್ತೊಮ್ಮೆ ಕಪಿಲ್ ಹಾಗೂ ವಾಡೇಕರ್ ವಿಚಾರಣೆ ನಡೆಸುವಂತೆ ಸೂಚಿಸಿತ್ತು. ಈ ವಾರಾಂತ್ಯದಲ್ಲಿ ಮಾಧವನ್ ಬಿಸಿಸಿಐಗೆ ಕಪಿಲ್ ಹಾಗೂ ವಾಡೇಕರ್ ವಿಚಾರೆಯ ತಿರುಳಿನ ವರದಿಯನ್ನು ಕೊಡಲಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications