ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯ ಸಾಯಿಬಾಬ ಆಸ್ಪತ್ರೆ : ಜನವರಿ 19ಕ್ಕೆ ಪ್ರಧಾನಿಯಿಂದ ಉದ್ಘಾಟನೆ

By Staff
|
Google Oneindia Kannada News

ಬೆಂಗಳೂರು : ವೈಟ್‌ಫೀಲ್ಡ್‌ ಬಳಿ ನಿರ್ಮಿಸಲಾಗಿರುವ ಶ್ರೀ ಸತ್ಯ ಸಾಯಿಬಾಬ ಉನ್ನತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು ಜನವರಿ 19ರಂದು ಪ್ರಧಾನಿ ಎ.ಬಿ.ವಾಜಪೇಯಿ ಉದ್ಘಾಟಿಸಲಿದ್ದಾರೆ.

ನೂರಾ ಇಪ್ಪತ್ತು ತೀವ್ರ ನಿಗಾ ಹಾಸಿಗೆಗಳೂ ಸೇರಿದಂತೆ ಒಟ್ಟು 300 ಹಾಸಿಗೆಗಳುಳ್ಳ ಈ ಹೈಟೆಕ್‌ ಆಸ್ಪತ್ರೆ ಶ್ರೀ ಸತ್ಯ ಸಾಯಿ ಸೆಂಟ್ರಲ್‌ ಟ್ರಸ್ಟ್‌ನ ಎರಡನೇ ದೊಡ್ಡ ಯೋಜನೆ. ಈಗಾಗಲೇ ಪುಟ್ಟಪರ್ತಿಯಲ್ಲಿ ಇಂಥದೇ ಸ್ವರೂಪದ ಹೈಟೆಕ್‌ ಆಸ್ಪತ್ರೆ ಹೃದಯ, ಮೂತ್ರ, ನರ ಹಾಗೂ ಕಣ್ಣಿನ ಸಮಸ್ಯೆಗಳನ್ನು ಉಪಶಮನ ಮಾಡುತ್ತಿದೆ.

ಹೃದಯ ಶಸ್ತ್ರ ಚಿಕಿತ್ಸೆ ಹಾಗೂ ನರ ಶಸ್ತ್ರ ಚಿಕಿತ್ಸೆ ಈ ಹೊಸ ಹೈಟೆಕ್‌ ಆಸ್ಪತ್ರೆಯಲ್ಲಿ ದೊರೆಯಲಿದ್ದು, ಆಸ್ಪತ್ರೆ ಸುಸಜ್ಜಿತ ಪ್ರಯೋಗಾಲಯ, ರಕ್ತ ದ ಬ್ಯಾಂಕು ಹಾಗೂ ಆಧುನಿಕ ಉಪಕರಣಗಳಿಂದ ಕೂಡಿದೆ.

ಸದ್ಯದಲ್ಲೇ ದೈಹಿಕ ತಜ್ಞರಿಗೆ ಹಾಗೂ ಸರ್ಜನ್‌ಗಳಿಗೆ ಸ್ನಾತಕೋತ್ತರ ತರಬೇತಿಯನ್ನೂ ಸಂಸ್ಥೆ ನೀಡಲಿದೆ ಎಂದು ಗುರುವಾರ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯಲ್ಲಿ ಸಂಸ್ಥೆ ತಿಳಿಸಿದೆ.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X