ಸದ್ದು ! ಅಧಿಕಾರಿಗಳು ಫ್ಯಾಷನ್ ಟಿವಿ ಅಧ್ಯಯನ ಮಾಡುತ್ತಿದ್ದಾರೆ!
ನವದೆಹಲಿ : ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯದ ಅಧಿಕಾರಿಗಳು ಈಗೇನು ಮಾಡುತ್ತಿದ್ದಾರೆ? ಪ್ರಶ್ನೆಗೆ ಉತ್ತರಿಸುವಷ್ಟು ಪುರುಸೊತ್ತು ಸಚಿವಾಲಯದ ಕಚೇರಿಯಲ್ಲಿ ಯಾರಿಗೂ ಇಲ್ಲ . ಎಲ್ಲರೂ ಫ್ಯಾಷನ್ ಟಿವಿ (ಎಫ್‌ಟಿವಿ) ಕಾರ್ಯಕ್ರಮಗಳನ್ನು ನೋಡುವುದರಲ್ಲಿ ಬಿಜಿ.
ನೀವು ಸಚಿವಾಲಯದ ಕಚೇರಿಗೆ ಹೊದರೆ, ಎಫ್‌ಟಿವಿ ನೋಡುತ್ತಿರುವ ಅಧಿಕಾರಿಗಳೊಂದಿಗೆ ಕೆಲವೊಮ್ಮೆ ಸಂಸದರನ್ನೂ ಕಾಣಬಹುದು. ಇವರೆಲ್ಲರಿಗೆ ಎಫ್‌ಟಿವಿ ನೋಡುವ ಕೆಲಸವನ್ನು ಹಚ್ಚಿರುವುದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್. ಭಾರತದಲ್ಲಿ ಎಫ್‌ಟಿವಿ ಪ್ರಸಾರವನ್ನು ರದ್ದು ಮಾಡುವ ಇರಾದೆಯಲ್ಲಿರುವ ಅವರು, ಅದಕ್ಕಾಗಿ ಅಧಿಕಾರಿಗಳ ಅಭಿಪ್ರಾಯವನ್ನು ಕೇಳುತ್ತಿದ್ದಾರೆ. ಎಫ್‌ಟಿವಿ ನೋಡಲೆಂದೇ ಕೆಲವು ಅಧಿಕಾರಿಗಳು ನಿಯೋಜಿತರಾಗಿದ್ದಾರೆ.
ಎಫ್‌ಟಿವಿ ಕಾರ್ಯಕ್ರಮಗಳನ್ನು ನಿಕಟವಾಗಿ ವೀಕ್ಷಿಸುತ್ತಿರುವ ಅಧಿಕಾರಿಗಳು, ಕಾರ್ಯಕ್ರಮದ ನಡುವೆ ಬಿತ್ತರವಾಗಬಹುದಾದ ಅಶ್ಲೀಲ (ನಮ್ಮ ಸಂಸ್ಕೃತಿಗೆ ಹೊಂದದ) ದೃಶ್ಯಗಳ ತಲಾಷಿನಲ್ಲಿದ್ದಾರೆ. ಅಂಥಾ ದೃಶ್ಯಗಳನ್ನು ಯಥಾವತ್ತಾಗಿ ಚಿತ್ರೀಕರಿಸುತ್ತಿದ್ದಾರೆ. ಇವುಗಳ ಆಧಾರದ ಮೇಲೆ ಸಚಿವೆ ಒಂದು ನಿರ್ಣಯಕ್ಕೆ ಬರುತ್ತಾರಂತೆ. ಅದಕ್ಕೆ ಮುನ್ನ ಆಯ್ದ ದೃಶ್ಯಗಳ ಚಿತ್ರೀಕರಣವನ್ನು ಸಂಸದರ ಸಮೂಹವೊಂದಕ್ಕೆ ತೋರಿಸಲಾಗುವುದು. ಅವರು ಆ ದೃಶ್ಯಗಳು ಎಷ್ಟರ ಮಟ್ಟಿಗೆ ಭಾರತೀಯರ ಮನಸ್ಸು - ಸಂಸ್ಕೃತಿಯನ್ನು ಘಾಸಿಗೊಳಿಸಬಲ್ಲವು ಅನ್ನುವುದನ್ನು ವಿಶ್ಲೇಷಿಸುವರು.
ಸುಷ್ಮಾ ಅವರಿಗೆ ಮುನ್ನ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ರಾತ್ರಿ ಹೊತ್ತು ಅಶ್ಲೀಲ ಸಿನಿಮಾಗಳನ್ನು ಪ್ರದರ್ಶಿಸುತ್ತದೆನ್ನುವ ಆರೋಪದ ಮೇರೆಗೆ ರಷ್ಯನ್ ವಾಹಿನಿಯಾಂದರ ಪ್ರಸಾರಕ್ಕೆ ನಿಷೇಧ ಹೇರಿದ್ದರು. ಹಿರಿಯಣ್ಣನ ಚಾಳಿ ಅನುಸರಿಸಲು ಹೊರಟಿರುವ ಸುಷ್ಮಾ ಫ್ರೆಂಚ್ ಚಾನಲ್‌ನತ್ತ ತಮ್ಮ ದೃಷ್ಟಿ ಹರಿಸಿದ್ದಾರೆ. ಎಫ್‌ಟಿವಿ ನಂತರದ ಅವರ ಮುಂದಿನ ಗುರಿ ಸದ್ಯಕ್ಕೆ ಸ್ಪಷ್ಟವಾಗಿಲ್ಲ .
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications