ಮೀನಿಗೆ ಬಂತು ಬರ ! ಗೋಕರ್ಣ ಪ್ರಾಂತ್ಯದ ಬೆಸ್ತರ ಹೊಟ್ಟೆಗೆ ಬರೆ
(ಮಂಗಳೂರು ಪ್ರತಿನಿಧಿಯಿಂದ)
ತದಡಿ : ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ತೀವ್ರ ಮತ್ಸ್ಯಕ್ಷಾಮ ಕಾಣಿಸಿಕೊಂಡಿದ್ದು, ಮೀನುಗಾರಿಕೆಯನ್ನೇ ನಂಬಿರುವ ಸುತ್ತಮುತ್ತಲಿನ ಗ್ರಾಮಗಳ ಸುಮಾರು 600 ಕ್ಕೂ ಹೆಚ್ಚು ಕುಟುಂಬಗಳು ಕಂಗಾಲಾಗಿವೆ.
ಕಳೆದ ವರ್ಷವೂ ಮೀನಿನ ಕ್ಷಾಮ ಕಾಣಿಸಿಕೊಂಡಿತ್ತು . ಆದರೆ, ಈ ಬಾರಿಯ ಕ್ಷಾಮ ಹಿಂದಿನ ಕ್ಷಾಮಗಳಿಗಿಂತಲೂ ಹೆಚ್ಚು ತೀವ್ರವಾದುದು ಎಂದು ಮೀನುಗಾರರು ಹೇಳುತ್ತಿದ್ದಾರೆ. ಮೀನುಗಾರಿಕೆ ಸೀಜನ್ ಶುರುವಾಗಿ 2 ತಿಂಗಳು ಕಳೆದರೂ ಮೀನುಗಳು ನಿರೀಕ್ಷಿತ ಸಂಖ್ಯೆಯಲ್ಲಿ ಬಲೆಗೆ ಬೀಳುತ್ತಿಲ್ಲ . ಬೆಳಿಗ್ಗೆ ಕನಸುಗಳನ್ನು ಕಟ್ಟಿಕೊಂಡು ಸಮುದ್ರಕ್ಕೆ ಇಳಿಯುವ ಬೋಟುಗಳು ಇಳಿಸಂಜೆ ಖಾಲಿಯಾಗಿಯೇ ಹಿಂತಿರುಗುತ್ತಿವೆ.
ಮೀನುಗಾರಿಕೆಯಲ್ಲಿ ಹೆಚ್ಚಿನ ಆದಾಯ ತರುವ ಸೀಗಡಿಗಳಂತೂ ತೀರಾ ಅಪರೂಪವಾಗಿವೆ. ಬಂಗುಡೆ ಮುಂತಾದ ಜಾತಿಯ ಮೀನುಗಳು ಸ್ವಲ್ಪ ಪ್ರಮಾಣದಲ್ಲಿ ಬಲೆಯಲ್ಲಿ ಬೀಳುತ್ತಿವೆಯಾದರೂ, ಕುಟುಂಬ ನಿರ್ವಹಣೆಗೆ ಅವು ಸಾಕಾಗುವಷ್ಟು ಸಂಖ್ಯೆಯಲ್ಲಿಲ್ಲ .
ಆದಾಯಕ್ಕಿಂತ ವೆಚ್ಚವೇ ಹೆಚ್ಚು : ಡೀಸೆಲ್ ಬೆಲೆ ಏರಿಕೆಯಿಂದಾಗಿ ಬೋಟುಗಳ ನಿರ್ವಹಣೆ ಕಷ್ಟವಾಗುತ್ತಿದೆ. ಅನೇಕ ಸಲ ಬಲೆಗೆ ಬೀಳುವ ಮೀನುಗಳು ತರುವ ಆದಾಯಕ್ಕಿಂತ ಅವುಗಳನ್ನು ಹಿಡಿಯಲು ಖರ್ಚು ಮಾಡಿದ ವೆಚ್ಚವೇ ಹೆಚ್ಚಾಗಿರುತ್ತದೆ ಎಂದು ಮೀನುಗಾರರು ಹೇಳುತ್ತಿದ್ದಾರೆ. ಇದರ ಜೊತೆಗೆ ಬೋಟಿಗಾಗಿ ಮಾಡಿದ ಸಾಲ, ಬಡ್ಡಿಗಳು ಹೆಗಲು ಹತ್ತಿವೆ.
ಕಡಲ ತಡಿಯಲ್ಲಿ ಅಡ್ಡಾಡಿದರೆ ಆಳ ಮೀನುಗಾರಿಕೆಯಲ್ಲಿ ತೊಡಗುವ ಪರ್ಸಿನ್ ಬೋಟುಗಳು ನಿರ್ವಹಣಾ ವೆಚ್ಚಕ್ಕಂಜಿ ದಡದಲ್ಲೇ ಮೊಕ್ಕಾಂ ಹೂಡಿರುವುದನ್ನು ಕಾಣಬಹುದು. ಇಂಥಾ ಸಂಕಷ್ಟ ಪರಿಸ್ಥಿತಿಯಲ್ಲಿ ಸರ್ಕಾರ ತಮ್ಮ ನೆರವಿಗೆ ಬರಬೇಕೆಂದು ತಂತ್ರ ಸ್ಥಿತಿಯಲ್ಲಿರುವ ಮೀನುಗಾರರು ಬಯಸುತ್ತಿದ್ದಾರೆ.
ರಿಯಾಯಿತಿ ದರದಲ್ಲಿ ಡೀಸೆಲ್ ನೀಡಿಕೆ, ಬಡ್ಡಿ ಮನ್ನಾ, ಮತ್ತಷ್ಟು ಸಾಲ ನೀಡಿಕೆಗಳಿಗೆ ಅವರು ಒತ್ತಾಯಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ದಿವ್ಯ ಮೌನವನ್ನು ಗಮನಿಸಿದಲ್ಲಿ ಅವರವರೆಗೆ ಸಂತ್ರಸ್ತರ ಕೂಗು ಮುಟ್ಟಿದಂತಿಲ್ಲ . ಈ ನಡುವೆ ಬೆಸ್ತರು ಕಡಲನ್ನೊಮ್ಮೆ , ಸಹಾಯಕ್ಕಾಗಿ ಬರಬಹುದೆಂದು ನಿರೀಕ್ಷಿಸುತ್ತಿರುವ ಸರ್ಕಾರಿ ಜನದ ದಿಕ್ಕನ್ನೊಮ್ಮೆ ದಿಟ್ಟಿಸುತ್ತಿದ್ದಾರೆ, ಆಸೆ ಕಂಗಳೊಂದಿಗೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications