ಪ್ರಥಮ ಯತ್ನ : ‘ವಿಡಿಯೋಕಾನ್ ಸುಪ್ರಭಾತ ಚಿತ್ರ ಪ್ರಶಸ್ತಿ 2000’
ಬೆಂಗಳೂರು : ಪ್ರಪ್ರಥಮ ಬಾರಿಗೆ ನೋಡುಗರ ಆಯ್ಕೆಯ ಕನ್ನಡ ಚಲನಚಿತ್ರ ಪ್ರಶಸ್ತಿ ‘ವಿಡಿಯೋಕಾನ್ ಸುಪ್ರಭಾತ ಚಿತ್ರ ಪ್ರಶಸ್ತಿ 2000’ ಜನವರಿ 14ರಂದು ನಗರದ ಅರಮನೆ ಆವರಣದಲ್ಲಿ ನಡೆಯಲಿದೆ ಎಂದು ಸುಪ್ರಭಾತ ಚಾನೆಲ್ನ ಮುಖ್ಯ ಅಧಿಕಾರಿ ಅನಿಲ್ ಶೆಟ್ಟಿ ಗುರುವಾರ ತಿಳಿಸಿದ್ದಾರೆ.
ಪ್ರಶಸ್ತಿಗಳ ಆಯ್ಕೆಯನ್ನು ನೋಡುಗರ ತೀರ್ಪಿಗೇ ಬಿಟ್ಟಿದ್ದು, ಅವರ ಆಯ್ಕೆಯಂತೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈವರೆಗೆ 7 ಸಾವಿರ ಮಂದಿ ತಮ್ಮ ಆಯ್ಕೆಯನ್ನು ಕಳುಹಿಸಿದ್ದು, 17 ವಿಭಾಗಗಳಲ್ಲಿನ ಪ್ರಶಸ್ತಿಯನ್ನು ಸಮಾರಂಭದ ದಿನದವರೆಗೂ ಗುಟ್ಟಾಗಿಟ್ಟಿದ್ದು, ಅಂದೇ ತಾರೆಗಳಿಗೆ ಸರ್ಪ್ರೆೃಸ್ ನೀಡಲಾಗುವುದು ಎಂದು ಅನಿಲ್ ಶೆಟ್ಟಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.
ಈ ವರ್ಷ ಪ್ರಾರಂಭವಾಗುತ್ತಿರುವ ಈ ಪ್ರಶಸ್ತಿ ಪ್ರದಾನ ಸಮಾರಂಭ ಇನ್ನು ಮುಂದೆ ಪ್ರತಿ ವರ್ಷ ಜನವರಿ ಎರಡನೇ ವಾರದಂದು ನಡೆಯಲಿದೆ. ಜೊತೆಗೆ ಸುಪ್ರಭಾತ ಚಾನೆಲ್ ಈ ಕಾರ್ಯಕ್ರಮವನ್ನು ಭಾನುವಾರ ರಾತ್ರಿ 8 ಗಂಟೆಯಿಂದ ನೇರ ಪ್ರಸಾರ ಮಾಡಲಿದೆ.
ಒಂಬತ್ತು ತಿಂಗಳ ಕೂಸು ಸುಪ್ರಭಾತ ಈಗ ತನ್ನ ಕಾಲ ಮೇಲೆ ನಿಲ್ಲುವಂತಾಗಿದೆ. ವ್ಯೂಯರ್ಷಿಪ್ ರೇಟಿಂಗ್ನಲ್ಲಿ ಉದಯ ಟಿವಿ ಬಿಟ್ಟರೆ ನಮ್ಮದೇ ಮುಂದು. ಪ್ರತಿಶತ 80ರಷ್ಟು ನೋಡುಗರನ್ನು ಚಾನೆಲ್ ಹೊಂದಿದೆ. ಮಾರ್ಚ್ ಹೊತ್ತಿಗೆ ವಾರ್ತಾ ಪ್ರಸಾರ ಸೇರಿದಂತೆ 18 ಹೊಸ ಕಾರ್ಯಕ್ರಮಗಳನ್ನು ಚಾನೆಲ್ ಪ್ರಸಾರ ಮಾಡಲಿದೆ ಎಂದು ಅನಿಲ್ ವಿವರಿಸಿದರು.
(ಯುಎನ್ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications