ದಾವಣಗೆರೆ- ಬೆಂಕಿಗೆ ಮಹಿಳೆ ಬಲಿ, ಕಾನ್ಪುರದಲ್ಲಿ ಶೀತಗಾಳಿಗೆ 2 ಸಾವು
ದಾವಣಗೆರೆ : ಗುರುವಾರ ಮುಂಜಾನೆ ಇಲ್ಲಿ ಸಂಭವಿಸಿದ ಬೆಂಕಿ ಅಪಘಾತಕ್ಕೆ 30 ವರ್ಷ ವಯಸ್ಸಿನ ಮಹಿಳೆಯಾಬ್ಬರು ಬಲಿಯಾಗಿದ್ದಾರೆ.
ಗುಡಿಸಿಲಿನ ಒಳಗೆ ಮಲಗಿದ್ದ ಸಾವಕ್ಕ ಎನ್ನುವ ಮಹಿಳೆ ಗುಡಿಸಿಲಿಗೆ ತಗುಲಿದ ಬೆಂಕಿಯಲ್ಲಿ ಸಾವನ್ನಪ್ಪಿದ್ದಾರೆ. ಗುಡಿಸಲಿನ ಹೊರಗೆ ಮಲಗಿದ್ದ ಆಕೆಯ ಗಂಡ ಹಾಗೂ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿ ಆಕಸ್ಮಿಕಕ್ಕೆ ಕಾರಣ ತಿಳಿದು ಬಂದಿಲ್ಲ .
ಕಾನ್ಪುರದಲ್ಲಿ ಶೀತ ಮಾರುತಕ್ಕೆ ಮತ್ತಿಬ್ಬರ ಬಲಿ
ಉತ್ತರ ಪ್ರದೇಶದಲ್ಲಿ ಮರಗಟ್ಟಿಸುವ ತೀವ್ರ ಚಳಿ ಮುಂದುವರಿದಿದ್ದು , ರಾಜ್ಯದ ಪ್ರಮುಖ ಕೈಗಾರಿಕಾ ಪಟ್ಟಣ ಕಾನ್ಪುರದಲ್ಲಿ ಬುಧವಾರದಿಂದೀಚೆಗೆ ಶೀತಕ್ಕೆ ಮತ್ತಿಬ್ಬರು ಬಲಿಯಾಗಿದ್ದಾರೆ. ಪಟ್ಟಣದಲ್ಲಿ ಉಷ್ಣಾಂಶದ ಮಟ್ಟ 0.5 ಡಿಗ್ರಿ ಸೆಲ್ಷಿಯಸ್ ಮುಟ್ಟಿದೆ. ಈ ವರ್ಷ ಉಷ್ಣಾಂಶ ತೀರಾ ಕನಿಷ್ಠ ಪ್ರಮಾಣಕ್ಕೆ ಕುಸಿಯುತ್ತಿರುವುದು ಎರಡನೇ ಬಾರಿ. ಈ ಮೊದಲು ಜನವರಿ 7 ರಂದು ಉಷ್ಣಾಂಶದ ಮಟ್ಟ 0.6 ಡಿಗ್ರಿ ಸೆಲ್ಷಿಯಸ್ ಮುಟ್ಟಿತ್ತು .
ತೀವ್ರ ಚಳಿಗಾಳಿಯಿಂದಾಗಿ ಗಿರಣಿ ಕಾರ್ಮಿಕ ಶಂಕರ್ ಲಾಲ್ ಗುರುವಾರ ಬೆಳಿಗ್ಗೆ ನಿಧನನಾಗಿದ್ದರೆ, ಹಮಾಲಿ ಕೆಲಸದ ಸರ್ಜು ಅಲಿಯಾಸ್ ಸರ್ಕಾರ್ ಬುಧವಾರ ಸಾವಿಗೀಡಾಗಿದ್ದಾನೆ. ಇದರಿಂದಾಗಿ ಪ್ರಸ್ತುತ ಶೀತಕಾಲದಲ್ಲಿ ಸತ್ತವರ ಸಂಖ್ಯೆ ಕಾನ್ಪುರದಲ್ಲಿ ನಾಲ್ಕಕ್ಕೆ ಏರಿದೆ.
ಸುರಿಯುತ್ತಿರುವ ಹಿಮ ರೈಲ್ವೆ ಸಂಚಾರಕ್ಕೂ ಅಡ್ಡಿಯಾಗಿದ್ದು , ಅನೇಕ ರೈಲುಗಳ ಆಗಮನ ಹಾಗೂ ನಿರ್ಗಮನ ವೇಳೆಗಳಲ್ಲಿ ವ್ಯತ್ಯಯವುಂಟಾಗಿದೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications