ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲೊಂದು 30 ಕೋಟಿ ರು. ವೆಚ್ಚದ ಹೈಟೆಕ್‌ ಆಸ್ಪತ್ರೆ

By Staff
|
Google Oneindia Kannada News

ಬೆಂಗಳೂರು : ಉತ್ತಮ ಚಿಕಿತ್ಸೆಗಾಗಿ ಮೈಸೂರು ಹಾಗೂ ಸುತ್ತಮುತ್ತಲ ಊರುಗಳ ನಿವಾಸಿಗಳು ಇನ್ನು ಮುಂದೆ ಬೆಂಗಳೂರಿಗೆ ಬಸ್‌ ಹಿಡಿದು ಬರುವ ಅಗತ್ಯ ಇಲ್ಲ. ಸುಮಾರು 30 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೈಟೆಕ್‌ ಆಸ್ಪತ್ರೆಯಾಂದು ಮೈಸೂರಿನಲ್ಲಿ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ.

ಬಿ.ಜಿ. ಟ್ರಸ್ಟ್‌ ನ ಈ ಆಸ್ಪತ್ರೆ ಮಾರ್ಚ್‌ ಅಥವಾ ಏಪ್ರಿಲ್‌ ನಲ್ಲಿ ಉದ್ಘಾಟನೆ ಆಗಲಿದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ಬಾಲ ಗಂಗಾಧರನಾಥ ಸ್ವಾಮಿಗಳು ಗುರುವಾರ ತಿಳಿಸಿದ್ದಾರೆ. ಅಪೋಲೋ ಆಸ್ಪತ್ರೆಯ ಸಹಕಾರ ಹಾಗೂ ಸಲಹೆಯ ಮೇರೆಗೆ ಈ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದ್ದು, ಮೂತ್ರಪಿಂಡದ ಸಮಸ್ಯೆ, ಹೃದಯದ ತೊಂದರೆಗೆ ಅತ್ಯುತ್ತಮ ಔಷಧೋಪಚಾರ ಇಲ್ಲಿ ದೊರಕಲಿದೆ. ಸುಸಜ್ಜಿತವಾದ ಈ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ 15 ಕೋಟಿ ರುಪಾಯಿ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳಿಗಾಗಿ 15 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ.

ಆಸ್ಪತ್ರೆಯ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದ್ದು, ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಆಸ್ಪತ್ರೆ ಆರಂಭವಾಗುವಾಗ ಆಸ್ಪತ್ರೆಯು ಕೇವಲ 150 ಹಾಸಿಗೆಗಳ ಸಾಮರ್ಥ್ಯದ್ದಾಗಿರುತ್ತದಾದರೂ, ಹಂತಹಂತವಾಗಿ ಇದನ್ನು 350 ಹಾಸಿಗೆಗಳಿಗೆ ಏರಿಸಲಾಗುವುದು ಎಂದು ಅಪೋಲೋ ಆಸ್ಪತ್ರೆಯ ಯೋಜನಾ ವಲಯದ ಮುಖ್ಯಸ್ಥರಾದ ಡಾ. ಶ್ರೀನಿವಾಸ್‌, ನಿರ್ದೇಶಕರಾದ ರಾಧಾಕೃಷ್ಣ ಅವರ ಸಮ್ಮುಖದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವಾಮೀಜಿಗಳು ತಿಳಿಸಿದರು. ಬಡಜನರ ಸೇವೆಯೇ ಆಸ್ಪತ್ರೆಯ ಗುರಿಯಾಗಿದ್ದು, ಹಾಸನ, ಮಂಡ್ಯ, ಮೈಸೂರು ಪ್ರಾಂತದ ರೋಗಿಗಳಿಗೆ ಇದರಿಂದ ಅನುಕೂಲವಾಗಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X