Get Updates
Get notified of breaking news, exclusive insights, and must-see stories!

ಮಕರ ಜ್ಯೋತಿ, ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ವಿಶೇಷ ವ್ಯವಸ್ಥೆ

ಶಬರಿ ಮಲೆ : ಜನವರಿ 14ರಂದು ಮಕರ ಸಂಕ್ರಾಂತಿ. ಶಬರಿಮಲೆಯ ಅಯ್ಯಪ್ಪನ ಸನ್ನಿಧಾನದ ಪೊನ್ನಂಬಲ ಮೇಡ್‌ನಲ್ಲಿ ಅಂದು ಪ್ರಕಟಗೊಳ್ಳುವ ಮಕರ ಜ್ಯೋತಿಯ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ಭಕ್ತರ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸಂಚಾರದ ಅಡೆತಡೆ ತಪ್ಪಿಸಲು ಮಂಡಳಿಯು ಹೊಸ ಸರತಿಯ ಸಾಲು ಪದ್ಧತಿಯನ್ನು ಈ ಸಾಲಿನಿಂದ ಆರಂಭಿಸುತ್ತಿದೆ. ಈ ಹೊಸ ಪದ್ಧತಿಯಲ್ಲಿ 50 ಭಕ್ತರ ಗುಂಪುಗಳನ್ನು ಮಾಡಿ, ದೇವಾಲಯಕ್ಕೆ ಪ್ರವೇಶ ನೀಡಲಾಗುವುದು ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ಶಬರಿಮಲೆಯಲ್ಲಿ ಹರಿಯುವ ಪಂಪಾ ನದಿಯ ಶುದ್ಧೀಕರಣಕ್ಕೆ 1.64 ಕೋಟಿ ರುಪಾಯಿಗಳ ಯೋಜನೆಯನ್ನು ಸಹ ಕೈಗೆತ್ತಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸಾದ ವಿನಿಯೋಗಕ್ಕೂ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ತಿರುವಾಂಕೂರು ದೇವಸ್ವಂ ಮಂಡಳಿ ಅಯ್ಯಪ್ಪ ಸ್ವಾಮಿಯ ನಾಲ್ಕು ಉಪ ದೇವಾಲಯಗಳನ್ನು ನವೀಕರಿಸಲೂ ತೀರ್ಮಾನಿಸಿದೆ. ಈ ಉಪ ದೇವಾಲಯಗಳಲ್ಲಿ ವಸತಿ ವ್ಯವಸ್ಥೆ, ಉಪಹಾರ ಗೃಹ ಮತ್ತು ಮಹಿಳಾ ಭಕ್ತಾದಿಗಳಿಗಾಗಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದೂ ಮಂಡಳಿಯ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ನಕಲಿ ಪ್ರಸಾದದ ಅಂಗಡಿಗಳ ಮೇಲೆ ದಾಳಿ : ಪಂಪಾ ಮತ್ತು ಅಯ್ಯಪ್ಪನ ಸನ್ನಿಧಾನದ ಸುತ್ತಮುತ್ತ ನಕಲಿ ಪ್ರಸಾದಗಳನ್ನು ಕವರ್‌ಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದ ದೂರಿನ ಮೇರೆಗೆ ದೇವಸ್ವಂ ಮಂಡಳಿಯ ಸದಸ್ಯರಾದ ಪ್ರೊ. ಡಿ. ಶಶಿಧರನ್‌ ಅವರ ನೇತೃತ್ವದಲ್ಲಿ ಇತ್ತೀಚೆಗೆ ಕೆಲವು ಅಂಗಡಿಗಳ ಮೇಲೆ ದಾಳಿ ಮಾಡಿ ನಕಲಿ ಪ್ರಸಾದಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+