ಮುಚ್ಚಿದ ಚಿನ್ನದ ಗಣಿಯ ಕಚೇರಿಯ ಮೇಲೆ ಕಿಚ್ಚುಕಾರಿದ ಕಾರ್ಮಿಕರು
ಕೋಲಾರ್ ಗೋಲ್ಡ್ ಫೀಲ್ಡ್ಸ್ : ಚಿನ್ನದ ಗಣಿಯ ಬಾಗಿಲು ಮುಚ್ಚಿರುವುದನ್ನು ವಿರೋಧಿಸಿ ಭಾರತ್ ಗೋಲ್ಡ್ ಮೈನ್ಸ್‌ನ ಕಾರ್ಮಿಕರು ಬುಧವಾರ ಇಲ್ಲಿ ಭಾರಿ ಪ್ರತಿಭಟನೆ ನಡೆಸಿದರು. ಸುಮಾರು 2000 ಮಂದಿ ಇದ್ದ ಕಾರ್ಮಿಕರ ಗುಂಪು ಗಣಿಯ ಮುಖ್ಯ ಕಚೇರಿಗೆ ಲಗ್ಗೆ ಹಾಕಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದರಿಂದ ಪ್ರತಿಭಟನೆ ಆಕ್ರೋಸಕ್ಕೆ ತಿರುಗಿ ಗಣಿ ಪಟ್ಟಣದಲ್ಲಿ ಅಶಾಂತಿ ತಲೆದೋರಿತು. ಕಾರ್ಮಿಕರು ಕಲ್ಲೆಸೆದರು, ಗಣಿ ಕಚೇರಿಗೆ ನುಗ್ಗಿದರು, ಚಿಲ್ಲಾಪಿಲ್ಲಿ ಮಾಡಿದರು.
ಬಿಜಿಎಂಎಲ್‌ನ ಆಡಳಿತ ನಿರ್ದೇಶಕ ಎಸ್. ಡಿ. ಪ್ರಸಾದ್ ಅದೃಷ್ಟವಶಾತ್ ಅಪಾಯದಿಂದ ಪಾರಾದರು. ಕಳೆದ ಒಂದು ತಿಂಗಳಿಂದ ಸಂಪು ಹೂಡಿರುವ ಕಾರ್ಮಿಕರು ಇದ್ದಕ್ಕಿದ್ದಂತೆ ಕಚೇರಿಗೆ ದಾಳಿ ಇಟ್ಟರು, ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದರು, ಆಫೀಸಿನ ದಾಖಲೆ ಪತ್ರಗಳನ್ನು ಹಾಳುಗೆಡವಿದರು ಎಂದು ದಾಳಿಯಿಂದ ವಿಚಲಿತರಾದಂತೆ ಕಂಡುಬಂದ ಪ್ರಸಾದ್ ಹೇಳಿದರು. ಪೊಲೀಸರು ಮತ್ತು ಸೆಕ್ಯೂರಿಟಿ ಸಿಬ್ಬಂದಿ ಮೂಕ ಪ್ರೇಕ್ಷಕರಾಗಿದ್ದರು ಎಂದೂ ಅವರು ತಿಳಿಸಿದರು.
ಕಂಪನಿಯ ಸದ್ಯದ ಪರಿಸ್ಥಿತಿಯ ಬಗ್ಗೆ ಯುಎನ್‌ಐ ವಾರ್ತಾ ಸಂಸ್ಥೆಗೆ ವಿವರ ನೀಡಿದ ಪ್ರಸಾದ್ ಹೇಳಿದರು :
- ಕಂಪನಿಯು ಒಟ್ಟು ನಷ್ಟ 90 ಕೋಟಿ ರೂಪಾಯಿಗಳಿಗೆ ಬಂದು ನಿಂತಿದೆ.
- ಮಾರ್ಚ್ 31ಕ್ಕೆ ಕಂಪನಿಯನ್ನು ಮುಚ್ಚುವಂತೆ ಕೇಂದ್ರ ಸರಕಾರ ಆದೇಶ ಕೊಟ್ಟಿದೆ.
- ಗಣಿಗಾರಿಕೆಯನ್ನು ಮುಂದುವರೆಸುವುದು ಆರ್ಥಿಕವಾಗಿ ಪ್ರಯೋಜನವಾಗದು.
- ಡಿಸೆಂಬರ್ 11 ರಿಂದ ಜಾರಿಗೆ ತಂದ ಸ್ವಯಂ ನಿವೃತ್ತಿ ಯೋಜನೆ ಇಂದಿಗೆ (ಜನವರಿ, 10) ಕೊನೆಗೊಳ್ಳುತ್ತದೆ.
ಸದ್ಯ ಕೆಜಿಎಫ್‌ನಲ್ಲಿ ಪರಿಸ್ಥಿತಿ ಮೇಲ್ನೋಟಕ್ಕೆ ತಣ್ಣಗಿದೆ. ಪೊಲೀಸರು ಚುರುಕಾಗಿದ್ದು ಶಾಂತಿ ಕಾಪಾಡಲು ಉಸ್ತುವಾರಿ ನಡೆಸುತ್ತಿದ್ದಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications