ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಯಾಷನ್‌ ಟಿವಿಗೆ ಭಾರತದಲ್ಲಿ ಬಹಿಷ್ಕಾರ: ಸಂಕ್ರಾಂತಿ ನಂತರ ತೀರ್ಮಾನ

By Staff
|
Google Oneindia Kannada News

ಚೆನ್ನೈ : ಪ್ಯಾರಿಸ್‌ನಿಂದ ಪ್ರಸಾರವಾಗುವ ಫ್ಯಾಷನ್‌ ಟೀವಿಗೆ (ಎಫ್‌ಟಿವಿ) ನಿಷೇಧ ಹೇರಬೇಕೆ ಬೇಡವೆ ಎನ್ನುವ ವಿಷಯದ ಕುರಿತು ಕೇಂದ್ರ ಸರ್ಕಾರ ಇಷ್ಟರಲ್ಲಿಯೇ ತೀರ್ಮಾನ ಕೈಗೊಳ್ಳಲಿದೆ.

ಈ ವಿಷಯವನ್ನು ಬುಧವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ತಿಳಿಸಿದರು. ಉನ್ನತ ಮಟ್ಟದ ಸಮಿತಿಯಾಂದು ಫ್ಯಾಷನ್‌ ಟಿವಿಯ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದೆ. ಜನವರಿ 15 ರಂದು ಭಾರತದಲ್ಲಿನ ಫ್ರೆಂಚ್‌ ರಾಯಭಾರಿ ಅವರೊಂದಿಗಿನ ಚರ್ಚೆಯ ನಂತರ ಎಫ್‌ಟಿವಿ ನಿಷೇಧದ ಬಗ್ಗೆ ಅಂತಿಮ ನಿರ್ಣಯಕ್ಕೆ ಬರಲಾಗುವುದು ಎಂದರು.

ದೇಶದಲ್ಲಿ ಅನೇಕರು ಎಫ್‌ಟಿವಿ ಕಾರ್ಯಕ್ರಮಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ದಿನೇ ದಿನೇ ಆಕ್ಷೇಪಗಳ ಸಂಖ್ಯೆ ಹೆಚ್ಚುತ್ತಿದೆ. ಎಫ್‌ಟಿವಿ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಗೆ ಒಗ್ಗುವುದಿಲ್ಲ ಎನ್ನುವುದು ಪ್ರಮುಖ ದೂರು ಎಂದು ಸುಷ್ಮಾ ಹೇಳಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X