Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ ತಿರುವಳ್ಳುವರ್‌ ಪ್ರತಿಮೆ ಸ್ಥಾಪನೆಗೆಚಂಪಾ ವಿರೋಧ

ಬೆಳಗಾವಿ : ಬೆಂಗಳೂರಲ್ಲಿ ತಿರುವಳ್ಳುವರ್‌ ಪ್ರತಿಮೆ ಅನಾವರಣ ಹಾಗೂ ರಾಜ್ಯದಲ್ಲಿ ತಮಿಳು ದ್ವಿತೀಯ ಭಾಷೆಯಾಗಬೇಕು ಎಂಬ ನೆಡುಮಾರನ್‌ ಅವರ ಒತ್ತಾಯವನ್ನು ತಾವು ವಿರೋಧಿಸುವುದಾಗಿ ಕನ್ನಡ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ್‌ ಮಂಗಳವಾರ ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿರುವ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ನೆಡುಮಾರನ್‌ ಅವರ ಬಗೆಗೆ ನನಗೆ ಅಪಾರ ಗೌರವವಿದೆ. ಹಾಗಂತ ಅವರು ಹೇಳುವ ಎಲ್ಲಕ್ಕೂ ಸಹಮತ ವ್ಯಕ್ತಪಡಿಸಬೇಕಾಗಿಲ್ಲ. ಕನ್ನಡ ಹಾಗೂ ತಮಿಳು ಸಮುದಾಯದವರನ್ನು ದೂರ ಮಾಡಲು ತಿರುವಳ್ಳುವರ್‌ ಪ್ರತಿಮೆಯಾಂದೇ ಸಾಕು. ಈ ಕಾರಣ ಬೆಂಗಳೂರಿನಲ್ಲಿ ತಿರುವಳ್ಳುವರ್‌ ಪ್ರತಿಮೆ ಅನಾವರಣ ಕೂಡದು ಎಂದು ಅಭಿಪ್ರಾಯ ಪಟ್ಟರು.

ಬೆಂಗಳೂರಿನಲ್ಲಿ ಅಗ್ನಿ ಪತ್ರಿಕಾ ಬಳಗ ನೆಡುಮಾರನ್‌ ಅವರನ್ನು ಸನ್ಮಾನಿಸಲು ಯೋಜಿಸಿದ್ದ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡ ಅವರು, ರಾಜ್‌ಕುಮಾರ್‌ ಬಿಡುಗಡೆಗೆ ನೆಡುಮಾರನ್‌ ಅವರೇ ಕಾರಣ. ಯಾರಾದರೂ ಸಹಾಯ ಮಾಡಿದರೆ ಅವರನ್ನು ಗೌರವಿಸುವುದು ಪ್ರಜ್ಞಾವಂತರ ಕರ್ತವ್ಯ. ಅವರು ಮಾಡಿರುವ ಮಹತ್ಕಾರ್ಯಕ್ಕೆ ಕೃತಜ್ಞತೆ ಅರ್ಪಿಸುವುದು ಸಮಯೋಚಿತವಾದದ್ದು ಎಂದರು.

ತಿರುವಳ್ಳುವರ್‌ ಕಾಲದಲ್ಲಿ ತಮಿಳು ಹಾಗೂ ಕನ್ನಡ ಬೇರೆ ಬೇರೆ ಭಾಷೆಗಳಾಗಿರಲಿಲ್ಲ. ಬೆಂಗಳೂರಿನಲ್ಲಿ ತಿರುವಳ್ಳುವರ್‌ ಪ್ರತಿಮೆ ಅನಾವರಣ ವಿರೋಧಿಸುವಂಥ ಪರಿಸ್ಥಿತಿ ಆಗ ಇರಲಿಲ್ಲ. ಆದರೆ ಈ ಹೊತ್ತು ಪ್ರತಿಮೆ ಅನಾವರಣದಿಂದ ಉಭಯ ಭಾಷಿಕರಲ್ಲಿ ಸಾಮರಸ್ಯ- ಬಾಂಧವ್ಯಕ್ಕೆ ಹೊಡೆತ ಬೀಳುವ ಸಾಧ್ಯತೆಯಿದೆ. ಯಾಕೆಂದರೆ ತಿರುವಳ್ಳುವರ್‌ ಪ್ರತಿಮೆ ಅನಾವರಣ ತಮಿಳರ ಸ್ವಾಭಿಮಾನದ ಸಂಕೇತವಾಗಿದೆ ಎಂದು ಚಂಪಾ ಹೇಳಿದರು.

ನಮ್ಮ ರಾಜ್ಯದಲ್ಲಿ ತಮಿಳರು ಮುಖ್ಯವಾಹಿನಿಯಲ್ಲಿ ಬೆರೆಯದಿರಲು ಮುಖ್ಯ ಕಾರಣ ತಮಿಳುನಾಡಿನ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ಸ್ವಾರ್ಥ ರಾಜಕೀಯ ಎಂಬ ಪಿ.ಷಣ್ಮುಗಂ ಅವರ ಮಾತು ಅಕ್ಷರಶಃ ಸತ್ಯ ಎಂದು ಚಂಪಾ ಅಭಿಪ್ರಾಯ ಪಟ್ಟರು.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+