Get Updates
Get notified of breaking news, exclusive insights, and must-see stories!

ನಿಷೇಧಾಜ್ಞೆ ಮುರಿದ ಭಕ್ತರು : ರಾಣಿಬೆನ್ನೂರಲ್ಲಿ ಅಶ್ರುವಾಯು

ರಾಣಿಬೆನ್ನೂರು : ಭಾನುವಾರ ರಾತ್ರಿ ಎರಡು ಅಂಗಡಿಗಳು ಸುಟ್ಟು ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಮೂರ್ತಿ ಉತ್ಸವಗಳನ್ನು ಮಾಡಕೂಡದೆಂದು ಜಿಲ್ಲಾಡಳಿತ ಸೂಚಿಸಿದ್ದರೂ, ಅದನ್ನು ನಿರ್ಲಕ್ಷಿಸಿದ ಜನರ ಮೇಲೆ ಪೊಲೀಸರು ಸೋಮವಾರ ಲಾಠಿ ಪ್ರಹಾರ ಮಾಡಿ, ಅಶ್ರುವಾಯು ಸಿಡಿಸಿದರು.

ನಗರದಲ್ಲಿ ಉದ್ರಿಕ್ತ ಪರಿಸ್ಥಿತಿಯ ಕಾರಣ ಅಪರಾಧಿ ಪ್ರಕ್ರಿಯಾ ಸಂಹಿತೆ 144ನೇ ಪರಿಚ್ಛೇದದನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಸೋಮವಾರ ಚೌಡೇಶ್ವರಿ ಜಾತ್ರೆ. ಉತ್ಸವ ಮಾಡಕೂಡದೆಂದು ಜಿಲ್ಲಾಡಳಿತ ಸೂಚಿಸಿದ್ದರೂ, ಕೆಲ ಜನ ರಾತ್ರಿ 9 ಗಂಟೆ ಸುಮಾರಿಗೆ ಗಂಗಾಜಲ ಚೌಡೇಶ್ವರಿ ಮತ್ತು ತುಂಗಾಜಲ ಚೌಡೇಶ್ವರಿ ಮೂರ್ತಿಗಳ ಮೆರವಣಿಗೆ ನಡೆಸಲು ಮುಂದಾದರು. ಪೊಲೀಸರು ಜನರನ್ನು ನಿಯಂತ್ರಿಸಲು ಅನಿವಾರ್ಯವಾಗಿ ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಬೇಕಾಯಿತು.

ಅಸಮಾಧಾನಗೊಂಡಿದ್ದ ಭಕ್ತರಿಗೆ ಸೋಮವಾರ ರಾತ್ರಿಗೆ ಬದಲಾಗಿ ಮಂಗಳವಾರ ಬೆಳಗಿನ ಜಾವ ಮೆರವಣಿಗೆ ನಡೆಸಲು ಜಿಲ್ಲಾಧಿಕಾರಿ ಟಿ. ಮುಕ್ತಾಂಬ ಶಾಂತಿ ಸಭೆಯಲ್ಲಿ ಅನುಮತಿ ಕೊಟ್ಟಿದ್ದರೂ, ಭಕ್ತರು ಅದಕ್ಕೆ ಓಗೊಡಲಿಲ್ಲ. ಪರಿಸ್ಥಿತಿ ಇನ್ನೂ ಬಿಗುವಾಗಿದ್ದು, ಗಲ್ಲಿ ಗಲ್ಲಿಗಳಲ್ಲಿ ಪೊಲೀಸ್‌ ಪಹರೆ ಹಾಕಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+