ಸಹಸ್ರಮಾನದ ಮೊದಲ ಕುಂಭಮೇಳ ವಿಧ್ಯುಕ್ತವಾಗಿ ಪ್ರಾರಂಭ
ಅಲಹಾಬಾದ್ : ಕೊರೆಯುವ ಚಳಿಯಲ್ಲೂ ಭಗವತ್ಪ್ರೇಮ ಮೆರೆಯುತ್ತಿದೆ. ಕಣ್ಣಾಡಿಸಿದಷ್ಟೂ ನೀರಿನಲ್ಲಿ ಮುಳುಗೇಳುತ್ತಿರುವ ಜನರ ದಂಡು. ಮಂಗಳವಾರ ಸಂಗಮದಲ್ಲಿ ಪ್ರಾರಂಭವಾದ ಸಹಸ್ರಮಾನದ ಮೊದಲ ಮಹಾ ಕುಂಭ ಮೇಳದಲ್ಲಿ ಕಾಣುತ್ತಿರುವ ದೃಶ್ಯಗಳಿವು.
ಬಗೆಬಗೆಯ ಭಾಷಿಕರು, ವಿವಿಧ ದೇಶೀಯರು ತಂಡೋಪತಂಡವಾಗಿ ಸೋಮವಾರ ಬೈಗಿನಿಂದಲೇ ಸಂಗಮಕ್ಕೆ ಬರಲಾರಂಭಿಸಿದರು. ಮಂಗಳವಾರ ಮೊದಲ ಜಾವ 2 ಗಂಟೆಯ ಹೊತ್ತಿಗೆ ಲಕ್ಷಾಂತರ ಮಂದಿ ಗಂಗಾ- ಯಮುನಾ- ಸರಸ್ವತಿ ಸಂಗಮದಲ್ಲಿ ಮೀಯಲು ಶುರು ಮಾಡಿದರು. 12 ವರ್ಷಗಳಿಗೊಮ್ಮೆ ಕಾಣಸಿಗುವ ಈ ದೃಶ್ಯ ನೋಡಲೆಂದೇ ಸ್ಥಳೀಯ ಮಂದಿ ಇಣುಕು ಹಾಕುತ್ತಿದ್ದಾರೆ.
ಈಗ ನಮ್ಮ ನಿರೀಕ್ಷೆಯಷ್ಟೇ ಜನ ಬಂದು ಸೇರಿದ್ದಾರೆ. ಒಟ್ಟು 50 ಲಕ್ಷ ಮಂದಿ ಇಲ್ಲಿ ಪಾವನ ಸ್ನಾನ ಮಾಡುವ ನಿರೀಕ್ಷೆಯಿದೆ. ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಉನ್ನತ ಅಧಿಕಾರಿಗಳೇ ದಂಡೇ ಇಲ್ಲಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕಣ್ಣಿಡಲು ಪೊಲೀಸರ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಜೀವನ್ ನಂದನ್ ಹೇಳಿದ್ದಾರೆ.
ಭವಿಷ್ಯಕಾರರು ಜನವರಿ 9 ಅಲ್ಲದೆ ಜನವರಿ 14, 24 ಹಾಗೂ 29, ಫೆಬ್ರವರಿ 8 ಹಾಗೂ 21ನೇ ತಾರೀಖು ಇಲ್ಲಿ ಸ್ನಾನ ಮಾಡುವುದರಿಂದ ಇಹ ಕಷ್ಟಗಳೆಲ್ಲಾ ಬಗೆಹರಿಯುತ್ತವೆ ಎಂದು ಲೆಕ್ಕ ಹಾಕಿ ತಿಳಿಸಿದ್ದಾರೆ. ನಭೋ ಮಂಡಲದಲ್ಲಿ ನಕ್ಷತ್ರಗಳು ಈ ದಿನಗಳಲ್ಲಿ ಸ್ಥಾನಪಲ್ಲಟಗೊಳ್ಳುವುದರಿಂದ ಇಲ್ಲಿ ಮೀಯುವುದು ಪವಿತ್ರ ಎಂದಿದ್ದಾರೆ.
ಸುಮಾರು 2000 ವರ್ಷಗಳಷ್ಟು ಇತಿಹಾಸವಿರುವ ಕುಂಭಮೇಳಕ್ಕೆ ಪಾಪ್ ತಾರೆ ಮೆಡೋನ, ಹಾಲಿವುಡ್ ದಿಗ್ಗಜಗಳಾದ ಶರೋನ್ ಸ್ಟೋನ್, ಡೆಮಿ ಮೂರ್, ಪಿಯರ್ಸ್ ಬ್ರೋಸ್ನನ್ ಹಾಗೂ ರಿಚರ್ಟ್ ಗೆರೆ ಆಗಮಿಸುವ ನಿರೀಕ್ಷೆಯಿದೆ.
(ರಾಯ್ಟರ್ಸ್)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications