ಬಡ ಮಕ್ಕಳಿಗೆ ಕ್ರಿಕೆಟ್ ಕಲಿಸಲು ಅನುವು ಕೋರಿ ಕೋರ್ಟ್‌ಗೆ ಕ್ರೋನಿಯೆ
ಕೇಪ್‌ಟೌನ್ : ಸವಲತ್ತು ವಂಚಿತ ಮಕ್ಕಳಿಗೆ ಕ್ರಿಕೆಟ್ ಕಲಿಸುವ ಆಸೆಗೆ ಆಜೀವ ನಿಷೇಧ ತಣ್ಣೀರೆರಚಿದೆ. ಅದನ್ನು ತೆಗೆದು ಹಾಕಿ ನನ್ನ ಒಳ್ಳೆ ಕೆಲಸಕ್ಕೆ ಅನುವು ಮಾಡಿಕೊಡಿ ಎಂದು ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ಮಾಜಿ ನಾಯಕ ಹ್ಯಾನ್ಸಿ ಕ್ರೋನಿಯೆ ಪ್ರಿಟೋರಿಯಾ ಹೈಕೋರ್ಟ್‌ಗೆ ಮೊರೆಹೋಗಿದ್ದಾರೆ.
ದಕ್ಷಿಣ ಆಫ್ರಿಕದ ಯುನೈಟೆಡ್ ಕ್ರಿಕೆಟ್ ಬೋರ್ಡ್‌ನ ಯಾವುದೇ ಚಟುವಟಿಕೆಯಲ್ಲೂ ಭಾಗವಹಿಸದಂತೆ ನಿಷೇಧಕ್ಕೆ ಒಳಗಾಗಿರುವ ಕ್ರೋನಿಯೆ, ಸವಲತ್ತು ವಂಚಿತ ಮಕ್ಕಳಿಗೆ ತರಬೇತಿ ನೀಡಲು ತನಗೆ ಅವಕಾಶ ಮಾಡಿಕೊಡಿ ಎಂದು ಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೇಳಿಕೊಂಡಿದ್ದಾರೆ.
ಅರ್ಜಿಯಲ್ಲಿ ಕ್ರೋನಿಯೆ ತೋಡಿಕೊಂಡಿರುವುದು.....
ನಾನು ತಪ್ಪು ಮಾಡಿದ್ದೇನೆ ನಿಜ. ಆದರೆ ಅದಕ್ಕಾಗಿ ಈಗ ಪಶ್ಚಾತ್ತಾಪ ಪಡುತ್ತಿದ್ದೇನೆ. ಮಾಡಿರೋ ತಪ್ಪನ್ನು ತಿದ್ದಿಕೊಳ್ಳಬೇಕೆಂದಿದ್ದೇನೆ. ನಾನು ಕಲಿತಿದ್ದನ್ನು ಸೌಲಭ್ಯಗಳಿಂದ ವಂಚಿತರಾದ ಪ್ರತಿಭಾನ್ವಿತ ಮಕ್ಕಳಿಗೆ ಹೇಳಿಕೊಡಲಾದರೂ ನನಗೆ ಅವಕಾಶ ಬೇಕಿದೆ. ಹಿಂದುಳಿದ ಜಾಗೆಯಲ್ಲಿರುವ ಗೀಲ್‌ಹೌಟ್ ಬ್ರೂಮ್ ಪ್ರಾಥಮಿಕ ಶಾಲೆಗೆ ಒಂದು ಕ್ರಿಕೆಟ್ ಕಿಟ್ ಕೊಡಿಸಿದ್ದೇನೆ.
ಮೊನ್ನೆ ಯಾವುದೋ ಒಂದು ಪಂದ್ಯಕ್ಕೆ ಬುಲಾವು ಬಂದಿತ್ತು. ಆದರೆ ನಿಷೇಧ ನನ್ನನ್ನು ಕಟ್ಟಿಹಾಕಿತು. ನಿಷೇಧಕ್ಕೆ ಒಳಗಾಗುವ ಮುಂಚೆ ನಾನು ಕ್ರಿಕೆಟ್‌ಗೇ ನನ್ನನ್ನು ಅರ್ಪಿಸಿಕೊಂಡಿದ್ದೆ. ಈಗಲೂ ಅದೇ ನನ್ನ ಮನೋಭಾವನೆ. ಅದಕ್ಕೀಗ ಅವಕಾಶವೇ ಇಲ್ಲವಾಗಿದೆ. ಸಂಭಾವನೆ ಪಡೆಯದೆ ಸ್ವ ಇಚ್ಛೆಯಿಂದ ಕಲಿತದ್ದನ್ನು ಧಾರೆ ಎರೆಯಲು ನನಗೆ ಅವಕಾಶ ಕೊಟ್ಟರಷ್ಟೇ ಸಾಕು.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications