Get Updates
Get notified of breaking news, exclusive insights, and must-see stories!

ಮಾಧವನ್‌- ವಾಡೇಕರ್‌ ಮುಖಾಮುಖಿ, ಬುಧವಾರ ಕಪಿಲ್‌ ಸರದಿ

ನವದೆಹಲಿ : ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ತರಬೇತುದಾರ ಅಜಿತ್‌ ವಾಡೇಕರ್‌ ಸೋಮವಾರ ಮುಂಜಾನೆ ಬಿಸಿಸಿಐನ ವಿಶೇಷ ಆಯುಕ್ತ ಕೆ.ಮಾಧವನ್‌ ಅವರ ಮುಂದೆ ವಿಚಾರಣೆಗೆ ಹಾಜರಾದರು.

ಭಾರತದ ಮತ್ತೊಬ್ಬ ಮಾಜಿ ನಾಯಕ ಕಪಿಲ್‌ ದೇವ್‌ ಬುಧವಾರ ವಿಚಾರಣೆಗೆ ಹಾಜರಾಗಲಿದ್ದಾರೆ. ಈ ಮುನ್ನಾ ನಿಗದಿಯಾಗಿದ್ದಂತೆ ಶನಿವಾರ ಕಪಿಲ್‌ ಹಾಗೂ ಭಾನುವಾರ ವಾಡೇಕರ್‌ ವಿಚಾರಣೆ ನಡೆಯಬೇಕಿತ್ತು. ಫಿರೋಜ್‌ ಷಾ ಕೋಟ್ಲ ಕ್ರೀಡಾಂಗಣದಲ್ಲಿ ಕಪಿಲ್‌ ವಿಚಾರಣೆ ನಿಗದಿಯಾಗಿತ್ತು. ಆದರೆ ಇಬ್ಬರೂ ವಿಚಾರಣೆಯನ್ನು ಮುಂದೂಡುವಂತೆ ಮಾಧವನ್‌ ಅವರಲ್ಲಿ ಮನವಿ ಮಾಡಿದ್ದರಿಂದ ಈ ಬದಲಾವಣೆ ಉಂಟಾಗಿದೆ.

ಅಜಿತ್‌ ಹಾಗೂ ಕಪಿಲ್‌ ತಂಡದಲ್ಲಿದ್ದ ಅವಧಿಯಲ್ಲೇ ಮ್ಯಾಚ್‌ಫಿಕ್ಸಿಂಗ್‌ ಹಗರಣ ಗರಿ ಕೆದ-ರಿಕೊಂಡಿದ್ದು, ಇಬ್ಬರ ವಿಚಾರಣೆ ಮಹತ್ವದ್ದೆನಿಸಿದೆ. ಸಿಬಿಐನಿಂದ ನಿರಾರೋಪಿ ಎನಿಸಿಕೊಂಡಿರುವ ಕಪಿಲ್‌ ಅವರ ಮುಂದೆ ಈಗ ಮತ್ತೊಮ್ಮೆ ಪ್ರಶ್ನೆಗಳು ಹರಿಯಲಿವೆ. ಈ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ ನಂತರ ಮಾಧವನ್‌ ವರದಿಯಾಂದನ್ನು ಸಿದ್ಧಪಡಿಸಿ, ಬಿಸಿಸಿಐಗೆ ನೀಡಲಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+