ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ವೃತ್ತಿ ಬಾಂಧವರಿಂದ ವಿಶೇಷ ಗೌರವ ಹೊಂದುವ ದಿನ. ಹೋದಲೆಲ್ಲಾ ಈ ದಿನ ನೀವೇ ಕೇಂದ್ರ ಬಿಂದು. ಕುಟುಂಬದಲ್ಲೂ ಹರ್ಷದ ವಾತಾವರಣ.ವೃಷಭ : ಅಧ್ಯಾತ್ಮಕ ಬದುಕಿನತ್ತ ಹೆಚ್ಚು ವಾಲುತ್ತಿದ್ದೀರಿ. ಇಷ್ಟಕ್ಕೂ ನಿಮ್ಮದೇನು ಮಹಾ ವಯಸ್ಸು . ಅನುಭವಿಸಬೇಕಾದ ಸುವರ್ಣಾವಕಾಶಗಳು ಬಹಳಷ್ಟಿವೆ. ಅಂಥಾ ಮುನ್ಸೂಚನೆಯಾಂದನ್ನು ಸದ್ಯದಲ್ಲೇ ಕಾಣಲಿದ್ದೀರಿ.
ಮಿಥುನ : ಅವರನ್ನು ಅಗತ್ಯಕ್ಕಿಂತ ಹೆಚ್ಚು ಅವಲಂಬಿಸುತ್ತಿದ್ದೀರಿ. ಈ ಅವಲಂಬನೆ ಮುಂದೊಂದು ದಿನ ನಿಮಗೆ ಮುಜುಗರ ತಂದರೂ ತಂದೀತು. ಈ ಬಗ್ಗೆ ಇಂದೇ ಯೋಚಿಸಿ.
ಕಟಕ : ಪ್ರತಿಯಾಬ್ಬರೂ ತಪ್ಪುಗಳನ್ನು ಮಾಡುವವರೇ. ತಿದ್ದಿಕೊಂಡು ನಡೆದಾಗ ಹೊಸ ಬದುಕು, ಹೊಸ ಸಂಬಂಧಗಳು. ಧೃತಿಗೆಡಬೇಡಿ. ನಿಮ್ಮ ವೈವಾಹಿಕ ಸಂಬಂಧದ ಅಪಸ್ವರ ಕೆಲ ಹೊತ್ತು ಮಾತ್ರ.
ಸಿಂಹ : ಬೌದ್ಧಿಕ ವ್ಯಾಯಾಮಗಳತ್ತ ಹೆಚ್ಚಿನ ಗಮನ ಹರಿಸುವುದು ಒಳ್ಳೆಯದು. ಇದು ನಿಮ್ಮ ಭವಿಷ್ಯದ ಗುರಿ ತಲುಪಲು ಸಹಕಾರಿಯಾಗುತ್ತದೆ. ಉನ್ನತ ವ್ಯಾಸಂಗದಲ್ಲಿ ಅದೃಷ್ಟದ ದಿನ.
ಕನ್ಯಾ : ಹೊಸತರ ಸಾಕ್ಷಾತ್ಕಾರಕ್ಕಾಗಿ ನಿಮ್ಮ ಪ್ರಯತ್ನಗಳ ಗಡಿಯನ್ನು ವಿಸ್ತರಿಸಿಕೊಳ್ಳುವ ಕಾಲವಿದು. ವಿದೇಶೀ ನಿಲುವುಗಳಲ್ಲಿ ಚುರುಕು ಒಳದೃಷ್ಟಿಗಳಿರಲಿ.
ತುಲಾ : ನಿಮ್ಮ ಖಾಸಗಿ ಸಂಬಂಧಗಳ ಪ್ರಶ್ನೆಗಳಿಗೆ ಉತ್ತರಗಳು ಹತ್ತಿರದಲ್ಲೇ ಇವೆ. ಅವುಗಳನ್ನು ಒಪ್ಪಿಕೊಳ್ಳುವುದು ಕಷ್ಟವಾದರೂ ಸತ್ಯವನ್ನು ನಿರಾಕರಿಸುವುದು ಸಾಧ್ಯವಿಲ್ಲ ಅಲ್ಲವಾ?
ವೃಶ್ಚಿಕ : ಸಂತೋಷವನ್ನು ಹಂಚಿಕೊಳ್ಳುವ ಹುಮ್ಮಸ್ಸಿನಲ್ಲಿದ್ದೀರಿ. ಈ ಖುಷಿಯಲ್ಲಿ ಇಷ್ಟ ಪಾತ್ರರು ನಿಮ್ಮಿಂದ ಉಡುಗೊರೆ ಬಯಸುತ್ತಿದ್ದಾರೆ. ಅವರನ್ನು ನಿರಾಶೆ ಮಾಡಬೇಡಿ.
ಧನಸ್ಸು : ಮೇಲಧಿಕಾರಿಗಳಿಂದ ಕಿರಿಕಿರಿ. ಅಸೂಯೆಯಿಂದ ನೋಡುವ ಸಹೋದ್ಯೋಗಿಗಳಿಂದ ಈ ದಿನ ಮನಸ್ಸಿನ ನೆಮ್ಮದಿ ಹಾಳಾಗುವ ಸಾಧ್ಯತೆಯಿದೆ. ತಾಳ್ಮೆ ಕೆಡದಿರಿ.
ಮಕರ : ನಿಮ್ಮ ಆಳ ಭಾವನೆಗಳನ್ನು ಸದ್ಯಕ್ಕೆ ಅದುಮಿಟ್ಟಿಕೊಳ್ಳಿ. ಪರಿಸ್ಥಿತಿ ನಿಮಗೆ ಅನುಕೂಲಕರವಾಗಿಲ್ಲ . ಮನಸ್ಸಿನ ನೆಮ್ಮದಿಗೆ ಇಷ್ಟದೇವರನ್ನು ಪ್ರಾರ್ಥಿಸಿ.
ಕುಂಭ : ಎಲ್ಲವೂ ಸಲೀಸಾಗಿ ತಂತಾನೇ ಸರಿಯಾಗುತ್ತದೆ ಅಂದುಕೊಳ್ಳುತ್ತಿದ್ದೀರಿ. ನೀವು ಅದೃಷ್ಟವಂತರು. ಎಲ್ಲಾ ನಿಮ್ಮಿಷ್ಟದಂತೆಯೇ ನಡೆಯುತ್ತಿದೆ.
ಮೀನ : ಗೆಲುವನ್ನೇ ಸದಾ ಯೋಚಿಸುವ ನೀವು ಜವಾಬ್ದಾರಿಯನ್ನು ಮಾತ್ರ ಇತರರ ಮೇಲೆ ಹೊರಿಸುತ್ತೀರಿ. ಇದು ನಿಮ್ಮ ವ್ಯಕ್ತಿತ್ವಕ್ಕೆ ಶೋಭಿಸುವಂಥದ್ದೇನೂ ಅಲ್ಲ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications