ವಿಚಾರಣೆ ಮುಗಿಸಿ ಬಂದ ವಾಡೇಕರ್ ನಡುಗುತ್ತಿದ್ದರು
ನವದೆಹಲಿ : ಮೂರೂವರೆ ತಾಸು ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಅಧಿಕಾರಿ ಕೆ.ಮಾಧವನ್ ಅವರ ಮುಂದೆ ಸೋಮವಾರ ವಿಚಾರಣೆಗೊಳಗಾಗಿ ಹೊರ ಬಂದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಕೋಚ್ ವಾಡೇಕರ್ ಮುಖ ಆತಂಕ ಹೊತ್ತಿತ್ತು, ಮಾತುಗಳಲ್ಲೂ ಅಸ್ಪಷ್ಟತೆ. ಸುದ್ದಿಗಾರರೊಂದಿಗೆ ಅವರು ಮಾತಾಡಿದ್ದು ಹೀಗೆ....
‘ಮುಂಬೈ ಕ್ರಿಕೆಟ್ ಒಕ್ಕೂಟ (ಎಂಸಿಎ) ದ ಅಧ್ಯಕ್ಷಗಿರಿಗೆ ನಾನು ಸ್ಪರ್ಧಿಸುತ್ತಿದ್ದೇನೆ. ಪ್ರಚಾರ ಕಾರ್ಯದಲ್ಲಿ ತೊಡಗಿರುವ ನನಗೆ ಸದ್ಯಕ್ಕೆ ಪುರುಸೊತ್ತೇ ಇರಲಿಲ್ಲ. ಅಂಥಾದರಲ್ಲಿ ಬಿಸಿಸಿಐ ಯಾಕೆ ನನ್ನನ್ನು ಮತ್ತೆ ವಿಚಾರಣೆಗೆ ಕರೆಯಿತೋ ಗೊತ್ತಿಲ್ಲ. ಏನು ಹೇಳಬೇಕೋ ಎಲ್ಲಾ ಈ ಮೊದಲೇ ಹೇಳಿ ಬಿಟ್ಟಿದ್ದೇನೆ. ಹೇಳಲಿಕ್ಕೆ ಹೊಸದೇನೂ ಉಳಿದಿರಲಿಲ್ಲ’.
ನಿಮ್ಮ ಎಂಸಿಎ ಅಧ್ಯಕ್ಷಗಿರಿಗೆ ಈ ವಿಚಾರಣೆಯಿಂದ ಏನಾದರೂ ವ್ಯತಿರಿಕ್ತ ಪರಿಣಾಮ ಉಂಟಾಗುವುದೇ ಎಂಬ ಪ್ರಶ್ನೆಗೆ, ‘ಆಗಬಹುದು’ ಎಂದರು. ಸಿಬಿಐ ಕೇಳಿದ್ದ ಪ್ರಶ್ನೆಗಳನ್ನೇ ಮಾಧವನ್ ಮತ್ತೆ ಕೇಳಿದರೆ ಎಂಬ ಪ್ರಶ್ನೆಗೆ, ‘ನೋ ಕಾಮೆಂಟ್ಸ್’ ಎಂಬ ಉತ್ತರ ಕೊಟ್ಟರು. ಒಂದು ರೀತಿ ವಿಚಿತ್ರವಾಗಿ ಕಂಪಿಸುತ್ತಿದ್ದ ವಾಡೇಕರ್ ಗದ್ಗದಿತರಾಗಿದ್ದರು.
ವಿಚಾರಣೆ ನಡೆಸಿದ ಮಾಧವನ್, ‘ವಾಡೇಕರ್ ಉತ್ತಮ ಸಹಕಾರ ಕೊಟ್ಟರು. ಕೇಳಿದೆಲ್ಲಾ ಪ್ರಶ್ನೆಗಳಿಗೂ ಸೂಕ್ತ ಉತ್ತರ ಕೊಟ್ಟರು. ಕಪಿಲ್ ಹಾಗೂ ನಿಖಿಲ್ ಚೋಪ್ರಾ ಮೇಲೆ ಮ್ಯಾಚ್‌ಫಿಕ್ಸಿಂಗ್ ಆರೋಪದ ಮಾತುಗಳು ಕೇಳಿ ಬರುತ್ತಿದ್ದರಿಂದ ಬಿಸಿಸಿಐ ವಾಡೇಕರ್ ಹಾಗೂ ಕಪಿಲ್ ವಿಚಾರಣೆ ನಡೆಸುವಂತೆ ನನಗೆ ಹೇಳಿದೆ. ಯಾಕೆಂದರೆ ವಾಡೇಕರ್ ಪಾರುಪತ್ಯದಲ್ಲಿ ಈ ಆಟಗಾರರು ತಂಡದಲ್ಲಿ ಆಡಿದ್ದಾರೆ. ವಾಡೇಕರ್ ವಿಚಾರಣೆಯನ್ನು ಮುದ್ರಿಸಿಕೊಂಡಿದ್ದೇವೆ. ಆದರೆ ಅದರ ಒಂದೂ ತುಣುಕನ್ನು ನಿಮಗೆ ತೋರಿಸಲಾಗದು’ ಎಂದರು.
(ಯುಎನ್‌ಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications