ಪ್ರತಿಭಟನೆ : ವಿಜಾಪುರದಲ್ಲಿ ಒಂದು ಟೆಂಪೋ ಟೊಮೊಟೋ ರಸ್ತೆಗೆ
ವಿಜಾಪುರ : ಇದುವರೆಗೂ ಭತ್ತ- ಜೋಳ ಬೆಳೆದ ರೈತ ರಸ್ತೆಗಿಳಿದಿದ್ದಾಯಿತು. ಈಗ ಟೊಮೊಟೋ ಬೆಳೆದವರ ಪಾಡೂ ಅದೇ ಆಗಿದ್ದು, ಹತ್ತಿರಾಗುತ್ತಿರುವ ಸುಗ್ಗಿಯ ದಿನಗಳ ಸವಿ ರೈತನಿಗೇ ಎಳ್ಳಷ್ಟೂ ಸಿಗದಂತಾಗಿದೆ.
ಜಿಲ್ಲೆಯ ಮದಭಾವಿ, ಐನಾಪುರ, ಬುರಣಾಪುರ, ಇಂಚಗೇರಿ, ಅಲಿಯಾಬಾದ್‌ಗಳಿಂದ ಟೊಮೊಟೋ ಬೆಳೆದು ಕೃಷಿ ಮಾರುಕಟ್ಟೆಗೆ ತರುವ ರೈತನಿಗೆ ಒಂದು ಬೀಡಿಗಾಗುವಷ್ಟೂ ಲಾಭ ಸಿಗುತ್ತಿಲ್ಲ. ಕಳೆದೊಂದು ತಿಂಗಳ ಈ ಸಮಸ್ಯೆ ಭಾನುವಾರ ಮದಭಾವಿಯ ರೈತರನ್ನು ರೊಚ್ಚಿಗೆಬ್ಬಿಸಿದೆ. ಒಂದು ಟೆಂಪೋ ತುಂಬಾ ತುಂಬಿ ತಂದ ಟೊಮೊಟೋಗಳನ್ನೆಲ್ಲಾ ರಸ್ತೆಗೆ ಸುರಿದು, ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಪ್ರತಿಭಟನೆ ಸೂಚಿಸಿದ್ದಾರೆ.
ಹತ್ತು ಕಿಲೋ ಟೊಮೊಟೊ ಮಂಕರಿ ಕಳೆದೊಂದು ತಿಂಗಳಿಂದ 3 ರಿಂದ 4 ರುಪಾಯಿಗೆ ಬಿಕರಿಯಾಗುತ್ತಿದೆ. ಬೆಳೆದೂರಿಂದ ಮಾರುಕಟ್ಟೆಗೆ ಟೆಂಪೋ ಹತ್ತಿದರೆ, ಟೆಂಪೋದವ ಒಂದು ಮಂಕರಿ ಟೊಮೊಟೋಗೆ 3.50 ರುಪಾಯಿ ವಸೂಲು ಮಾಡುತ್ತಾನೆ. ಟೆಂಪೋದಿಂದ ಮಾಲನ್ನು ಇಳಿಸುವವನಿಗೆ ಒಂದು ಮಂಕರಿಗೆ 50 ಪೈಸೆ ಕೊಡಬೇಕು. ಅಲ್ಲಿಗೆ ರೈತ ಬಂದ ದಾರಿಗೆ ಸುಂಕವಿಲ್ಲ.
ಈಗ ಹತಾಶೆ ಪರಾಕಾಷ್ಠೆಗೆ ತಲುಪಿದೆ. ರೈತರು ಟೊಮೊಟೋವನ್ನು ತಿಪ್ಪೆಗೆ ಬಿಸುಟಿದ್ದಾರೆ. ಮೋರಿಗೆ ಚೆಲ್ಲಿದ್ದಾರೆ. ಪ್ರತಿಭಟನೆಯ ಸಂಕೇತವಾಗಿ ಒಂದು ಟೆಂಪೋ ಟೊಮೊಟೋವನ್ನು ಎಪಿಎಂಸಿ ಯಾರ್ಡ್‌ನಲ್ಲಿ ರಸ್ತೆಗೆ ಸುರಿದಿದ್ದಾರೆ. ಸರ್ಕಾರದ ಮಂದಿ ಬಂದು ತಮಗೆ ನ್ಯಾಯ ಕೊಡಿಸಲಿ ಎಂಬುದೇ ಈ ರೈತರ ಅಳಲು. ಅದಕ್ಕಾಗಿ ಇದಿರು ನೋಡುತ್ತಲೇ ನಿಂತಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications